ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Feb 11, 2022, 7:29 AM IST
ಮೇಷ:
ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫಲತೆ. ಧನಾರ್ಜನೆ ಉತ್ತಮವಾಗಿದ್ದರೂ ಏನೋ ಒಂದು ವಿಧದ ಅತೃಪ್ತಿ ತೋರೀತು. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು.
ವೃಷಭ:
ಪಾಲುದಾರಿಕಾ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉದ್ಯೋಗದಲ್ಲಿ ಹೆಚ್ಚಿನ ಗೌರವ ಮನ್ನಣೆ ಪ್ರಾಪ್ತಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿ ಬರುವ ಸಮಯ. ಆರೋಗ್ಯದಲ್ಲಿ ಅಭಿವೃದ್ಧಿ. ಹಣಕಾಸಿಗೆ ಸರಿಯಾದ ದಾಖಲಾತಿಗೆ ಆದ್ಯತೆ.
ಮಿಥುನ:
ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿನ ಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಜವಾಬ್ದಾರಿ. ಸಹೋದ್ಯೋಗಿಗಳಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಗೌರವ ಪುರಸ್ಕಾರದ ಅವಕಾಶ. ದಾಂಪತ್ಯ ಸುಖ ವೃದ್ಧಿ.
ಕಟಕ:
ಆರೋಗ್ಯದಲ್ಲಿ ಸುಧಾರಣೆ. ಸಣ್ಣ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಹೊಂದಾಣಿಕೆ ಅಗತ್ಯ. ಭೂಮಿ, ಆಸ್ತಿ ಇತ್ಯಾದಿ ವಿಚಾರದಲ್ಲಿ ತಾಳ್ಮೆಯಿರಲಿ. ಮಿತ್ರರಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಸಾಂಸಾರಿಕ ಸುಖ ತೃಪ್ತಿ.
ಸಿಂಹ:
ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರದಿರಿ. ಸಾಂಸಾರಿಕ ಜವಾಬ್ದಾರಿ ಹೆಚ್ಚಾದೀತು. ದೀರ್ಘ ಸಂಚಾರಗಳಲ್ಲಿ ವಿಳಂಬ. ದೇವತಾ ಪ್ರಾರ್ಥನೆಯಿಂದ ವಿಘ್ನ ಪರಿಹಾರ. ವಿದ್ಯಾರ್ಥಿಗಳಿಗೆ ಉತ್ತಮ. ಗಳಿಕೆ, ಖರ್ಚು ಸರಿಸಮಾನ.
ಕನ್ಯಾ:
ಅಧಿಕ ದೈಹಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಗೌರವದ ಧನ ಸಂಪಾದನೆ. ಪರರ ಸಹಾಯ ನಿರೀಕ್ಷೆ ಮಾಡದೆ ಸ್ವಂತ ನಿರ್ಣಯಗಳಲ್ಲಿ ಕಾರ್ಯ ತತ್ಪರತೆ. ಭೂಮಿ ವಾಹನಾದಿ ಆಸ್ತಿ ಇತ್ಯಾದಿ ವಿಚಾರದಲ್ಲಿ ಮುನ್ನಡೆ. ದಾಂಪತ್ಯ ಸುಖ ತೃಪ್ತಿದಾಯಕ.
ತುಲಾ:
ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ಉತ್ತಮ ಧನಾರ್ಜನೆ. ದಾಂಪತ್ಯದಲ್ಲಿ ಸಣ್ಣ ವಿಷಯಗಳ ಚರ್ಚೆ. ಹಿರಿಯರ ಆರೋಗ್ಯದ ಬಗ್ಗೆ ನಿಗಾ. ವಿದ್ಯಾರ್ಥಿಗಳಿಗೆ ಶುಭ.
ವೃಶ್ಚಿಕ:
ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು. ದೈಹಿಕ ಶ್ರಮ ಅಧಿಕವಾದ್ದರಿಂದ ದೇಹಾಯಾಸ. ದೀರ್ಘ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ.
ಧನು:
ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದ ಕಾರ್ಯಸಾಧನೆ. ಗುರುಹಿರಿಯರ ಆರೋಗ್ಯ ವೃದ್ಧಿ. ದಾಂಪತ್ಯ ತೃಪ್ತಿದಾಯಕ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳಿಂದ ಸಹಕಾರ. ಹಿರಿಯರ ಆರೋಗ್ಯ ವೃದ್ಧಿ.
ಮಕರ:
ದೇಶ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ ಸಂಚಾರ ಸಂಭವ. ಗೌರವಾದಿ ಪ್ರಾಪ್ತಿ. ಕೌಟುಂಬಿಕ ಸುಖ ವೃದ್ಧಿ. ಗೃಹೋಪಕರಣಗಳಿಗೆ ಖರ್ಚು. ಆರೋಗ್ಯದಲ್ಲಿ ಪ್ರಗತಿ. ಧಾರ್ಮಿಕ ವಿಚಾರಗಳಲ್ಲಿ ಸಕ್ರಿಯತೆ.
ಕುಂಭ:
ಉತ್ತಮ ದೈಹಿಕ ಆರೋಗ್ಯ. ಧನಾರ್ಜನೆಗೆ ಸರಿಸಮವಾದ ಖರ್ಚು ಆಸ್ತಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯದಲ್ಲಿ ಹೆಚ್ಚಿದ ಸಂತೋಷ. ವಿದ್ಯಾರ್ಥಿಗಳಿಗೆ ಹೆಚ್ಚಿದ ಜವಾಬ್ದಾರಿ. ಹಿರಿಯರಿಂದ ಪ್ರೋತ್ಸಾಹ ಸಹಕಾರ. ದೂರದ ಉದ್ಯೋಗದಲ್ಲಿ ಮುನ್ನಡೆ.
ಮೀನ:
ಮನೆಯಲ್ಲಿ ಸಂತಸದ ವಾತಾವರಣ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ದೂರದ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಗುರುಗಳ ಸಹಕಾರ. ಬಹಳ ಸಮಯದಿಂದ ವಿಳಂಬಿತ ಕಾರ್ಯಗಳಲ್ಲಿ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.