ರಕ್ಷಾ ಬಂಧನದ ಖುಷಿ ಕಸಿದ ಕೋವಿಡ್
ರಾಖೀ ಖರೀದಿಗೆ ಮನೆಯಿಂದ ಹೊರಬರಲು ಯುವತಿಯರ ಹಿಂದೇಟು
Team Udayavani, Aug 3, 2020, 12:36 PM IST
ಸಾಂದರ್ಭಿಕ ಚಿತ್ರ
ಅಥಣಿ: ತಾಲೂಕಿನಾದ್ಯಂತ ಕೋವಿಡ್ ರಕ್ಷಾ ಬಂಧನದ ಖುಷಿ ಕಸಿದಿದೆ. ಸಂಪ್ರದಾಯದ ಪ್ರಕಾರವಾಗಿ ಶ್ರಾವಣ ಮಾಸವೆಂದರೆ ಎಲ್ಲಾ ಮಹಿಳೆಯರಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ನೂಲು ಹುಣ್ಣಿಮೆಯಂದು ಭ್ರಾತೃತ್ವದ ಸಂಕೇತವಾದ ರಾಖೀಯನ್ನು ಸಹೋದರರ ಕೈಗೆ ಕಟ್ಟಿ ಉಡುಗೊರೆ ಪಡೆಯುವ ಸಂಭ್ರಮವಂತೂ ಹೇಳಲೇ ತೀರದು. ನಗರ ಸೇರಿದಂತೆ ತಾಲೂಕಿನ ನಾನಾ ಪ್ರದೇಶಗಳ ಮಾರುಕಟ್ಟೆಯಲ್ಲಿ ಕಳೆದ ಕೆಲ ದಿನಗಳಿಂದ ಆರಂಭಿಸಿದ ರಾಖೀ ಅಂಗಡಿಗಳು ಕೊಳ್ಳುವವರಿಲ್ಲದೆ ಬಿಕೋ ಎನ್ನುತ್ತಿವೆ.
ಮಾರಾಟಗಾರರು ಓಂ, ಗಣೇಶ, ಕೃಷ್ಣಾ, ಬಾಹುಬಲಿ, ಛೋಟಾ ಭೀಮ, ಸೇರಿದಂತೆ ನಾನಾ ಟ್ರೆಂಡಿಂಗ್ ರಾಖೀಗಳನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದರೂ ಕೊಳ್ಳುವವರಿಲ್ಲದಂತಾಗಿದೆ. ಜನ, ವಿಶೇಷವಾಗಿ ಮಹಿಳೆಯರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅಥಣಿ ನಗರದ ಬಸವೇಶ್ವರ ಸರ್ಕಲ್, ಹಳ್ಯಾಳ ಸರ್ಕಲ್, ಅಂಬೇಡ್ಕರ ಸರ್ಕಲ್, ವಿಜಯಪುರ ರಸ್ತೆ, ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿ ಮತ್ತು ಸರ್ಕಲ್‌ಗಳಲ್ಲಿ ಸಾಕಷ್ಟು ರಾಖೀ ಸ್ಟಾಲ್ ಗಳು ತಲೆ ಎತ್ತಿವೆ. ಫಳ ಫಳ ಹೊಳೆಯುವ ಮುತ್ತು, ಗಾಜಿನಿಂದ ಕೂಡಿದ ಲೇಟೆಸ್ಟ್ ಟ್ರೆಂಡ್‌ನ ರಾಖೀಗಳು, ನವಿರಾದ ರೇಷ್ಮೆ, ನೂಲಿನಿಂದ ತಯಾರಿಸಿದ ರಾಖೀಗಳು, ಸ್ಪಂಜ್, ದಾರ ಸೇರಿದಂತೆ ನಾನಾ ವಿನ್ಯಾಸದ ಬಣ್ಣ ಬಣ್ಣದ ರಾಖೀಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ. ರಾಖೀಗಳ ಗಾತ್ರ ಮತ್ತು ವಿನ್ಯಾಸಕ್ಕೆ ತಕ್ಕಂತೆ 5 ರೂ.ಗಳಿಂದ ನೂರಾರು ರೂ.ಗಳ ದರವಿದೆ. ಜತಗೆ ಸಾವಿರಾರು ರೂ.ಗಳ ದರದ ಚಿನ್ನ ಹಾಗೂ ಬೆಳ್ಳಿ ಲೇಪಿತ ರಾಖೀಗಳು ಲಭ್ಯ ಇವೆ. ಅಲ್ಲಲ್ಲಿ ಕೆಲ ಜನರು ತಮ್ಮ ಬೇಡಿಕೆ ತಕ್ಕಂತೆ ವಿಚಾರಿಸಿ ಖರೀದಿಸುತ್ತಿದ್ದಾರೆ.
ಕೋವಿಡ್ ದಿಂದಾಗಿ ಅನೇಕರು ಮನೆ ಬಿಟ್ಟು ಹೊರಬರುತ್ತಿಲ್ಲ. ಹಾಗಾಗಿ ಈ ಸಲ ನಾವು ತಂದ ರಾಖೀಗಳಲ್ಲಿ ಅರ್ಧದಷ್ಟು ಮಾರಾಟವಾಗದೇ ಉಳಿದಿವೆ. ಈ ಬಾರಿ ಕೋವಿಡ್ ನಿಂದಾಗಿ ಹಬ್ಬದ ವ್ಯಾಪಾರದಲ್ಲಿ ಮಂಕು ಕವಿದಿದೆ. –ರಾಹುಲ ಲಗಳಿ,ಕಿರಾಣಿ ವ್ಯಾಪಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.