ಹೆಚ್ಚಿದ ಪರಿಶ್ರಮ. ಹಠ ಮಾಡದೇ ತಾಳ್ಮೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ವ್ಯವಹಾರಗಳಿಂದ ಹೆಚ್ಚಿದ ವರಮಾನ. ಗುರುಹಿರಿಯರ ಮೇಲಾಧಿಕಾರಿಗಳ ಮಾರ್ಗದರ್ಶನ ಪಾಲಿಸುವುದರಿಂದ ಯಶಸ್ಸು ಲಭಿಸೀತು.
ವೃಷಭ:
ನಿರೀಕ್ಷಿತ ಸ್ಥಾನ ಸುಖ. ಯಶಸ್ಸು ಲಭಿಸಿದ ಮನಃತೃಪ್ತಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ.
ಮಿಥುನ:
ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ಪಾಲುದಾರರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ನಿರೀಕ್ಷಿತ ಧನಾಗಮ.
ಕಟಕ:
ಅಧ್ಯಯನದಲ್ಲಿ ತತ್ಪರತೆ. ಉತ್ತಮ ಸ್ಥಾನಮಾನಕ್ಕಾಗಿ ಪ್ರಯತ್ನ. ಕುಟುಂಬಿಕರಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಪರ ಕಾರ್ಯದಲ್ಲಿ ಅಸಕ್ತಿ. ಹಣಕಾಸಿನ ವಿಚಾರದಲ್ಲಿ ಕೃಪಣತೆ ಮಾಡದಿರಿ. ಸಾಂಸಾರಿಕ ಸುಖ ಮಧ್ಯಮ.
ಸಿಂಹ:
ಹಿರಿಯರಿಂದ ಸಂತೋಷ. ಗೃಹ ವಾಹನಾದಿ ವಿಚಾರಗಳಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಣಯದಿಂದ ನಷ್ಟ ಸಂಭವ.
ಕನ್ಯಾ:
ಧೈರ್ಯ ಸಾಹಸ ಪರಿಶ್ರಮದಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ ಹಾಗೂ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ.
ತುಲಾ:
ದೀರ್ಘ ಪ್ರಯಾಣ ಸಂಭವ. ನಷ್ಟ ದ್ರವ್ಯಗಳಿಗೆ ಪ್ರಯತ್ನಿಸಿದರೆ ಸಿಗುವ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವ ಕಾಲ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಧನಾಗಮನ. ಅಭಿವೃದ್ಧಿ.
ವೃಶ್ಚಿಕ:
ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು. ಆರೋಗ್ಯ, ಸಾಂಸಾರಿಕ ಸುಖ, ಮಕ್ಕಳ ವಿಚಾರದಲ್ಲಿ, ಸಂತಸದ ಸಮಯ. ಉದ್ಯೋಗ ವ್ಯವಹಾರಾದಿಗಳಲ್ಲಿ ಉನ್ನತ ಅಭಿವೃದ್ಧಿ.
ಆರೋಗ್ಯ ವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ಭೂಮಿ ವಾಹನಾದಿ ವ್ಯವಹಾರಗಳಲ್ಲಿ ನಿರೀಕ್ಷಿತ ಸಫಲತೆ. ಕೌಟುಂಬಿಕ ಸಹಕಾರ. ಧಾರ್ಮಿಕ ವಿಚಾರಗಳಲ್ಲಿ ಸಕ್ರಿಯತೆ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ಮಕರ:
ಪಾಲುದಾರಿಕಾ ಕ್ಷೇತ್ರದ ವ್ಯವಹಾರ ಗಳಲ್ಲಿ ಗೌರವದಿಂದ ಕೂಡಿದ ಸ್ಥಾನ ಪ್ರಾಪ್ತಿ. ಗುರುಹಿರಿಯರಿಂದ ಮಾರ್ಗದರ್ಶನ ಸಹಕಾರ. ಧನಾರ್ಜನೆಗೆ ಸರಿಯಾದ ಖರ್ಚು. ಆರೋಗ್ಯ ಸ್ಥಿರ. ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸಿ.
ಕುಂಭ:
ಮಾನಸಿಕವಾಗಿ ಬಲಿಷ್ಠತೆಯಿಂದ ಸುದೃಢ. ಆರೋಗ್ಯ ಮಧ್ಯಮ. ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕ ಫಲ. ಉದ್ಯೋಗ ವ್ಯವಹಾರಸ್ಥರಿಗೆ ಪ್ರಯಾಣ ಸಂಭವ. ಅವಿವಾಹಿತರಿಗೆ ಸರಿಯಾದ ಸಂಬಂಧ ಒದಗುವ ಕಾಲ. ಆರೋಗ್ಯ ಮಧ್ಯಮ.
ಮೀನ:
ಉತ್ತಮ ದೈಹಿಕ ಮಾನಸಿಕ ಕ್ಷಮತೆ. ಕೆಲಸ ಕಾರ್ಯಗಳಲ್ಲಿ ತತ್ಪರತೆ. ಹೆಚ್ಚಿನ ಪರಿಶ್ರಮದಿಂದ ಆರ್ಥಿಕ ಸುಧಾರಣೆ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಗುರುಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ದೇವತಾ ಕಾರ್ಯದಲ್ಲಿ ಭಾಗಿಯಾದ ಸಂತಸ.