ಶನಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Jun 18, 2022, 7:13 AM IST
ಮೇಷ:
ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆಗಳು ನಿವಾರಣೆಯಾಗಿ ನೆಮ್ಮದಿ. ನಿರೀಕ್ಷಿತ ಸಫಲತೆ. ಉತ್ತಮ ಧನ ಸಂಗ್ರಹ. ಬಂಧು ಮಿತ್ರರ ಸಹಾಯ ಸಹಕಾರ ಪ್ರಾಪ್ತಿ. ಮಕ್ಕಳ ನಿಮಿತ್ತ ಪ್ರಯಾಣ ಖರ್ಚು ಸಂಭವ.
ವೃಷಭ:
ದೀರ್ಘ ಪ್ರಯಾಣ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ಧನವ್ಯಯ ಆಸ್ತಿ ವಿಚಾರರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರದ ವ್ಯವಹಾರಗಳಲ್ಲಿ ಪ್ರಗತಿ.
ಮಿಥುನ:
ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರ ಸಮಾನರಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು. ದೂರದ ವ್ಯವಹಾರದಿಂದ ಉತ್ತಮ ಧನ ಸಂಪತ್ತು ವೃದ್ಧಿ.
ಕರ್ಕ:
ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರದಲ್ಲಿ ನಿರ್ಣಯ ಸಾಧ್ಯ. ದಾಂಪತ್ಯದಲ್ಲಿ ಪರಸ್ಪರರಿಂದ ಸಹಕಾರ. ಗುರುಹಿರಿಯರಿಂದ ರಕ್ಷೆ.
ಸಿಂಹ:
ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನ ಪದರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ನೀಡದಿರಿ. ಧನಾರ್ಜನೆಗೆ ಕೊರತೆ ಕಾಣದು.
ಕನ್ಯಾ:
ದೀರ್ಘ ಪ್ರಯಾಣ ಸಂಭವ. ದೇಹಾ ಯಾಸ ತೋರಿತು. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ. ಮಕ್ಕಳಿಂದಲೂ ಗುರುಹಿರಿಯರಿಂದಲೂ ಸುಖ ಸಂತೋಷ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ.
ತುಲಾ:
ಆರೋಗ್ಯ ಉತ್ತಮ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ ಮೇಲಧಿಕಾರಿಗಳ ಸಹಕಾರ ಮಾರ್ಗ ದರ್ಶನ ಲಾಭ.ಸಾಂಸಾರಿಕ ಸುಖ ತೃಪ್ತಿದಾಯಕ .
ವೃಶ್ಚಿಕ:
ಅಧಿಕ ಕಾರ್ಯ ಚಟುವಟಿಕೆಗಳಿಂದ ಕೂಡಿದ ದಿನ. ಎಲ್ಲಾ ವಿಧಗಳಲ್ಲೂ ಯಶಸ್ಸು. ಲಭಿಸುವ ಅವಕಾಶ. ಈ ದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಲವಾರು ಶುಭಫಲಗಳು.
ಧನು:
ಆರೋಗ್ಯದಲ್ಲಿ ಸುಧಾರಣೆ. ಜವಾ ಬ್ದಾರಿಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ. ಸ್ಥಾನ ಸುಖ ವೃದ್ಧಿ. ಅನ್ಯರ ಸಹಕಾರ ನಿರೀಕ್ಷಿಸದೇ ಕಾರ್ಯ ಪ್ರವೃತ್ತರಾಗಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ.
ಮಕರ:
ಆರೋಗ್ಯ ಸ್ಥಿರ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಲಾಭ. ಸ್ಥಾನಾದಿ ಸುಖ. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ.
ಕುಂಭ:
ಉತ್ತಮ ವಾಕ್‌ಚತುರತೆ. ಗಾಂಬೀರ್ಯ ಪ್ರದರ್ಶನದಿಂದ ಎಲ್ಲಾ ವ್ಯವಹಾರಗಳಲ್ಲಿ ಜಯ. ಆಸ್ತಿ ವಾಹನಾದಿ ಲಾಭ. ಅಧಿಕ ಗೌರವದಿಂದ ಕೂಡಿದ ಧನಾರ್ಜನೆ..
ಮೀನ:
ಉತ್ತಮ ಆರೋಗ್ಯ ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ ಆಲೋಚನೆಯಿಂದ ಕೂಡಿ ಕಾರ್ಯವೈಖರಿ. ದೂರ ಪ್ರಯಾಣದಿಂದಲೂ, ಧನಾರ್ಜನೆ ಸಂಭವ. ತಾಳ್ಮೆಯ ನಿರ್ಣಯ ಅಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.