ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ
Team Udayavani, Jan 3, 2022, 7:28 AM IST
ಮೇಷ:
ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಸಹೋದ್ಯೋಗಿಗಳ ಸಹಕಾರ. ಗೌರವದಿಂದ ಕೂಡಿದ ಧನಾರ್ಜನೆ. ಗುರುಹಿರಿಯರ ಮಾರ್ಗದರ್ಶನ. ನಿರೀಕ್ಷಿತ ಸ್ಥಾನ ಪ್ರಾಪ್ತಿ.
ವೃಷಭ:
ದೈಹಿಕವಾಗಿಯೂ ಮಾನಸಿಕ ವಾಗಿಯೂ ಸಂತೋಷದಿಂದ ಕೂಡಿದ ಪರಿಸ್ಥಿತಿ. ದೀರ್ಘ ಪ್ರಯಾಣ ಯೋಗ. ದಾಂಪತ್ಯದಲ್ಲಿ ಸಾಮರಸ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಸುಖ ಸಿದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಮಿಥುನ:
ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಅಧಿಕ ಧನಾಗಮ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ. ನೂತನ ಮಿತ್ರರ ಸಮಾಗಮ. ಗುರುಹಿರಿಯರಿಂದ ಮಾನಸಿಕ ಸಂತೋಷ ವೃದ್ಧಿ.
ಕಟಕ:
ಆರೋಗ್ಯದ ಬಗ್ಗೆ ಗಮನಹರಿಸಿ. ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ತೃಪ್ತಿ ದಾಯಕ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ.
ಸಿಂಹ:
ಆರೋಗ್ಯ ಸ್ಥಿರ. ಪ್ರಯಾಣದಿಂದ ದೇಹಾಯಾಸ ತೋರೀತು. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ. ಗುರುಹಿರಿಯರಿಂದ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ.
ಕನ್ಯಾ:
ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಉತ್ತಮ ಧನ ಸಂಪಾದನೆಯ ಸುಖ. ಪಾಲುದಾರಿಕಾ ವ್ಯವಹಾರಗಳಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ಅವಿವಾಹಿತರಿಗೆ ವಿವಾಹ ಯೋಗ ಸಿದ್ಧಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ತುಲಾ:
ಆರೋಗ್ಯ ಉತ್ತಮ. ನಿರಂತರ ಧನಾರ್ಜನೆ. ಪ್ರಯಾಣದಿಂದ ನಿರೀಕ್ಷಿತ ಕಾರ್ಯ ಸಫಲತೆ. ಉದ್ಯೋಗ ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಸಂತಸ. ನೂತನ ಮಿತ್ರರ ಸಮಾಗಮ.
ವೃಶ್ಚಿಕ:
ಆರೋಗ್ಯ ಸುದೃಢ. ಸಾಂಸಾರಿಕ ಸಂತೋಷ ವೃದ್ಧಿ. ಪರಸ್ಪರ ಸಹಕಾರ. ಮಕ್ಕಳ ವಿಚಾರದಲ್ಲಿ ಧನವ್ಯಯ. ಗುರುಹಿರಿಯರಿಂದ ಮಾನ ಸಿಕ ಸಂತೋಷ ವೃದ್ಧಿ. ದೇವತಾ ಕಾರ್ಯಗಳಿಗೆ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ.
ಧನು:
ಸುಸ್ಥಿರ ಆರೋಗ್ಯ. ಸರಿಯಾದ ನಿಯಮ, ಶಿಸ್ತಿನಿಂದ ಕೂಡಿದ ಜೀವನಶೈಲಿ. ಗೃಹೋಪ ಯೋಗಿ ವಸ್ತುಗಳ ಸಂಗ್ರಹ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ನಾಯಕತ್ವ ಗುಣ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಮ್ಮೆಪಡುವಂಥ ಸಂದರ್ಭ.
ಮಕರ:
ಆರೋಗ್ಯದಲ್ಲಿ ಸುಧಾರಣೆ. ಪಾಲು ದಾರಿಕಾ ವ್ಯವಹಾರದಲ್ಲಿ ಉತ್ತಮ ಧನಾರ್ಜನೆ. ಉದ್ಯೋಗ ಸಂಬಂಧಿ ಪ್ರಯಾಣ ಸಂಭವ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ವಿದ್ಯಾರ್ಥಿ ಗಳಿಗೆ ನಿರೀಕ್ಷಿತ ಅಭಿವೃದ್ಧಿ. ಸಾಂಸಾರಿಕ ಸುಖ ಮಧ್ಯಮ.
ಕುಂಭ:
ಆರೋಗ್ಯದ ಬಗ್ಗೆ ಗಮನಹರಿಸಿ. ಸರಿಯಾದ ಶಿಸ್ತು ಅಗತ್ಯ. ಉದಾಸೀನ ಮಾಡದಿರಿ. ಧನಾಗಮನಕ್ಕೆ ಕೊರತೆ ಇರದು. ಅನ್ಯರ ಮೇಲೆ ಅವಲಂಬಿತರಾಗದೇ ಕಾರ್ಯಪ್ರವೃತ್ತರಾಗಿರಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ಒದಗುವುವು.
ಮೀನ:
ಉತ್ತಮ ಅಭಿವೃದ್ಧಿದಾಯಕ ದೈಹಿಕ ಸ್ಥಿತಿ. ದೀರ್ಘ ಪ್ರಯಾಣದಿಂದ ನಿರೀಕ್ಷಿತ ಕಾರ್ಯದಲ್ಲಿ ಸಫಲತೆ. ನೂತನ ಮಿತ್ರರ ಸಮಾಗಮ. ಪಾಲುದಾರಿಕಾ ವ್ಯವ ಹಾರ ದಲ್ಲಿ ಪ್ರಗತಿ. ಧನ ಸಂಪತ್ತಿನ ವೃದ್ಧಿ. ಭೂಮಿ ಆಸ್ತಿ ವಿಚಾರ ಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫಲತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Daily Horoscope: ಉದ್ಯೋಗದಲ್ಲಿ ಯಶಸ್ಸಿನ ಭರವಸೆ, ಆಪ್ತರ ನೈತಿಕ ಬೆಂಬಲದಿಂದ ಧೈರ್ಯ ವರ್ಧನೆ
Daily Horoscope; ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.