ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ
Team Udayavani, Jan 28, 2022, 7:26 AM IST
ಮೇಷ:
ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಗೌರವ ಪ್ರಾಪ್ತಿ. ಧನಾರ್ಜ ನೆಗೆ ಸರಿಸಮವಾದ ಖರ್ಚು. ಮನೆಯಲ್ಲಿ ಸಂತಸದ ವಾತಾವರಣ. ಮಾನಸಿಕ ನೆಮ್ಮದಿ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ತೃಪ್ತಿ.
ವೃಷಭ:
ಸಂದರ್ಭೋಚಿತ ವಿವೇಕತನದ ನಡೆಯಿಂದ ಕಾರ್ಯಗಳಲ್ಲಿ ಜಯ. ಮಾನಸಿಕ ಸಂತುಷ್ಠಿ. ವ್ಯವಹಾರಾದಿಗಳಲ್ಲಿ ನಿರೀಕ್ಷೆಗೂ ಮೀರಿದ ಸಫಲತೆ. ಉತ್ತಮ ಧನಾರ್ಜನೆ. ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ.
ಮಿಥುನ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ದೀರ್ಘ ಪ್ರಯಾಣ ಸಂಭವ. ಸತ್ಕಾರ್ಯಕ್ಕೆ ಧನವ್ಯಯ. ಆರ್ಥಿಕ ವಿಚಾರದಲ್ಲಿ ದಕ್ಷತೆ. ಗೃಹ ವಿಚಾರದಲ್ಲಿ ಧನವ್ಯಯ ಸಂಭವ. ಹಿರಿಯರ ಮಾರ್ಗದರ್ಶನದಿಂದ ಲಾಭ.
ಕಟಕ:
ಸುಪುಷ್ಠಿಯಿಂದ ಕೂಡಿದ ದೈಹಿಕ ಆರೋಗ್ಯ. ಬಹು ಸಂಪತ್ತು ಬರುವ ಸಂಭವ. ವಿವಿಧ ವ್ಯವಹಾರಗಳಲ್ಲಿ ಲಾಭ
ಸಿಂಹ:
ಸಂಚಾರಶೀಲತೆ. ಆಚಾರ ವಿಚಾರಗಳಿಗೆ ಮಾನ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ವಾಕ್‌ಚತುರತೆಯಿಂದ ಧನಸಂಪತ್ತಿನ ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಸಹಾಯ ಪ್ರಾಪ್ತಿ. ವಿದ್ಯಾವಂತರಲ್ಲಿ ಚರ್ಚೆಗೆ ಅವಕಾಶ ನೀಡದಿರಿ.
ಕನ್ಯಾ:
ಆರೋಗ್ಯ ವೃದ್ಧಿ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯತೆ. ಬಂಧುಮಿತ್ರರ ಸಹಕಾರ. ದೂರದ ವ್ಯವಹಾರಗಳಿಂದ ಧನವೃದ್ಧಿ. ಅಧ್ಯಯನಶೀಲತೆ, ರಾಜಕೀಯ ಸರಕಾರಿ ವರ್ಗದವರ ಸಹಾಯ. ಮನೆಯಲ್ಲಿ ಸಂಭ್ರಮದ ವಾತಾವರಣ.
ತುಲಾ:
ಆರೋಗ್ಯ ಸ್ಥಿರ. ಸಂಪತ್ತು ವೃದ್ಧಿ. ವ್ಯವಹಾರಗಳಲ್ಲಿ ಪರಸ್ಪರ ಸಹಕಾರ. ನಿರೀಕ್ಷಿತ ಸ್ಥಾನ ಸುಖ. ಗುರುಹಿರಿಯರ ಆರೋಗ್ಯ ವೃದ್ಧಿ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ವಿದ್ಯಾರ್ಥಿಗಳಿಗೆ ಬದಲಾವಣೆಯ ಸಮಯ.
ವೃಶ್ಚಿಕ:
ನಿರೀಕ್ಷಿತ ಸ್ಥಾನ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾನ್ವಿತ ಅಭಿವೃದ್ಧಿ. ಸ್ಥಿರವಾದ ಅಭಿವೃದ್ಧಿದಾಯಕ ಧನ ಸಂಪಾದನೆ. ಭೂಮಿ ವಾಹನ, ಆಸ್ತಿ ವಿಚಾರದಲ್ಲಿ ಪ್ರಗತಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ.
ಧನು:
ಆರೋಗ್ಯ ವೃದ್ಧಿ. ಗುರುಹಿರಿಯರ ಸಹಕಾರ ಮಾರ್ಗದರ್ಶನದಿಂದ ಮಾಡು ವಂತಹ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ. ಉತ್ತಮ ಧನವೃದ್ಧಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಕಾರ್ಯ ಸಫಲತೆ. ಸಂಸಾರದಲ್ಲಿ ತಾಳ್ಮೆ ಇರಲಿ.
ಮಕರ:
ಆರೋಗ್ಯ ಉತ್ತಮ. ಉತ್ತಮ ಧನಾರ್ಜನೆ ಇದ್ದರೂ ಅನಗತ್ಯ ಖರ್ಚು ಆಗದಂತೆ ಗಮನಹರಿಸಿ. ಸಹೋದ್ಯೋಗಿಗಳಿಂದ ನಿರೀಕ್ಷಿತ ಸಹಕಾರ ಲಭ್ಯ. ಪತ್ರವ್ಯವಹಾರ, ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ.
ಕುಂಭ:
ದೂರ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ನಾನಾ ರೀತಿಯ ಅವಕಾಶ ಒದಗಿ ಬಂದಾವು. ಉದ್ಯೋಗ ವ್ಯವಹಾರ ಗಳಲ್ಲಿ ಉತ್ತಮ ಪ್ರಗತಿ. ಗುರುಹಿರಿಯರ ಪ್ರೋತ್ಸಾಹ ಸಿಗುವುದು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ.
ಮೀನ:
ಆರೋಗ್ಯದಲ್ಲಿ ಸುಧಾರಣೆ. ಸಾಹಸ ಶ್ರಮದಿಂದ ಕೂಡಿದ ಧನಾರ್ಜನೆ. ಪತ್ರವ್ಯವಹಾರಾದಿ ವಿಚಾರಗಳಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಾಯ ಸಲಹೆ ಅಗತ್ಯ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.