ಅಂದ್ರಗಿನಾ ಇನ್ನೊಂದ್‌ಕಿತಾ ಸಿದ್ರಾಮಣ್ಣೋರೂ ಗುಡಾ ಸಿಎಮ್ ಆಗ್ಲೀ…
Team Udayavani, Aug 21, 2022, 11:14 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ
ಅಮಾಸೆ: ಎಲ್‌ಗೋಗುಮಾ ಸಾ…. ನಮ್ ರಾಜಾಹುಲಿ ಯಡ್ನೂರಪ್ನೋರು ಇವಾಗ್ ನ್ಯಾಷನಲ್ ಲೀಡ್ರು ಆಗವ್ರೆ ಅಂತಾ ವಿಸ್ ಮಾಡ್ಕಂಡ್ ಬರೂಮಾ ಅಂತಾ ಒಂಟೋಗಿದ್ನಿ
ಚೇರ್ಮನ್ರು: ಯಡ್ನೂರಪ್ನೋರು ಸಿಕ್ಕಿದ್ರಾ
ಅಮಾಸೆ: ಇಲ್ ಕಣೇಳಿ, ಬುದ್ವಂತ ಬಸಣ್ಣೋರು ಜತ್ಗೆ ತಿಮ್ಮಪ್ಪನೋರ್ ದರ್ಸನ್‌ಕ್ ಒಂಟೋಗಿದ್ರು
ಚೇರ್ಮನ್ರು: ಅದೇನ್ಲಾ ಇಸೇಸಾ
ಅಮಾಸೆ: ನ್ಯಾಷನಲ್ ಲೆವೆಲ್‌ಗೆ ಪ್ರಮೋಸನ್ ಸಿಕ್ತಲ್ವೇ ಅದ್ಕೆ ಸಾಮ್ರಾಟ್ ಆಸೋಕಣ್ಣೋರು, ಯಲಹಂಕಾಪತಿ ವಿಸ್ವನಾಥಣ್ಣೋರು ಒಂದಪಾ ದೇವ್ರ ದರ್ಶನಾ ಮಾಡ್ಕಂಡ್ ಬರೂಮಾ ಸಾರ್ ಅಂದ್ರಂತೆ ಅದ್ಕೆ ಒಂಟೋದ್ರಂತೆ
ಚೇರ್ಮನ್ರು: ಯಡ್ನೂರಪ್ನೋರ್‍ನಾ ಸ್ಟೇಟ್‌ನಿಂದ ಖಾಲಿ ಮಾಡ್ಸವ್ರೆ ಅಂತಾ ಕಾಂಗ್ರೆಸ್‌ನೋರು ಹೇಳ್ತಾವ್ರೆ
ಅಮಾಸೆ: ಹೌದೇಳಿ, ಅಂಗಂತಾ ಕಿಂಡಲ್ ಮಾಡ್ತಾವ್ರೆ. ಜತ್ಗೆ ನೆಕ್ಸ್ಟ್ ಸಿಎಂ ಯಡ್ನೂರಪ್ನೋರು ಇಲ್ವೇ ನೆಕ್ಸ್ಟ್ ಡಿಸಿಎಂ ವಿಜಯೇಂದ್ರ ಬಾಹುಬಲಿ ಅಂತಾ ಅನೌನ್ಸ್ ಮಾಡ್ರಪ್ಪಾ ನೋಡುಮಾ ಅಂತಾನೂ ಮಾಂಜಾ ಕೊಟ್ಟವ್ರೆ.
ಚೇರ್ಮನ್ರು: ಪ್ರೈಮ್ ಮಿನಿಸ್ಟ್ರೆ, ತುಮ್ ತ್ರಿ ಸ್ಟೇಟ್ಸ್‌ಪೆ ಟೂರ್ ಕರೋ, ತೆಲಂಗಾಣಾ ಕೆಸಿಆರ್, ಆಂಧ್ರಾ ಜಗನ್, ತಮಿಳ್ ನಾಡ್ ಸ್ಟಾಲಿನ್‌ಕೋ ಟಕ್ಕರ್‌ದೋ ಅಂತಾ ಹೇಳವ್ರಂತೆ ಹೌದೇನ್ಲಾ?
ಅಮಾಸೆ: ಅಂಗಂತಾ ಪಸರ್ ಐತೆ. ರಾಜಾಹುಲಿ ಒನ್ಲಿ ಕನ್ನಡ, ಮ್ಯಾನೇಜಬಲ್ ಇಂಗ್ಲೀಷ್. ಅಲ್ಲೆಲ್ಲಾ ಹೋದ್ರೆ ಏಮಿ ಬ್ರದರ್, ಎನ್ನಾ ತಲೈವಾ ಅಂತಾ ಮಾತಾಡೋಕೆ ಇನ್ನೊಬ್ರನ್ನಾ ಮಡಿಕೋಬೇಕಾಯ್ತದೆ
ಚೇರ್ಮನ್ರು: ನ್ಯಾಷನಲ್ ಪಾರ್ಲಿಮೆಂಟ್ ಬೋರ್ಡ್ ನಾಗೂ ಹಿಂದಿವಾಲಾಗ್ಲೇ ಜಾಸ್ತಿ ಅಲ್ವೇನ್ಲಾ
ಅಮಾಸೆ: ಎಲ್ರೂ ಅವ್ರೇಯಾ, ನಮ್ ಸಂತೋಷ್‌ಜೀ ಜತ್ಗೆ ಇರ್ತಾರೆ ಎಂಗೋ ಮ್ಯಾನೇಜ್ ಆಯ್ತದೆ ಬುಡ್ರಿ ಅಂತಾ ಬಿಜೆಪಿ ಹೈಕ್ಳು ಕಣ್‌ಮಿಟಿಕ್ಸ್‌ತಾವ್ರೆ
ಚೇರ್ಮನ್ರು: ಸಿದ್ರಾಮಣೋರ್ ಮ್ಯಾಗೆ ಯಾಕ್ಲಾ ಮೊಟ್ಟೇನಾ ಎಸುದ್ರು
ಅಮಾಸೆ: ಸಾವರ್ಕರ್ ಫ್ರೀಡಂ ಫೈಟ್ ಮಾಡಿಲ್ಲ ಅಂತೇಳಿದ್ದಿಕ್ಕೆ ಕ್ವಾಪಾ ಮಾಡ್ಕಂಡು ಗೋ ಬ್ಯಾಕ್ ಅಂದ್ರಂತೆ
ಚೇರ್ಮನ್ರು: ಅದ್ಕೆ ಸಿದ್ರಾಮಣ್ಣೋರು ಸುಮ್ಕಿದ್ರಾ
ಅಮಾಸೆ: ಅವ್ರು ಸುಮ್ಕಿರೋ ಆಸಾಮಿನಾ. ಓನ್ಲಿ ಸಿಕ್ಸ್ ಮಂತ್ಸ್, ನೆಕ್ಸ್ಟ್ ಕಿತಾ ನಾವೇ ಪವರ್‌ಗೆ ಬತ್ತೀವಿ, ಬಿಜೆಪಿಯೋರು ಗೂಟಾ ಒಡ್ಕಂಡ್ ಇರಲ್ಲಾ, ಟ್ವೆಂಟಿ ಸಿಕ್ಸ್ ಬತ್ತೀನಿ ಬಸ್ತೀಮೆ ಸವಾಲ್ ಅಂತಾ ಹೇಳಿ ಬಂದವ್ರೆ
ಚೇರ್ಮನ್ರು: ನಮ್ ರೇವಣ್ಣೋರು ಎಲ್‌ಗೋದ್ರುಲಾ ಕಾಣ್ತಿಲ್ಲ
ಅಮಾಸೆ: ಶ್ರಾವಣಾ ಅಲ್ವೆ, ಡೈಲಿ ಒನ್ ಟೆಂಪಲ್ ರನ್, ವೀಕ್ಲಿ ಒನ್ ಪೂಜಾ ಮಾಡ್ತಾವ್ರೆ. ಹಾಸ್ನದಾಗೆ ಪ್ರೀತಂಗೌಡ್ರು ಮ್ಯಾಗೇ ಗುನ್ನಾ ಇಡೋ ಪಿಲಾನ್ ಮಾಡ್ತಾವ್ರೆ.
ಚೇರ್ಮನ್ರು: ಅದ್ಯಾಕ್ಲಾ ಸೀರಾಮ್ಲು ಸಿದ್ರಾಮಣ್ಣೋರು ಇನ್ನೊಂದಪಾ ಸಿಎಂ ಆಗ್ಲಿ ಅಂದ್ರಂತೆ
ಅಮಾಸೆ: ಲಂಗ್‌ಗೂ ಟಂಗ್‌ಗೂ ಯತ್ಯಾಸ ಆಗೋಗಿ ಇಬ್ರುದೂ ಇನ್ನರ್ ಅಡ್ಜಸ್ಟ್‌ಮೆಂಟ್ ಬಯಲಾಗೋಯ್ತು ಅಂತಾ ಹೇಳ್ತಾವ್ರೆ
ಚೇರ್ಮನ್ರು: ಸಿದ್ರಾಮಣ್ಣೋರ್ ಮ್ಯಾಗೆ ಯಾರ್ಲಾ ಎಗ್ ಎಸೆದೋರು
ಅಮಾಸೆ: ಕೈ ವರ್ಕರ್ ಎಣ್ಣೆ ಏಟ್‌ನಾಗೆ ಆಮ್ಲೆಟ್ ಮಾಡ್ಕಳಿ ಅಂತೇಳಿ ಹಾಕವ್ರೆ ಅಂತಾ ಕಮ್ಲ ಪಾಲ್ಟಿಯೋರು ಹೇಳ್ತಾವ್ರೆ. ಆದರೆ, ಕೈ ಪಾಲ್ಟಿಯೋರು ಆವ್ನು ನಮ್ ವರ್ಕರ್ ಅಲ್ಲೇಳಿ, ವಸಿ ಟೋಕನ್ ಒಡ್ದು ಅಂಗಂತೇಳಿಸ್ತಾವ್ರೆ ಅಂದವ್ರೆ
ಚೇರ್ಮನ್ರು: ಕ್ಯಾಬಿನೆಟ್ ರೀಸಪಲ್ ಆಯ್ತದಾ
ಅಮಾಸೆ: ಅಮಿತ್ ಸಾ ಸಾಹೇಬ್ರು ಪರ್ಮಿಸನ್ ಕೊಟ್ರೆ ಆಯ್ತದೆ. ರಾಜಾಹುಲಿನೂ ಅದೇ ಹೇಳವ್ರಂತೆ. ಬುದ್ವಂತ ಬಸಣ್ಣೋರು ಲಿಸ್ಟ್ ರೆಡಿ ಮಾಡವ್ರೆ. ಡೆಲ್ಲಿ ಮೆಸೇಜ್ ಬಂದೇಟ್ಗೆ ಹೋಯ್ತಾರಂತೆ.
ಚೇರ್ಮನ್ರು: ಕಮ್ಲ ಸ್ಟೇಟ್ ಪ್ರಸಿಡೆಂಟ್ ಹೊಸಬ್ರು ಬತ್ತಾರೇನ್ಲಾ
ಅಮಾಸೆ: ಕಟೀಲಣ್ಣೋರು ಟರ್ಮ್ ಪಿನಿಸ್ ಆಗೈತಂತೆ. ಅದ್ಕೆ ಚಾರ್ಮ್ಫುಲ್ ಪ್ರಸಿಡೆಂಟ್ ಸರ್ಚಿಂಗ್ ಅಂತೆ. ಸುನಿಲಣ್ಣೋರು, ಸಿಟಿ ರವಿಯಣ್ಣೋರು, ಸೋಬಕ್ಕೋರು, ಲಿಂಬಾವ್ಲಿ ಅಣ್ಣೋರು ಕ್ಯೂ ನಾಗೆ ಅವ್ರೆ
ಚೇರ್ಮನ್ರು: ಈ ಕಿತಾ ಯಾರ್ ಸ್ಟೇಟ್ ಪ್ರಸಿಡೆಂಟ್ ಆಯ್ತರೆ ಅವ್ರೆ ನೆಕ್ಟ್ ಸಿಎಂ ಅಂತೇ ಹೌದೇನ್ಲಾ
ಅಮಾಸೆ: ಅಂಗಂತಾ ಹಾಮಿ ಕೊಟ್ಟವ್ರಂತೆ. ನೀವ್ ಏನಾರಾ ಮಾಡ್ಕಳಿ ಮೈ ಸನ್ ವಿಜಯೇಂದ್ರ ಬಾಹುಬಲಿ ಡಿಸಿಎಂ ಆಗ್ಬೇಕು, ಅನದರ್ ಸನ್ ಸೆಂಟ್ರಲ್‌ನಾಗೆ ಮಿನಿಸ್ಟ್ರೆ ಆಗ್ಬೇಕು ಅಂತಾ ರಾಜಾಹುಲಿ ಕಂಡೀಸನ್ ಹಾಕವ್ರಂತೆ. ಏನೇನಾಯ್ತದೋ ನೋಡುಮಾ. ನನ್ ಹೆಂಡ್ರು ತಲೆಮಾಂಸಾ ತತ್ತಾ ಅಂದೇಳವ್ಲೆ ಬತ್ತೀನಿ ಸಾ…
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Rajasthan: ಚುನಾವಣ ಅಧಿಕಾರಿ ಮೇಲೆ ಹಲ್ಲೆ; ಪ್ರತಿಭಟನೆ ನಡುವೆ ನರೇಶ್ ಮೀನಾ ಬಂಧನ!
Constitution: ಪ್ರಧಾನಿ ಸಂವಿಧಾನ ಓದಿಲ್ಲ, ಇದಕ್ಕೆ ನಾನು ಗ್ಯಾರಂಟಿ: ರಾಹುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.