ರಾಜೀವ್ ಹತ್ಯೆಗೆ ನ್ಯಾಯ ಸಿಕ್ಕಿತೇ? ಇಂದು ಭಯೋತ್ಪಾದನಾ ನಿಗ್ರಹ ದಿನ
ಸುಪ್ರೀಂ ಕೋರ್ಟ್ ಜೈಲಿನಿಂದ ಮುಕ್ತಿ ನೀಡಿದೆ. ಈ ಬಗ್ಗೆ ಈಗ ವಿವಾದವೂ ಎದ್ದಿದೆ.
Team Udayavani
ಇತ್ತೀಚೆಗಷ್ಟೇ ರಾಜೀವ್ ಹಂತಕರಲ್ಲಿ ಒಬ್ಬನಾದ ಎ.ಜಿ.ಪೆರಾರಿವೇಲನ್ ಎಂಬವನನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. 1991ರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಪಡೆಯಲ್ಲಿ ಈತ ಸದಸ್ಯನಾಗಿದ್ದ ಎಂಬ ಆರೋಪದ ಮೇಲೆ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈತನ ಒಬ್ಬನ ಮೇಲಷ್ಟೇ ಅಲ್ಲ, ಒಟ್ಟು 7 ಮಂದಿ ವಿರುದ್ಧ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಮರಣದಂಡನೆ ಶಿಕ್ಷೆ ಜಾರಿ ಮಾಡುವಲ್ಲಿ ಸರಕಾರಗಳು ತಡ ಮಾಡಿದ್ದರಿಂದ ಇವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಇದಾದ ಮೇಲೆ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಿಸಲು ಹಲವಾರು ಪ್ರಯತ್ನಗಳೂ ಆಗಿದ್ದವು. ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾ ಅವರೂ ಹಂತಕರಿಗೆ ಕ್ಷಮೆ ನೀಡುವಂಥ ಮಾತನಾಡಿದ್ದರು. ವಿಚಿತ್ರವೆಂದರೆ ತಮಿಳುನಾಡಿನ ರಾಜಕೀಯವೂ ಈ ರಾಜೀವ್ ಹಂತಕರ ಸುತ್ತ ಸುತ್ತಿಕೊಂಡಿದೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲೇ...