ಮಾವಿನ ಹಣ್ಣಿಗೆ ಗುರಿ ಇಡುತ್ತಿದ್ದ ರಿಕ್ಷಾ ಚಾಲಕನ ಪುತ್ರಿ ಇಂದು ಜಗಮೆಚ್ಚುವ ಆರ್ಚರ್
ಬಿಲ್ಗಾರಿಕೆಯಲ್ಲಿ ರಾಂಚಿಯ ಹುಡುಗಿಯ ವಿಶ್ವ ಪರ್ಯಟನೆ
ಕೀರ್ತನ್ ಶೆಟ್ಟಿ ಬೋಳ
ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ಅತ್ಯುತಮ ಬಿಲ್ಗಾರನೆಂದು ಹೆಸರಾದವರು. ದ್ವಾಪರಯುಗದಲ್ಲಿ ಅರ್ಜುನ ಏಕಮಾದ್ವಿತೀಯ ಬಿಲ್ಗಾರನಾಗಿದ ಬಿಲ್ವಿದ್ಯೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಭಾರತದಲ್ಲಿ ಆಧುನಿಕ ಬಿಲ್ಗಾರಿಕೆಯಲ್ಲಿ ಸಾಧನೆ ಮಾಡಿದವರು ಕಡಿಮೆ. ಆದರೆ ರಾಂಚಿಯ ಹುಡುಗಿಯೊಬ್ಬಳು ಭಾರತದ ಬಿಲ್ಗಾರಿಕೆಯಲ್ಲಿ ನಿಖರ ಗುರಿ ಇಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ದೀಪಿಕಾ ಕುಮಾರಿ. ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.