ಸಿದ್ರಾಮಣ್ಣೋರ್ ಫೈವ್ ಗ್ಯಾರಂಟಿ ಕೊಟ್‌ಮ್ಯಾಕೆ ಲೈಫ್ ಈಸ್ ಜಿಂಗಾಲಾಲಾ…
Team Udayavani, Jun 4, 2023, 10:48 AM IST
ಅಮಾಸೆ: ನಮ್‌ಸ್ಕಾರ ಸಾ…
ಚೇರ್ಮನ್ರು: ಏನ್ಲಾ ಅಮಾಸೆ ಎಲ್‌ಗ್ಲಾ ಒಂಟೋಗಿದ್ದೆ ಶ್ಯಾನೆ ದಿನಾ ಆಯ್ತು ಮುಕ್ ದರ್ಸನಾ ಆಗ್ಲಿಲ್ಲಾ.
ಅಮಾಸೆ: ಎಲೆಕ್ಸನ್ ರಿಸಲ್ಟ್ ಬಂದ್ ಮ್ಯಾಕೆ ದಿಲ್ಲಿಗಂಟಾ ಹೋಗ್ ಬುಟ್ಟು ಸಿದ್ರಾಮಣ್ಣೋರು-ಸಿವ್ ಕುಮಾರಣ್ಣೋರ್ಗೆ ಪರಮಾಣವಚನ ಸ್ವೀಕಾರಾ ಮಾಡ್ಸ್ ಬುಟ್ಟೇ ನಾ ಇತ್ಲಾಗ್ ಬಂದಿದ್ದೇಳಿ.
ಚೇರ್ಮನ್ರು: ಆದ್ರೂ ಬುಡ್ಲಾ ಕಮ್ಲ ಪಾಲ್ಟಿವೋರು ನಮ್ದೇ ನಾವೇ ಅಂತಿದ್ರು ಕೈ ಪಾಲ್ಟಿನೋರು ಎಲ್ರೂಗೂ ಏಕ್‌ದಂ ಮಾಸ್ಟ್ರೆ ಸ್ಟ್ರೋಕ್ ಕೊಟ್‌ಬುಟ್ರು.
ಅಮಾಸೆ: ಹೌದೇಳಿ, ಕೈ ಪಾಲ್ಟಿನೋರ್ಗೆ ಇಟೊಂದ್ ಸೀಟ್ ಬತ್ತದೆ ಅಂತಾ ಐಡೀರಿಯಾ ಇರ್ ಲಿಲ್ವಂತೆ. ಸುಮ್ಗೆ ಒನ್ ಫಾಲ್ಟಿ ಅಂತಿಧ್ದೋ. ನೋಡುದ್ರೆ ಒನ್ ತರ್ಟಿ ಫೈವ್ ಗಂಟಾ ಬಂದ್ ಬುಡ್ತು. ಜೈ ಭಜರಂಗ್‌ಬಲಿ ಮಹ್ಮೆ ಅಂತಾ ಕೈ ಹೈಕ್ಳು ದಿಲ್ ಕುಸ್ ಪಾನ್ ಬೀಡಾ ಆಕ್ತವ್ರೆ.
ಚೇರ್ಮನ್ರು: ಕಮ್ಲ -ತೆನೆ ಯಾಕ್ಲಾ ಪೂರ್ ಫರ್ಪಾರ್‌ವೆುನ್ಸ್ ಮಾಡ್ತು.
ಅಮಾಸೆ: ಕಮ್ಲ ಇಸ್ಟೇಟ್ ಲೀಡ್ರುಗ್ಳು ಮ್ಯಾಲಿಂದ ಬತ್ತಾರೆ, ಎಲ್ಲಾರ್ಗೂ ಜವರ್‌ತಾರೆ ಅಂತಾ ಡ್ರೀಮ್‌ನಾಗ್ ಇಧ್ದೋದ್ರು, ಇವ್ರ್ ಮಾಡಿದ್ ಕೇಮ್ ಹೇಳ್ದೆ ನಮ್ ಬಾಸ್ ಬಂದ್ರೆ ಕಲ್ಲಾಸ್ ಅಂತಾ ಮೈ ಮರೆತ್ರು. ಆಮ್ಯಾಕೆ ದಬ್ಟಾಕಂಡ್ರು.
ಚೇರ್ಮನ್ರು: ಅದ್ಸರಿ ಕುಮಾರಣ್ಣೋರ್ ಮಿನಿಮಮ್ ಫಿಪ್ಟಿ ಗ್ಯಾರಂಟಿ ಅಂದಿದ್ರು.
ಅಮಾಸೆ: ಹೇಳಿದ್ರು, ಕೈ ಪಾಲ್ಟಿ ಗ್ಯಾರಂಟಿಗ್ಳು ಕೈ ಕೊಟ್ ಬುಡ್ತಂತೆ. ಅತ್ಲಾಗೆ ಡಿಕೆ ಸಿವ್ ಕುಮಾರಣ್ಣೋರು ಸಿಎಂ ಆಯ್ತಾರೆ ಅಂತಾ ಓಲ್ಡ್ ಮೈಸೂರ್‌ನಾಗೆ ಫುಲ್ ಕೈಗೆ ಒತ್ತಿದ್ರಂತೆ. ಇತ್ಲಾಗೆ ಸಿದ್ರಾಮಣ್ಣೋರ್ ಸಿಎಂ ಅಂತಾ ನಾರ್ತ್ ಕರ್ನಾಟ್ಕಾ, ಹೈದ್ರಾಬಾದ್ ಕರ್ನಾಟ್ಕಾದಾಗೆ ಕೈಗೆ ಒತ್ತಿದ್ರು. ನಮ್ ಸಾಬ್ರು ಫುಲ್ ಸಪೋರ್ಟ್ ಮಾಡಿದ್ರಂತೆ. ಅದ್ಕೆ ಬೇಜಾನ್ ಮೇಜಾರ್ಟಿ ಬಂದ್‌ಬುಡ್ತು ಅಂತಾ ಸಿಎಮ್ ಇಬ್ರಾಮ್ ಸಾಬ್ರು ಹೇಳ್ತಾವ್ರೆ.
ಚೇರ್ಮನ್ರು: ರಾಜಾಹುಲಿ ಯಾಕ್ಲಾ ಸೈಲಂಟ್ ಐತೆ.
ಅಮಾಸೆ: ರಿಸಲ್ಟ್ ಬರೋಕು ಒನ್ ಡೇ ಅರ್ಲಿ ಎಲ್ರುಕೂ ಅಲ್ವಾ ಕೊಡಿÕದ್ರಂತೆ. ಆಮ್ಯಾಕೆ ಗಪ್‌ಚುಪ್ ಆಗವ್ರೆ. ಡೋಂಟ್ ವರಿ ಎಂಪಿ ಎಲೆಕ್ಸನ್‌ನಾಗೆ ಗುಡ್ ಫರ್ಪಾಮೆನ್ಸ್ ಮಾಡುಮಾ ಅಂತಾ ಧೈರ್ಯ ಹೇಳ್ತಾವ್ರಂತೆ.
ಚೇರ್ಮನ್ರು: ಕಮ್ಲ ಪಾಲ್ಟಿ ಯಾಕ್ಲಾ ಅಪೋಜಿಸನ್ ಲೀಡ್ರು ಮಾಡ್ಲಿಲ್ಲ.
ಅಮಾಸೆ: ಬುದ್ವಂತ ಬಸಣ್ಣೋರ್ಗೆ ಮಾಡೂಮಾ ಅಂತಾ ಇದ್ರಂತೆ. ಆದ್ರೆ, ಸುನಿಲಣ್ಣೋರು ಬೆಸ್ಟು ಅಂತಾ ಮ್ಯಾಲಿಂದ ಹೇಳವ್ರಂತೆ, ಸೋಮಣ್ಣಾ ತುಮ್ ಬಿ ರೆಡಿ ಹೋ ಇಸ್ಟೇಟ್ ಪ್ರಸಿಡೆಂಟ್‌ಕೋ ಅಂತಾನೂ ಅಶ್ಯೂರ್ ಮಾಡವ್ರಂತೆ. ಸಾಮ್ರಾಟ್ ಅಸೋಕಣ್ಣೋರು ನಾನೂ ಲೈನ್‌ನಾಗ್ ಇವ್ನಿ ಅಂತ ಹೇಳವ್ರೆ.
ಚೇರ್ಮನ್ರು: ನಮ್ ರೇವಣ್ಣೋರು ಎಲ್‌ಗೋದ್ರು ಕಾಣ್ತಿಲ್ ವಲ್ಲಾ.
ಅಮಾಸೆ: ರೇವಣ್ಣೋರು ಈಕಿತಾ ಶಾನೆ ಕಮ್ಮಿ ಲೀಡ್‌ನಾಗೆ ಗೆದ್ದವ್ರೆ. ಯಾರ್ಲಾ ನಂಕ್ ಮೋಸಾ ಮಾಡ್ದೊರು ಅಂತಾ ಎವರಿ ವಿಲೇಜ್ ಗಂಟಾ ಹೋಗ್‌ಬುಟ್ಟು ಆವಾಜ್ ಬುಡ್ತಾವ್ರೆ.
ಚೇರ್ಮನ್ರು: ರೇವಣ್ಣೋರು-ಭವಾನಿ ಅಕ್ಕೋರು, ಪ್ರಜ್ವಲ್ ಅಣ್ಣೋರು ಎಲ್ರೂ ಹಾಸ್ನದಾಗೆ ಟೆಂಟ್ ಹಾಕಿದ್ರಂತೆ. ಅದ್ಕೆ ಹೊಳೇನರಿಸಿಪುರದಾಗೆ ಕೈ ಕೊಟ್ಟೈತೆ ಅಂತಾ ಹೇಳ್ತಾವ್ರೆ ಹೌದೇನ್ಲಾ.
ಅಮಾಸೆ: ಹೌದೇಳಿ, ಭವಾನಿ ಅಕ್ಕೋರು ಚಾಲೆಂಜ್ ಮಾಡಿದ್ರು. ಅದ್ಕೆ ಡೇ ಅಂಡ್ ನೈಟ್ ತಿರ್‌ಗಾಡ್‌ಬುಟ್ಟು ತೆನೆ ಕ್ಯಾಂಡೇಟ್ ಗೆಲ್ಸ್‌ಕೊಂಡವ್ರೆ.
ಚೇರ್ಮನ್ರು: ಎಂಪಿ ಎಲೆಕ್ಸನ್ಗೆ ಒನ್ ಡಜನ್ ಕ್ಯಾಂಡೇಡ್ಗೆ ಟಿಕೀಟ್ ಕೊಡಾಕಿಲ್ಲಾ ಅಂತೆ ಹೌದೇನ್ಲಾ.
ಅಮಾಸೆ: ಅಂಗಂತಾವ್ರೆ. ಎಲ್ರುಕೂ ಎಂಗೂ ಫ್ರೀ ಬಸ್ ಐತೆ ಊರ್ ಸೇರ್ಕಲಿ. ನ್ಯೂ ಫೇಸ್ ತತ್ತೀವಿ. ಎಂಗ್ ಬ್ಲಿಡ್ ಬರ್ಬೇಕು ಅಂತಾ ಹೇಳವ್ರಂತೆ.
ಚೇರ್ಮನ್ರು: ನೀನ್ ಏನಾರಾ ಹೇಳೂ ರಾಜಾಹುಲಿ ಯಡ್ನೂರಪ್ನೋರು, ಹುಬ್ಳಿ ಟೈಗರ್ ಶೆಟ್ರಾ, ರಾಯಣ್ಣಾ ಬ್ರಿಗೇಡ್ ಈಸ್ವರಪ್ಪಾ, ಸೀಟಿ ರವಿ, ಇಸ್ವೇಸ್ವರ್ ಹೆಗ್ಡೆ ಕಾಗೇರಿ ಸಾಹೇಬ್ರು ಇಲ್ದೆ ಅಸೆಂಬ್ಲಿ ಬಿಕೋ ಅಂತೈತೆ.
ಅಮಾಸೆ: ಹೌದೇಳಿ, ಇತ್ಲಾಗೆ ಹುಲಿಯಾ ಸಿದ್ರಾಮಣ್ಣೋರು, ಡಿಕೆ ಸಿವ್ ಕುಮಾರಣ್ಣೋರು, ಬಿಜಾಪುರ್ ಟೈಗರ್ ಎಂಬಿ ಪಾಟೀಲಣ್ಣೋರು, ಮಾದೇವಪ್ನೋರು, ಜಮೀರಣ್ಣೋರು ಎಲ್ರೂ ಇಸ್ಟ್ರಾಂಗ್ ಅವ್ರೆ. ಆಕಡ್ಗೆ ವಸಿ ವೀಕ್ ಅನ್ಸ್‌ತದೆ.
ಚೇರ್ಮನ್ರು: ಇನ್ನೆನ್ ನಡ್ದೈತ್ಲಾ.
ಅಮಾಸೆ: ನೆಕ್ಸ್ಟ್ ಬಿಬಿಎಂಪಿ, ಜಡ್‌ಪಿ , ಟಿಪಿ, ಎಂಪಿ ಎಲೆಕ್ಸನ್ ನಮ್ ಟಾರ್ಗೆಟ್. ಫೈವ್ ಗ್ಯಾರಂಟಿ ಕೊಟ್‌ಮ್ಯಾಕೆ ನಮ್ದೆ ಕಪ್ ಅಂತಾ ಕೈನೋರು ಹೇಳ್ತಾವ್ರೆ. ಆಯ್ತು ನೋಡ್ತಾ ಇರಿ ಮುಂದೈತೆ ಮಾರಿ ಫೆಸ್ಟಿವಲ್ ಅಂತಾ ಕಮ್ಲದೋರು ಹಲ್ವಾ ಕೊಡ್ತಾವ್ರೆ. ಕುಮಾರಣ್ಣೋರು ಸೈಲಂಟಾಗೆ ಸ್ಕೆಚ್ ಹಾಕ್ತಾವ್ರೆ. ದೊಡ್‌ಗೌಡ್ರು ನ್ಯೂ ಪಾರ್ಲಿಮೆಂಟ್ ಬಿಲ್ಡಿಂಗ್‌ಗಂಟಾ ಹೋಗ್‌ಬುಟ್ಟು ವಿಶ್ ಮಾಡವ್ರೆ. ಅವ್ರು ಡೈರೆಕ್ಟ್ ಟಾಕ್ ಟು ಮೋದಿ ಅಂದ್‌ಮ್ಯಾಗೆ ಏನಾರಾ ಆಗ್ಬೇಕಲ್ಲಾ. ನೋಡುಮಾ ಏನೇನ್ ಆಯ್ತದೋ. ನನ್ ಹೆಂಡ್ರು ಕೈಮಾ ತತ್ತಾ ಅಂದವ್ರೆ ಬತ್ತೀನಿ ಸಾ….
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.