ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, May 31, 2022, 7:07 AM IST
ಮೇಷ:
ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫಲತೆ. ಧನಾರ್ಜನೆ ಉತ್ತಮ ವಾಗಿದ್ದರೂ ಏನೋ ಒಂದು ವಿಧದ ಅತೃಪ್ತಿ ತೋರೀತು. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗುವುದು.
ವೃಷಭ:
ಪಾಲುದಾರಿಕಾ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಮಾಡುವಂತಹ ಉದ್ಯೋಗದಲ್ಲಿ ಹೆಚ್ಚಿನ ಗೌರವ ಮನ್ನಣೆ ಪ್ರಾಪ್ತಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿ ಬರುವ ಸಮಯ. ಆರೋಗ್ಯದಲ್ಲಿ ಅಭಿವೃದ್ಧಿ.
ಮಿಥುನ:
ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿದ ಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಜವಾಬ್ದಾರಿ. ಸಹೋದ್ಯೋಗಿಗಳಿಂದ ಸಹಕಾರ ವಿದ್ಯಾರ್ಥಿ ಗಳಿಗೆ ಅಧ್ಯಯನಶೀಲರಿಗೆ ಗೌರವ ಪುರಸ್ಕಾರದ ಅವಕಾಶ. ಗುರುಹಿರಿಯರ ಆರೋಗ್ಯ ಸದೃಢ.
ಕರ್ಕ:
ಆರೋಗ್ಯದಲ್ಲಿ ಸುಧಾರಣೆ. ಸಣ್ಣ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರ ಗಳಲ್ಲಿ ಹೊಂದಾಣಿಕೆ ಅಗತ್ಯ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ತಾಳ್ಮೆಯ ನಿರ್ಣಯ ಫಲಿಸೀತು. ಮಿತ್ರರಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ.
ಸಿಂಹ:
ದೀರ್ಘ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.
ಕನ್ಯಾ:
ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಹೆಚ್ಚಿದ ವರಮಾನ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಸಾಂಸಾರಿಕ ಸುಖ ವೃದ್ಧಿ.
ತುಲಾ:
ಅನಿರೀಕ್ಷಿತ ಧನಾಗಮನ. ಕಾರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವರ್ತಕರಿಗೆ ಅವರವರ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ ಸಿದ್ಧಿ.
ವೃಶ್ಚಿಕ:
ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರು ಹಿರಿಯರ ಮೇಲಾಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಉದಾರತೆ, ಧೈರ್ಯ, ನಿಷ್ಠೆ, ಕಾರ್ಯ ಚತುರತೆಯಿಂದ ಜನಮನ್ನಣೆ.
ಧನು:
ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿದ ಸಮಾಧಾನ. ಗೃಹೋಪಕರಣ ವಸ್ತುಗಳ ಸಂಗ್ರಹ. ಉತ್ತಮ ಧನಾರ್ಜನೆ. ಸಣ್ಣ ಪ್ರಯಾಣ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಗುರುಗಳ ಆದೇಶ ಪಾಲನೆಯಿಂದ ಕಾರ್ಯ ಸಫಲತೆ.
ಮಕರ:
ಪರದೇಶ ಮೂಲದಿಂದ ಧನಾಗಮ. ಪಾಲುದಾರರಿಂದ ಸಹಾಯ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಉತ್ತಮ ಪ್ರಗತಿ. ಸಂಶೋಧಕ ರಿಗೆ ಸಂದರ್ಭಕ್ಕೆ ಸರಿಯಾಗಿ ಸಹಾಯ ಪ್ರಾಪ್ತಿ. ಅನಗತ್ಯ ಖರ್ಚಿಗೆ ಅವಕಾಶ ನೀಡದಿರಿ.
ಕುಂಭ:
ಉತ್ತಮ ಧನಾರ್ಜನೆ ಆರೋಗ್ಯ ವೃದ್ಧಿ. ಮಾತಿನಲ್ಲಿ ಕಠೊರತೆ ತೋರದಿರಿ. ಪಾಲುದಾರಿಕಾ ವ್ಯವಹಾರಸ್ಥರು ತಾಳ್ಮೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಪರದೇಶ ಸ್ಥಿತ ಮಿತ್ರರಿಂದ ಸಹಾಯ ಒದಗಿ ಬರುವುದು. ಪ್ರಯಾಣದಿಂದ ಅನುಕೂಲ.
ಮೀನ:
ಮಾನಸಿಕ ಆರೋಗ್ಯ ಉತ್ತಮ. ದೈಹಿಕ ಆರೋಗ್ಯ ಗಮನಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಸಾಹಸದಿಂದ ಧನಾರ್ಜನೆ ವೃದ್ಧಿ. ದೂರ ಪ್ರಯಾಣದಿಂದ ಕಾರ್ಯ ಸಫಲತೆ. ಕಾರ್ಮಿರು ಸಹೋದರರಲ್ಲಿ ತಾಳ್ಮೆಯಿಂದ ಪ್ರೀತಿಯಿಂದ ಕಾರ್ಯ ನಿರ್ವಹಿಸಿ ಪ್ರಗತಿ ಗಳಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.