ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Apr 1, 2022, 7:12 AM IST
ಮೇಷ:
ಹೆಚ್ಚಿದ ಪರಿಶ್ರಮ. ಹಠ ಮಾಡದೇ ತಾಳ್ಮೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ವ್ಯವಹಾರಗಳಿಂದ ಹೆಚ್ಚಿದ ವರಮಾನ. ಗುರುಹಿರಿಯರ, ಮೇಲಾಧಿಕಾರಿಗಳ ಮಾರ್ಗದರ್ಶನ ಪಾಲಿಸುವುದರಿಂದ ಯಶಸ್ಸು ಲಭಿಸೀತು
ವೃಷಭ:
ಉದ್ಯೋಗ ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ನಿರೀಕ್ಷಿತ ಸ್ಥಾನ ಸುಖ. ಯಶಸ್ಸು ಲಭಿಸಿದ ಮನಃತೃಪ್ತಿ. ದೀರ್ಘ ಪ್ರಯಾಣ ಸಂಭವ. ಮಕ್ಕಳೊಡನೆ, ಹಿರಿಯರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ
ಮಿಥುನ:
ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ನಿರೀಕ್ಷಿತ ಧನಾಗಮ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಸಹೋದರ ಸಮಾನರಿಂದ ಸಹಕಾರ ಪ್ರಾಪ್ತಿ
ಕಟಕ:
ಉತ್ತಮ ಸ್ಥಾನಮಾನಕ್ಕಾಗಿ ಪ್ರಯತ್ನ. ಅಧ್ಯಯನದಲ್ಲಿ ತತ್ಪರತೆ. ಕೌಟುಂಬಿಕ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಪರ ಕಾರ್ಯದಲ್ಲಿ ಆಸಕ್ತಿ. ಹಣಕಾಸಿನ ವಿಚಾರದಲ್ಲಿ ಕೃಪಣತೆ ಮಾಡದಿರಿ. ಸಾಂಸಾರಿಕ ಸುಖ ಮಧ್ಯಮ
ಸಿಂಹ:
ಹಿರಿಯರಿಂದ ಸಂತೋಷ. ಗೃಹ ವಾಹನಾದಿ ವಿಚಾರಗಳಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಣಯದಿಂದ ನಷ್ಟ ಸಂಭವ
ಕನ್ಯಾ:
ಧೈರ್ಯ ಸಾಹಸ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ ಹಾಗೂ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ
ತುಲಾ:
ದೀರ್ಘ ಪ್ರಯಾಣ ಸಂಭವ. ನಷ್ಟ ದ್ರವ್ಯಗಳಿಗೆ ಪ್ರಯತ್ನಿಸಿದರೆ ಸಿಗುವ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವ ಕಾಲ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಾಗಮನ. ಅಭಿವೃದ್ಧಿ
ವೃಶ್ಚಿಕ:
ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು. ಆರೋಗ್ಯ, ಸಾಂಸಾರಿಕ ಸುಖ, ಮಕ್ಕಳ ವಿಚಾರದಲ್ಲಿ, ಸಂತಸದ ಸಮಯ. ಉದ್ಯೋಗ ವ್ಯವಹಾರಾದಿಗಳಲ್ಲಿ ಉನ್ನತ ಅಭಿವೃದ್ಧಿ
ಧನು:
ಆರೋಗ್ಯದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ಭೂಮಿ ವಾಹನಾದಿ ವ್ಯವಹಾರಗಳಲ್ಲಿ ನಿರೀಕ್ಷಿತ ಸಫಲತೆ. ನಿರಂತರ ಧನಾರ್ಜನೆ. ಕೌಟುಂಬಿಕ ಸಹಕಾರ. ಧಾರ್ಮಿಕ ವಿಚಾರಗಳಲ್ಲಿ ಸಕ್ರಿಯತೆ. ವಿದ್ಯಾರ್ಥಿಗಳಿಗೆ ಶುಭ ಫಲ
ಮಕರ:
ಪಾಲುದಾರಿಕಾ ಕ್ಷೇತ್ರದಲ್ಲಿ ವ್ಯವಹಾರಗಳಲ್ಲಿ ಗೌರವದಿಂದ ಕೂಡಿದ ಸ್ಥಾನ ಪ್ರಾಪ್ತಿ. ಗುರುಹಿರಿಯರಿಂದ ಮಾರ್ಗದರ್ಶನ ಸಹಕಾರ. ಧನಾರ್ಜನೆಗೆ ಸರಿಯಾಗಿ ಖರ್ಚು. ಆರೋಗ್ಯ ಸ್ಥಿರ. ಮಕ್ಕಳ ವಿಷಯದಲ್ಲಿ ಜಾಗ್ರತೆ ಇರಲಿ
ಕುಂಭ:
ಮಾನಸಿಕವಾಗಿ ಬಲಿಷ್ಠತೆಯಿಂದ ಸುದೃಢ. ಉದ್ಯೋಗ ವ್ಯವಹಾರಸ್ಥರಿಗೆ ಪ್ರಯಾಣ ಸಂಭವ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ಸರಿಯಾದ ಸಂಬಂಧ ಒದಗುವ ಕಾಲ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ
ಮೀನ:
ಉತ್ತಮ ದೈಹಿಕ ಮಾನಸಿಕ ಕ್ಷಮತೆ. ಕೆಲಸ ಕಾರ್ಯಗಳಲ್ಲಿ ತತ್ಪರತೆ. ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಸುಧಾರಣೆ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಸರಿಯಾದ ಫಲ. ವಿಪುಲ ಅವಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.