ನಿತ್ಯಭವಿಷ್ಯ: ಈ ರಾಶಿಯವರ ಹಣದ ದಾಹ ಆರ್ಥಿಕ ಸ್ಥಿತಿಯ ಏರುಪೇರಿಗೆ ಕಾರಣವಾಗಲಿದೆ !
Team Udayavani, Mar 12, 2021, 7:28 AM IST
ಮೇಷ: ಹೊಸ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಿಕೆ ಹಾಗೂ ಕಾರ್ಯಬಾಹುಳ್ಯದಿಂದ ನಿಮಗೆ ಬಿಡುವೇ ಸಿಗಲಾರದು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನ ಸಂಗ್ರಹವಾಗಲಿದೆ. ಸಂಚಾರವು ಹೆಚ್ಚಾಗಲಿದೆ.
ವೃಷಭ: ನಿಮ್ಮೆಣಿಕೆಯಂತೆ ಕಾರ್ಯ ಸಿದ್ಧಿಯಾಗಲಿದೆ. ಸಂತೃಪ್ತ ಜೀವನ ನಡೆಸಬಹುದಾದರೂ ಆರೋಗ್ಯವು ದಿನಕ್ಕೊಂದು ರೀತಿಯಲ್ಲಿ ಸತಾಯಿಸಬಹುದು. ನಿಮ್ಮ ಕುಟುಂಬದ ಜನರೆಲ್ಲಾ ಚದುರಿ ಹೋದಾರು.
ಮಿಥುನ: ನಿಮ್ಮ ವ್ಯಕ್ತಿತ್ವದ ಪ್ರಭಾವಕ್ಕೆ ಶತ್ರುಗಳೆಲ್ಲರೂ ಮೈತ್ರಿ ಬಯಸಿಯಾರು. ಹಲವರು ಸಮಸ್ಯೆಗಳನ್ನು ಹಿಡಿದು ನಿಮ್ಮ ಉತ್ತಮ ಸಲಹೆಗಾಗಿ ನಿಮ್ಮತ್ತ ಬಂದಾರು. ಸಮಾಧಾನ ನೀಡುವುದು ಒಂದು ಭಾಗ್ಯ.
ಕರ್ಕ: ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳು ಇರುವುದಿಲ್ಲ. ಕಾರ್ಮಿಕ ವರ್ಗದವರಿಗೆ ಕೃಷಿ ಮೊದಲಾದ ವೃತ್ತಿಯವರಿಗೆ ಲಾಭಾಂಶ ಚೆನ್ನಾಗಿರುತ್ತದೆ. ಪ್ರಯತ್ನಕ್ಕೆ ತಕ್ಕ ಫಲ ನಿಮಗೆ ಸಿಗಲಿದೆ. ಧೈರ್ಯದ ಹೆಜ್ಜೆ ಇಡಿರಿ.
ಸಿಂಹ: ಬಂಧುಗಳಿಂದ ಅನಾವಶ್ಯಕವಾಗಿ ಭಿನ್ನಾಭಿಪ್ರಾಯ ಮೂಡಿಬಂದೀತು. ಆಗಾಗ ಉದ್ವೇಗ, ದುಃಖ, ಮಾನಸಿಕವಾಗಿ ವ್ಯಥೆಗಳಿದ್ದರೂ ನಿಧಾನವಾಗಿ ಒಂದೊಂದೇ ನಿವಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬೇಕು.
ಕನ್ಯಾ: ವಿದ್ಯಾರ್ಥಿಗಳ ಅನುಚಿತ ವರ್ತನೆ ವಿದ್ಯಾಭಂಗಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸುವುದು ಅಗತ್ಯವಿದೆ. ಗೃಹದಲ್ಲಿ ಉತ್ತಮ ನೆಮ್ಮದಿ ಹಾಗೂ ಸಮಾಧಾನ ಸಂತೋಷ ಇರುವುದು. ಸಂಶಯ ಪ್ರವೃತ್ತಿಯನ್ನು ಬಿಟ್ಟು ಬಿಡಿರಿ.
ತುಲಾ: ವಿದ್ಯಾರ್ಥಿಗಳಿಗೆ ದುಶ್ಚಟ ಹೊಂದಿದ ಮಿತ್ರರ ಸಹವಾಸದಿಂದ ಕೆಟ್ಟ ಹೆಸರು, ಅಪವಾದ ಬಂದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ಗೋಚಾರಕ್ಕೆ ಬಂದರೂ ಅಡೆತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ಶುಭವಿದೆ.
ವೃಶ್ಚಿಕ: ಬಂದದ್ದು ಪಾಲಿಗೆ ನಮ್ಮದು ಎಂಬ ಭಾವನೆ ಇಟ್ಟರೆ ಉತ್ತಮ. ಬಂದದ್ದು ಸಾಲದೆಂಬಂತೆ ಹಣದ ದಾಹ ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ರಾಜಕೀಯದವರಿಗೆ ಕಟ್ಟ ಸ್ಪರ್ಧೆಯು ಎದುರಾಗಲಿದೆ.
ಧನು: ಅಧಿಕಾರಿ ವರ್ಗದಲ್ಲಿ ಅನ್ಯೋನ್ಯತೆ, ಸಹಕಾರ ಮನೋಭಾವ ಕ್ಷೀಣಿಸಲಿದೆ. ಹೊಂದಾಣಿಕೆಯು ನಿಮ್ಮ ಜೀವನದ ಒಂದಂಶವಾಗಿರಲಿ. ವೃತ್ತಿರಂಗದಲ್ಲಿ ಉತ್ತಮ ಹೆಸರು ಗಳಿಸುವ ಸಾಧ್ಯತೆಯು ಕಂಡು ಬರಲಿದೆ.
ಮಕರ: ಆರ್ಥಿಕವಾಗಿ ಖರ್ಚಿನ ಜೊತೆಗೆ ಮಾನಸಿಕ ಕಿರಿಕಿರಿ, ಅಶಾಂತಿ ಬೇರೆ ಜೊತೆ ಸೇರಲಿದೆ. ವ್ಯಾಪಾರಿ ವರ್ಗದವರಿಗೆ ಆಗಾಗ ಧನಕ್ಲೇಶ ವಂಚನೆಗಳಾಗುತ್ತವೆ. ನೆರೆಕೆರೆಯವರು ನಿಮ್ಮ ನೆಮ್ಮದಿಗೆ ಭಂಗ ತಂದಾರು.
ಕುಂಭ: ಮನೆಯಲ್ಲಿ ಮೌನ ಹಾಗೂ ಬಿಸಿ ವಾತಾವರಣವಿರುತ್ತದೆ. ಯಂತ್ರ ವಾಹನ ರಿಪೇರಿಗಳು ನಿಮಗೆ ನಷ್ಟ ತಂದು ಕೊಟ್ಟಾವು. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಿರಿ. ಹೆಸರು ಪ್ರೀತಿ ಗಳಿಸುವಿರಿ.
ಮೀನ: ಒಮ್ಮೊಮ್ಮೆ ಅತೀ ದಾರಾಳತನದಿಂದ ಕೈಬರಿದಾಗಲಿದೆ. ಜಾಗ್ರತೆ ಮುಖ್ಯವಾಗಿದೆ. ಶೀತ, ಗಂಟಲು, ತಲೆನೋವಿನ ಸಂಬಂಧ ಆರೋಗ್ಯದಲ್ಲಿ ಏರಿಳಿತ ಕಂಡು ಬಂದೀತು. ಮನೆ ಹಿರಿಯರ ಮಾತಿಗೆ ಸ್ಪಂದಿಸಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.