ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, Apr 19, 2022, 7:15 AM IST
ಮೇಷ:
ದೈಹಿಕ ಮಾನಸಿಕ ಸುಖ ವೃದ್ಧಿ. ನಿರೀಕ್ಷಿತ ಸಹಾಯ ಲಭ್ಯ. ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡವಿದ್ದರೂ ಕಾರ್ಯ ಸಾಧಿಸಿದ ತೃಪ್ತಿ. ಸಾಂಸಾರಿಕ ನೆಮ್ಮದಿ.
ವೃಷಭ:
ಆರೋಗ್ಯ ವೃದ್ಧಿದಾಯಕ. ವ್ಯವಹಾರ ಉದ್ಯೋಗಗಳಲ್ಲಿ ಹೆಚ್ಚಿದ ಗಮನ. ನಿರೀಕ್ಷಿತ ಧನಾಗಮನ. ಮಕ್ಕಳ ವಿಚಾರದಲ್ಲಿ ಸಂತಸ. ಗುರುಹಿರಿಯರ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುವ ಸಮಯ.
ಮಿಥುನ:
ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣಗಳಿಗೆ ಅವಕಾಶ ಒದಗಿ ಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ ಇದ್ದರೂ ಧನಾರ್ಜನೆಗೆ ಅಧಿಕ ಶ್ರಮ ವಹಿಸಬೇಕಾದೀತು. ಮಕ್ಕಳ ವಿಚಾರದಲ್ಲಿ ಖುಷಿ.
ಕರ್ಕ:
ಆರೋಗ್ಯದ ಬಗ್ಗೆ ಅಜಾಗ್ರತೆ ಸಲ್ಲದು. ದೀರ್ಘ ಪ್ರಯಾಣಗಳಿಗೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಆಸ್ತಿಗಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ ಲಭ್ಯ.
ಸಿಂಹ:
ಆರೋಗ್ಯ ವಿಚಾರದಲ್ಲಿ ಉದಾಸೀನ ಸಲ್ಲದು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ವಿಚಾರದ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ನಿರಂತರ ಧನಾರ್ಜನೆ. ಸಹೋದ್ಯೋಗಿ ಗಳಿಂದ ಉತ್ತಮ ಸಹಕಾರ.
ಕನ್ಯಾ:
ದೀರ್ಘ ಪ್ರಯಾಣದಲ್ಲಿ ದೇಹಾಯಾಸ ವಾದೀತು. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಅಗತ್ಯ. ಧನಾಗಮನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ.
ತುಲಾ:
ಜ್ಞಾನಕ್ಕೆ ಮನ್ನಣೆ. ಸ್ತ್ರೀ ಪುರುಷರಿಗೆ ಪರಸ್ಪರರಿಂದ ಸಹಾಯ ಲಾಭ. ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ. ದೇವತಾ ಕಾರ್ಯ ಗಳಲ್ಲಿ ಗೊಂದಲವಿದ್ದರೂ ಸಫಲತೆಗಾಗಿ ಪ್ರಾರ್ಥಿಸಿದ ತೃಪ್ತಿ . ಆರೋಗ್ಯದ ಬಗ್ಗೆ ಗಮನವಿರಲಿ.
ವೃಶ್ಚಿಕ:
ಉದ್ಯೋಗ ನಿಮಿತ್ತ ಪ್ರಯಾಣ. ನಿರೀಕ್ಷಿತ ಸ್ಥಾನ ಸುಖ. ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ಗೃಹೋಪಯೋಗಿ ವಸ್ತು ಸಂಗ್ರಹ. ಮಕ್ಕಳ ವಿಚಾರದಲ್ಲಿ ತಾಳ್ಮೆ ಅಗತ್ಯ. ವಿದ್ಯಾರ್ಥಿ ಗಳಿಗೆ ಮಾರ್ಗದಶನ ಅಗತ್ಯ.
ಧನು:
ಆರೋಗ್ಯದಲ್ಲಿ ಏರಿಳಿತದ ಸ್ಥಿತಿ. ಧನಾರ್ಜನೆಗೆ ಸರಿಯಾದ ಖರ್ಚು. ಕಾರ್ಮಿಕ ವರ್ಗದವರಿಂದಲೂ ವಿದ್ಯಾರ್ಥಿಗಳು ಆತ್ಮ ಶ್ಲಾಘನೆ ಮಾಡಿಕೊಳ್ಳದೇ ಅಧ್ಯಯನ ಪ್ರವೃತ್ತರಾಗಿ ಗುರಿ ಸಾಧಿಸಿಕೊಳ್ಳಿ. ದೇವತಾ ಕಾರ್ಯಗಳಲ್ಲಿ ಅಡಚಣೆ.
ಮಕರ:
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಪ್ರಯಾಣ ಯೋಗ. ನೂತನ ಮಿತ್ರರ ಸಮಾಗಮ. ಉತ್ತಮ ಧನಾರ್ಜನೆ. ಆಹಾರೋದ್ಯಮ ದವರಿಗೆ ಅಭಿವೃದ್ಧಿ. ಹಿರಿಯರ ಆರೋಗ್ಯ ಗಮನಿಸಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.
ಕುಂಭ:
ನಿರೀಕ್ಷಿತ ಧನಾಗಮ. ಸಹೋದರ ಸಮಾನರಿಗೆ ದೀರ್ಘ ಪ್ರಯಾಣ ಸುಖ. ಉದ್ಯೋಗ ವಿಚಾರದಲ್ಲಿ, ಪಾಲುದಾರಿಕಾ ವ್ಯವಹಾರದಲ್ಲಿ ಜವಾಬ್ದಾರಿ ವಹಿಸುವುದರಿಂದ ಅನುಕೂಲ ವಾತಾವರಣ. ಆರೋಗ್ಯ ಗಮನಿಸಿ. ಮಕ್ಕಳ ವಿಚಾರದಲ್ಲಿ ಸಂತೋಷ.
ಮೀನ:
ದೂರ ಪ್ರಯಾಣ. ಗೃಹೋಪ ವಸ್ತು ಸಂಗ್ರಹ. ಸಾಂಸಾರಿಕ ಸುಖ ವೃದ್ಧಿ . ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಗುರುಹಿರಿಯರ ಆರೋಗ್ಯ ವೃದ್ಧಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯದಿಂದ ಸಮಾಧಾನ ತೃಪ್ತಿ. ಹಿರಿಯರಲ್ಲಿ ಚರ್ಚೆಗೆ ಅವಕಾಶ ನೀಡದಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಅನಿರೀಕ್ಷಿತ ಘಟನೆಗಳಿಂದ ಕಂಗೆಡದಿರಿ, ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.