ಜಾತಿ, ಭಾಷೆ, ಪ್ರದೇಶ ಆಧರಿತ ರಾಜಕೀಯ ಪಕ್ಷ ಬೇಕೇ?
ಈ ಕಾಯಿದೆಗಳಲ್ಲಿ ಚುನಾವಣ ಆಯೋಗಕ್ಕೆ ಅಗತ್ಯವುಳ್ಳ ಅಧಿಕಾರ ದತ್ತವಾಗಿದೆ.
Team Udayavani
- ಬೇಳೂರು ರಾಘವ ಶೆಟ್ಟಿ
ಈ ರಾಜಕೀಯ ಪಕ್ಷಗಳು ಸಮಾನತೆ ಮತ್ತು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತವೆಯೇ? ನಮ್ಮ ದೇಶದಲ್ಲಿ 4-5 ರಾಷ್ಟ್ರೀಯ ಪಕ್ಷಗಳು, 50-60ರಷ್ಟು ರಾಜ್ಯ ಪ್ರಾದೇಶಿಕ ಪಕ್ಷಗಳು ಹಾಗೂ 700ಕ್ಕೂ ಅಧಿಕ ಸಂಖ್ಯೆಯ ಏಕವ್ಯಕ್ತಿ ನಾಮಾಂಕಿತ ಚಿಲ್ಲರೆ ರಾಜಕೀಯ ಪಕ್ಷಗಳಿವೆ. ಇವೆಲ್ಲವುಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ. ಜಾತಿ, ಮತ, ಭಾಷೆ ಹಾಗೂ ಪ್ರದೇಶ ಮುಂತಾದ ಸ್ಥಳೀಯ ಅಂಶಗಳ ಪ್ರಾಬಲ್ಯದ ಬಲದಲ್ಲಿ ಕೆಲವು ಸ್ಥಾನಗಳನ್ನು ಈ ಚಿಲ್ಲರೆ ಪಕ್ಷಗಳು ಗೆಲ್ಲುವ ಸಾಧ್ಯತೆಯುಂಟು. ಇದು ಆ ಪಕ್ಷದ ಅಥವಾ ಸಂಘಟನೆಯ ಬೇರು ಗಟ್ಟಿಗೊಳಿಸಲು ಸಹಕಾರಿ. ಅನಂತರ ನಿಧಾನವಾಗಿ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರಲು ಆರಂಭಿಸುತ್ತವೆ. ಈ ವಿದ್ಯಮಾನ ಸಮಾಜದ ಶಾಂತಿ ಕದಡಲು ಹಾಗೂ ಮುಂದುವರಿದರೆ ದೇಶವನ್ನೇ ವಿಭಜಿಸುವ ಅರ್ಥಾತ್ ಅಖಂಡತೆಗೆ ಧಕ್ಕೆ ತರುವ ಅಪಾಯಕಾರಿ ಹಂತಕ್ಕೆ...