ಬಾಂಬೆ ಡೇಸ್ ರಿಲೀಸ್ ಮಾಡ್ಬೇಡಿ ಅಂತಾ ಹಳಿಹಕ್ಕಿ ನಾ ರಿಕ್ವೆಸ್ಟ್ ಮಾಡುದ್ರಂತೆ ಬ್ಲೂ ಬಾಯ್ಸ್
Team Udayavani, Mar 20, 2022, 10:49 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಎಲ್‌ಗೋಗುಮಾ ಸಾ.. ಅಸೆಂಬ್ಲಿ ಸೆಸನ್ ನಡೀತೈತಲ್ವೇ ವಸಿ ನೋಡ್‌ಕಂಡ್ ಬರೂಮಾ ಅಂತಾ ಒಂಟೋಗಿದ್ನಿ
ಚೇರ್ಮನ್ರು: ಏನ್ಲಾ ಅಸೆಂಬ್ಲಿ ಸೆಸನ್ ಇಸೇಸಾ
ಅಮಾಸೆ: ಫೈವ್ ಸ್ಟೇಟ್ ಎಲೆಕ್ಸನ್ ರಿಸಲ್ಟ್ ಬಂದ್ಮೇಕೆ ಎಲ್ರೂ ಸೈಲಂಟ್ ಆಗೋಗವ್ರೆ
ಚೇರ್ಮನ್ರು: ಅದ್ಯಾಕ್ಲಾ
ಅಮಾಸೆ: ಕೈ ಪಾಲ್ಟಿನೋರ್ಗೆ ಶಾಕ್ ಆಗೋಗೈತೆ. ಇಂಗೇ ಆಗ್ಬೇಕಿತ್ತು ಅಂತಾ ತೆನೆ ಹೈಕ್ಳು ಕಣ್ ಮಿಟಿಕ್ಸ್‌ತಾವ್ರೆ. ಕಮ್ಲ ಪಾಲ್ಟಿನಾಗೆ ಮೋದಿ ಪವರ್‌ಫುಲ್ ಆಗೋಗವ್ರೆ ಇನ್ಮೆಕೆ ಯಾರೂ ಕಮಕ್ ಕಿಮಕ್ ಅನ್ನಂಗಿಲ್ಲ. ಸಿವಾ ನೀನ್ ಮಡಿಗ್‌ದಂಗ್ ಇರು ಅಂತಾ ಇರ್ಬೇಕ್ ಅಂತಾ
ಚೇರ್ಮನ್ರು: ಆದ್ರೂ ಎಲ್ರೂ ಫುಲ್ ಜೋಶ್‌ನಾಗೆ ಇದ್ರಲ್ಲಾ
ಅಮಾಸೆ: ನೋಡಕ್ ಅಂಗ್ ಅವ್ರೆ ಒಳ್ ಒಳ್ಗೆ ಯಾರ್ಗ್ ಮಾಂಜಾ ಕೊಡ್ತಾರೋ ಅನ್ನೋ ಟೆನ್‌ಸನ್‌ನಾಗವ್ರೆ. ಮೊದ್ಲು ನಮ್ದೂ ಮಿನಿಸ್ಟ್ರೆ ಕೊಡ್ಬೇಕ್ ಅಂತಿದ್ರು. ಇವಾಗ್ ಕೇಳುದ್ರೆ ಪಾಲ್ಟಿ ಡಿಸಿಸನ್ ಎಂಗೇಳಿದ್ರೆ ಅಂಗೆ ಅಂತಾ ತಂಡಾ ಆಗವ್ರೆ. ಬಾಲಾ ಬಿಚ್ಚುದ್ರೆ ನೆಕ್ಸ್ಟ್ ಎಲೆಕ್ಸನ್‌ಗೆ ಟಿಕೆಟ್ ಕೊಡ್ತಾರೋ ಇಲ್ವೋ ಅನ್ನೋ ದಿಗ್ಲು ಎಲ್ರುಕೂ ಬಂದೈತೆ.
ಚೇರ್ಮನ್ರು: ಅದ್ಯಾಕ್ಲಾ
ಅಮಾಸೆ: ಸೀನಿಯರ್ನಾ ಪಾಲ್ಟಿ ವರ್ಕ್ ಮಾಡ್ಸಿ ಯಂಗ್ ಟರ್ಕ್ ಕ್ಯಾಬಿನೆಟ್ ಸೇರ್ಲಿ ಅಂತಾ ಇನ್ನರ್ ಡಿಸ್ಕಸ್ ಆಗೈತಂತೆ. ಸೋಬಕ್ನೋರು ಉತ್ರಪ್ರದೇಸ್‌ನಾಗೆ ಕ್ಲಿಕ್ ಆದ್ಮೇಕೆ ನ್ಯೂ ಮ್ಯಾಟ್ರಾ ಡೆಲ್ಲಿನಾಗ್ ಓಡಾಡ್ತೈತೆ
ಚೇರ್ಮನ್ರು: ಯಡ್ನೂರಪ್ನೋರು ಏನಂತಾರ್ಲಾ.
ಅಮಾಸೆ: ಒನ್ ನೇಷನ್ ಒನ್ ಟಿಕೆಟ್ ಅಂತಾ ಮೋದಿ ಸಾಹೇಬ್ರು ಹೇಳಿದ್ಮೇಕೆ ಡಲ್ ಆಗೋಗವ್ರೆ. ಆದ್ರೂ ಮೈ ಸನ್ ವಿಜಯೇಂದ್ರ ಬಾಹುಬಲಿ ಮಿನಿಸ್ಟ್ರೆ ಆಗ್‌ಬೇಕ್ ಅಂತಾ ಒನ್ ಪಾಯಿಂಟ್ ಪ್ರೋಗ್ರಾಂ ಅಂತೆ. ಅದ್ಕೆ ವಿಜಯೇಂದ್ರಣ್ಣೋರು ನಡ್ಡಾ ಜತೆ ಸೈಲಂಟಾಗೆ ಮೀಟ್ ಮಾಡ್ಕಂಡ್ ಬಂದವ್ರಂತೆ. ಆದ್ರೆ ಇನ್ನೂ ನೋ ಔಟ್‌ಕಮ್.
ಚೇರ್ಮನ್ರು: ಬುದ್ವಂತ ಬಸಣ್ಣೋರು ಏನ್ ಹೇಳ್ತಾರೆ
ಅಮಾಸೆ: ಫೈವ್ ಸ್ಟೇಟ್ ಎಲೆಕ್ಸನ್ ರಿಸಲ್ಟ್ಗೆ ಫುಲ್ ಖುಸ್ ಆಗವ್ರೆ. ಕಾಶ್ಮೀರ್ ಫೈಲ್ಸ್‌ಗೂ ಜೈ, ಭಗವದ್ಗೀತೆಗೂ ಡಬಲ್ ಜೈ ಅಂದ್ರೆ ನೆಕ್ಸ್ಟ್ ನಮ್ದೇ ಹವಾ ಅಂತಾ ಜೋಶ್ ನಾಗೆ ಅವ್ರೆ. ಆದ್ರೆ, ಸಿಎಂ ಚೇಂಜ್, ಕ್ಯಾಬಿನೆಟ್ ಫುಲ್ ರೀಸಪಲ್ ಅಂತಾ ಪಸರ್ ಐತೆ ಅಂತಾ ಸೀನಿಯರ್ ಮಿನಿಸ್ಟ್ರೆಗ್ಳು ಸೀಕ್ರೆಟ್‌ನಾಗೆ ಹೇಳ್ತಾವ್ರೆ
ಚೇರ್ಮನ್ರು: ಅದ್ ಇದ್ದಿದ್ದೇ ಬುಡ್ಲಾ
ಅಮಾಸೆ: ಹೌದೇಳಿ, ಯಾವ್ದೂ ಆಗ್ಲಿಲ್ಲ. ಆದ್ರೂ ಯತ್ನಾಳ್ ಅವ್ರು ಉಗಾದಿ ಆದ್ಮೇಕೆ ನೋಡುರ್ದಾ ಅಂತಾ ನ್ಯೂ ಸಿನ್ಮಾ ತೊರಿಸ್ತಾವ್ರೆ.
ಚೇರ್ಮನ್ರು: ಅಸೆಂಬ್ಲಿನಾಗೆ ಸಿದ್ರಾಮಣ್ಣೋರು, ಕುಮಾರಣ್ಣೋರು ಯಾಕ್ಲಾ ಡಿಶುಂ ಡಿಶುಂ ಮಾಡಿದ್ರು.
ಅಮಾಸೆ: ಅದು ಮ್ಯಾಟ್ರಾ ಸಿವ್‌ಕುಮಾರಣ್ಣೋರ್ಧು ಆದ್ರೂ ಅಸೆಂಬ್ಲಿನಾಗೆ ಬಬ್ರುವಾನ ಸ್ಟೈಲ್‌ನಾಗೆ ಅಬ್ರ ಸಿದ್ರು. ಕಮ್ಲ ಪಾಲ್ಟಿನೋರು ಮಜಾ ತಕ್ಕಂಡ್ರು. ಬುದ್ವಂತ ಬಸಣ್ಣೋರು ಎಂಡಿಂಗ್ ಟಚ್ ಕೊಟ್ಟು ಸೈಲಂಟಾದ್ರು
ಚೇರ್ಮನ್ರು: ರೇವಣ್ಣೋರು ಯಾವ್ ಟೇಂ ಆದ್ರೂ ನಮ್ದೇ ಸೈ ಅಂದ್ರಂತೆ ಯಾಕ್ಲಾ
ಅಮಾಸೆ: ಹೈನೋರ್ ತಾವಾ ತಾಯ್ತ ಕಟ್‌ಸ್ಕಂಡ್‌ಮ್ಯಾಗೆ ಆಲ್ ಟೈಂ ಫವರ್‌ಫುಲ್ ಅಂತಾ ಹೇಳವ್ರಂತೆ. ಅದ್ಕೆ ನಮ್ ರೂಟೇ ಬ್ಯಾರೆ ಅಂತಾ ಅಸೆಂಬ್ಲಿನಾಗೆ ಸಾಮ್ರಾಟ್ ಅಸೋಕಣ್ಣೋರ್ಗೆ ಹಲ್ವಾ ಕೊಟ್ರಾ
ಚೇರ್ಮನ್ರು: ಇಬ್ರಾಹಿಂ ಸಾಹೇಬ್ರು ಅನೌನ್ಸ್ ಮಾಡಿದ್ರಾ
ಅಮಾಸೆ: ಮಾಡೇ ಬುಟ್ರಾ ತೆನೆ ಪಾಲ್ಟಿಗೋಯ್ತೀನಿ, ಕೈ ಪಾಲ್ಟಿ ಬುಡ್ತೀನಿ, ಕೌನ್ಸಿಲ್ ಮೆಂಬ್ರುಸಿಪ್‌ಗೂ ಟಾಟಾ ಬಾಯ್ ಬಾಯ್ ಅಂತಾ ಸೋನಿಯಾ ಮೇಡಂಗೆ ಡೈರೆಕ್ಟ್ ಮೇಲ್ ಕಳ್ಸವ್ರೆ
ಚೇರ್ಮನ್ರು: ಅಂಗಾರೆ ತೆನೆ ಪಾಲ್ಟಿನಾಗೆ ಇಮ್ಮೇಲೆ ಸೆಂಟ್ ಘಮ್ಲು, ಭಾಷ್ಣ ಜುಮ್ಲು.
ಅಮಾಸೆ: ಹೌದೇಳಿ, ಲಾಳಾ ಸಾಬಿ ಅಂದ್ಕೊಬ್ಯಾಡಿ ನನ್ ಖದ್ರೇ ಬ್ಯಾರೆ ಅಂತಾ ಎಂಟ್ರಿ ಕೊಡ್ತಾರಂತೆ ಇಬ್ರಾಹಿಂ ಸಾಬ್ರು.
ಚೇರ್ಮನ್ರು: ಸಿದ್ರಾಮಣ್ಣೋರು ಏನೂ ಹೇಳಿಲ್ವಾ
ಅಮಾಸೆ: ಇಬ್ರಾಹಿಮ್ಮು ಮೊದ್ಲಿಂದ್ಲೂ ನನ್ ಬಿರ್ಯಾನಿ ಫ್ರೆಂಡ್ ಅಂದ್ರು. ಅಸೆಂಬ್ಲಿ ಲಾಂಜ್‌ನಾಗೆ ಏನಯ್ನಾ ನಾ ಮನೆತಂಕಾ ಬತ್ತೀನಿ ಅಂತಾ ಹೇಳಿಲ್ವಾ, ಬರೋಗಂಟಾ ಸುಮ್ಕಿರು, ಏನೂ ಡಿಸಿಸನ್ ತಕ್ಕೋಬ್ಯಾಡಾ ಅಂದ್ರು. ಟು ಡೇಸ್ ಬಿಫೋರ್
ಜಮೀರಣ್ಣೋರು ಇಬ್ರಾಹಿಂ ಸಾಬ್ರು ಮನ್ಗೆ ವಿಸಿಟ್ ಮಾಡವ್ರೆ
ಚೇರ್ಮನ್ರು: ತೆನೆ ಪಾಲ್ಟಿನಾಗೆ ಇಬ್ರಾಹಿಮ್ಮು ಸಾಬ್ರು ಏನಾಗ್ತಾರೆ
ಅಮಾಸೆ: ಇಸ್ಟೇಟ್ ಪ್ರಸಿಡೆಂಟ್ ಮಾಡ್‌ಬುಟ್ಟು ಒಂದ್ ಫ್ಲೈಟ್ ಕೊಟ್‌ಬುಟ್ಟು ಟ್ರಾವೆಲ್ ಎಕ್ಸ್‌ಪೆನ್ಸಸ್ ಕೊಟ್ ಬುಡಿ ಊರೆಲ್ಲಾ ಟಾಂ ಟಾಂ ಹೊಡ್ಕಂಡ್ ಬಂದ್ ಬುಡ್ತೀನಿ ಅಂತಾ ಹೇಳವ್ರಂತೆ. ಆಯ್ತು ಮೊದ್ಲು ನೀವ್ ಬಂದ್ ಸೇರ್ಕಳಿ ಅಂತಾ ದೊಡ್‌ಗೌಡ್ರು ಹೇಳವ್ರಂತೆ. ನೋಡುಮಾ ಏನೇನಾನಯ್ತದೋ ನನ್ ಹೆಂಡ್ರು ಕೈಮಾತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ…
ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.