ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Mar 29, 2022, 7:16 AM IST
ಮೇಷ:
ಗುರುಹಿರಿಯರೊಂದಿಗೆ ಮನಸ್ತಾಪ ಮಾಡದಿರಿ. ದೇವತಾ ಕಾರ್ಯಗಳಲ್ಲಿ ಭಾಗಿ ಯಾದ ಸಂತಸ. ಮನೆಯಲ್ಲಿ ಹೆಚ್ಚಿದ ಜವಾಬ್ದಾರಿ. ಅನ್ಯರೊಡನೆ ಚರ್ಚೆಗೆ ಅವಕಾಶ ಕೊಡದಿರಿ. ಉದ್ಯೋಗ ಸ್ಥಳದಲ್ಲಿ ಹೆಚ್ಚಿದ ಗೌರವಾಧರ .
ವೃಷಭ:
ಆಸ್ತಿ ವಿಚಾರದಲ್ಲಿ ಚರ್ಚೆಗೆ ಆಸ್ಪದ ಕೊಡಬೇಡಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಇರಲಿ. ದೀರ್ಘ ಪ್ರಯಾಣದಿಂದ ದೇಹಾಯಾಸ.
ಮಿಥುನ:
ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಸುಖ ವೃದ್ಧಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಬದಲಾವಣೆ. ಸಹೋದ್ಯೋಗಿಗಳಿಂದ ಸಹಕಾರ ಲಭ್ಯ. ಜಲೋತ್ಪನ್ನ ವ್ಯವಹಾರದಲ್ಲಿ ಅಧಿಕ ಲಾಭ.
ಕಟಕ:
ಗುರುಹಿರಿಯರ ಆರೋಗ್ಯ ಗಮನಿಸಿ. ಬಂಧುಬಳಗ ಹಾಗೂ ಮಿತ್ರರಲ್ಲಿ ಪ್ರೀತಿಯಿಂದ ವ್ಯವಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಸಂಭವ. ಪರರಲ್ಲಿ ವ್ಯವಹರಿಸುವಾಗ ಜಾಗ್ರತೆ ಇರಲಿ. ಮಕ್ಕಳಿಂದ ಸಂತಸ ಪ್ರಾಪ್ತಿ.
ಸಿಂಹ:
ಪಾಲುದಾರರ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ದೇವತಾ ಸ್ಥಳಗಳಿಗೆ ಸಂದರ್ಶನ. ಮಕ್ಕಳಲ್ಲಿ ಅತಿಯಾದ ಭರವಸೆ ಇಡದೆ ನಿಮ್ಮತನವನ್ನು ಉಳಿಸಿಕೊಳ್ಳಿ. ಮನೆಯಲ್ಲಿ ಚರ್ಚೆಗೆ ಅವಕಾಶ ಕೊಡದಿರಿ.
ಕನ್ಯಾ:
ಉತ್ತಮ ಧನಾರ್ಜನೆಯಿದ್ದರೂ ಅದಕ್ಕೆ ತಕ್ಕಂತೆ ಖರ್ಚು. ಮನೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿ. ಬಂಧುಬಳಗ ದವರಿಂದ ಉತ್ತಮ ಸಹಕಾರ. ಗಣ್ಯರ ಭೇಟಿ ಸಂಭವ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿದ ಆದಾಯ.
ತುಲಾ:
ಉತ್ತಮ ವಾಕ್‌ಚತುರತೆಯಿಂದ ಕಾರ್ಯ ಸಾಧಿಸಿದ ಅನುಭವವಾದೀತು. ಅಲಂಕಾರಿಕ ವಸ್ತುಗಳ ಖರೀದಿಗಾಗಿ ಧನವ್ಯಯ. ಅವಿವಾಹಿತರಿಗೆ ಯೋಗ್ಯವಾದ ಸಂಬಂಧ ಕೂಡಿ ಬರುವ ಸಮಯ. ಆರೋಗ್ಯ ವೃದ್ಧಿ.
ವೃಶ್ಚಿಕ:
ಉದ್ಯೋಗ, ವ್ಯವಹಾರದ ಸ್ಥಳ ಗಳಲ್ಲಿ ಯಾರೊಂದಿಗೂ ಚರ್ಚೆಗೆ ಅವಕಾಶ ಕೊಡಬೇಡಿ. ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ. ಧನಾರ್ಜನೆಗೆ ಕೊರತೆ ಇರದು.
ಧನು:
ಆರೋಗ್ಯ ವೃದ್ಧಿ. ಮಕ್ಕಳ ವಿಚಾರದಲ್ಲಿ ಜಾಗ್ರತೆ ಇರಲಿ. ಮಾತಿನಲ್ಲಿ ಹಿಡಿತವಿರಲಿ. ದೇವತಾ ಕಾರ್ಯದಲ್ಲಿ ಭಾಗಿಯಾದ ಸಂಭ್ರಮ. ಉದ್ಯೋಗ ವ್ಯವಹಾರದಲ್ಲಿ ಹೆಚ್ಚಿದ ಜವಾಬ್ದಾರಿ. ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ.
ಮಕರ:
ವ್ಯಾಪಾರ ವ್ಯವಹಾರ ನಿಮಿತ್ತ ಪರಊರಿಗೆ ಪ್ರಯಾಣ ಸಂಭವ.ಮನೆಯಲ್ಲಿ ಹೆಚ್ಚಿದ ಜವಾಬ್ದಾರಿ. ದೀರ್ಘಕಾಲದ ಅನಾರೋಗ್ಯ ಸುಧಾರಿಸುವ ಕಾಲ. ಮಕ್ಕಳಿಂದ ಸಂತಸ. ಗೃಹದಲ್ಲಿ ಸಂತಸದ ವಾತಾವರಣ. ಮಾನಸಿಕ ನೆಮ್ಮದಿ.
ಕುಂಭ:
ಆರೋಗ್ಯ ವೃದ್ಧಿ. ಮನೆಯಲ್ಲಿ ಹಿರಿಯರೊಂದಿಗೆ ಚರ್ಚೆ ಮಾಡದಿರಿ. ನಿಮ್ಮ ಸ್ವಪ್ರಯತ್ನದಿಂದಾಗಿ ಉತ್ತಮ ಧನಾರ್ಜನೆಗೆ ದಾರಿ. ಸಣ್ಣ ಪ್ರಯಾಣ ಸಂಭವ. ಆಹಾರೋದ್ಯಮದಲ್ಲಿ ಹೆಚ್ಚಿದ ಆದಾಯ. ಮಾನಸಿಕವಾಗಿ ನೆಮ್ಮದಿ ಲಭಿಸುವ ದಿನ.
ಮೀನ:
ಹಿರಿಯರು ಮತ್ತು ಮಕ್ಕಳೊಂದಿಗೆ ಪ್ರೀತಿಯಿಂದ ವ್ಯವಹರಿಸಿ. ದೇವತಾ ಪ್ರಾರ್ಥನೆಯಿಂದ ಮಾನಸಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣ. ಅನಗತ್ಯ ಖರ್ಚಿಗಾಗಿ ಧನವ್ಯಯ ಮಾಡದಿರಿ. ಕುಟುಂಬಿಕರೊಂದಿಗೆ ಸಣ್ಣ ಪ್ರಯಾಣ ಸಂಭವ. ಉತ್ತಮ ಆರೋಗ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.