ಬುಲ್ಡೋಜರ್ ಜಮಾನ : ಇದು ಇನ್‌ಸ್ಟಂಟ್ ನ್ಯಾಯವೇ?
ವಿರೋಧ, ಪ್ರಭಾವವನ್ನೂ ಲೆಕ್ಕಿಸದೆ ಭೂಗಳ್ಳರ ನೂರಾರು ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳು ನೆಲಕ್ಕುರುಳಿಸಿದ್ದವು.
Team Udayavani
ಶಿವಮೊಗ್ಗ, ಹುಬ್ಬಳ್ಳಿ ಒಳಗೊಂಡಂತೆ ಕೋಮು ಗಲಭೆಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲೂ ಗಲಭೆಕೋರರನ್ನು ಮಟ್ಟಹಾಕಲು ಬುಲ್ಡೋಜರ್ ನೀತಿ ಪ್ರಯೋಗಿಸಬೇಕೆನ್ನುವ ಕೂಗು ಬಲಗೊಳ್ಳುತ್ತಿದೆ. ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಪರೋಕ್ಷವಾಗಿ ಬುಲ್ಡೋಜರ್ ಕಾರ್ಯಾಚರಣೆಯ ಅಗತ್ಯದ ಬಗ್ಗೆ ಮಾತಾಡಿದ್ದರೆ, ಸಚಿವ ಸುನಿಲ್ ಕುಮಾರ್ ನೇರವಾಗಿಯೇ ಗಲಭೆಕೋರರಿಗೆ ಈ ಎಚ್ಚರಿಕೆ ರವಾನಿಸಿದ್ದಾರೆ. ಈಗ ಕುತೂಹಲ ಇರುವುದು, ಸಿಎಂ ಪ್ರಕಟಿಸುವ ನೀತಿಯ ಬಗ್ಗೆಯಷ್ಟೇ.ಜಹಾಂಗೀರ್‌ಪುರಿ ಪ್ರದೇಶದಲ್ಲಿ ಹನುಮಾನ್ ಜಯಂತಿ ಆಚರಣೆ ವೇಳೆ ಕಲ್ಲು ತೂರಿ, ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಕಿಡಿಗೇಡಿಗಳ ಅಕ್ರಮ ಮನೆಗಳ ಮುಂದೆಯೂ ಬುಧವಾರ ಬುಲ್ಡೋಜರ್‌ಗಳು ಗರ್ಜಿಸಿವೆ. ಬಿಜೆಪಿಯ ಹಿಡಿತದಲ್ಲಿರುವ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್, 400 ಪೊಲೀಸರ ಕಾವಲಿ ನೊಂದಿಗೆ 2 ದಿನಗಳ ಅತಿಕ್ರಮಣ ವಿರೋಧಿ ಅಭಿಯಾನ ಆರಂಭಿಸಿತ್ತು...