ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
Team Udayavani, May 1, 2022, 7:09 AM IST
ಮೇಷ:
ಆರೋಗ್ಯ ವೃದ್ಧಿ. ನಿಮ್ಮಲ್ಲಿರುವ ವಿದ್ಯೆಯನ್ನು ದೈರ್ಯದಿಂದ ಸರಿಯಾಗಿ ಉಪಯೋಗಿಸಿಕೊಳ್ಳಿ. ಸಭಾಕಂಪನವಿಲ್ಲದೆ ಸಂತೋಷ ದಿಂದ ನೇರ ಮಾತನಾಡಿ ಕಾರ್ಯ ಸಾಧಿಸಿಕೊಳ್ಳಿ. ಪತ್ರ ವ್ಯವಹಾರಕ್ಕೆ ಮನ್ನಣೆ.
ವೃಷಭ:
ಬಂಧುಮಿತ್ರರು ಸಹೋದರ ಸಮಾನರಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಆರ್ಥಿಕ ಅನುಕೂಲತೆ. ಕಣ್ಣು, ಉದರ, ಕಫ ಸಂಬಂಧ ತೊಂದರೆ ಆಗದಂತೆ ಕಾಳಜಿ ವಹಿಸಿ. ದೀರ್ಘ ಪ್ರಯಾಣ ವಿಚಾರದಲ್ಲಿ ಅಡಚಣೆ ತೋರಿಬಂದೀತು.
ಮಿಥುನ:
ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ಸಮಯ. ದೂರದ ಕಾರ್ಯಕ್ಷೇತ್ರದಲ್ಲಿ ಪಾಲುದಾರಿಕಾ ವ್ಯವಹಾರಗಳಲ್ಲಿ ಮಾತಿನಲ್ಲಿ ಸಂಯಮವಿರಲಿ.
ಕರ್ಕ:
ಪಾಲುದಾರಿಕಾ, ಬಂಧುಮಿತ್ರರ ಕೈಗೊಂಡ ಚಟುವಟಿಕೆಗಳಲ್ಲಿ ಮಾನಸಿಕ ಗೊಂದಲ ವಾದ ವಿವಾದಗಳಿದ್ದರೂ ಅಂತಿಮವಾಗಿ ಜಯ ನಿಮ್ಮದಾಗುವುದು. ಮಾತೃ ಸಮಾನರ ಆರೋಗ್ಯದ ಬಗ್ಗೆ ಆದ್ಯತೆ ನೀಡಿ.
ಸಿಂಹ:
ಮಿತ್ರರೊಂದಿಗೆ, ಗುರುಗಳೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೆ ಒಳಗಾಗದಿರಿ. ಆರೋಗ್ಯದ ಬಗ್ಗೆ ಗಮನಹರಿಸಿ. ದೂರದಿಂದ ಬಂದ ಅವಕಾಶವನ್ನು ಸ್ವೀಕರಿಸಿ.
ಕನ್ಯಾ:
ಧನಾಗಮ ಉತ್ತಮವಿದ್ದರೂ ಖರ್ಚಿನ ಹಿಡಿತವಿರಲಿ. ಪರರನ್ನು ತೃಪ್ತಿಪಡಿಸಲು ಹೋಗಿ ಕಷ್ಟಕ್ಕೆ ಸಿಲುಕದಿರಿ. ಮನೋರಂಜನೆ, ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಉದ್ಯೋಗದಲ್ಲಿ ಅಧಿಕ ಶ್ರಮ. ಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ.
ತುಲಾ:
ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿ ಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಗುರುಹಿರಿಯರ ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸ.
ವೃಶ್ಚಿಕ:
ಭೂಮಿ, ಆಸ್ತಿ ಇತ್ಯಾದಿ ವಿಚಾರ ಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗ ದಿರಿ. ಸರಿಯಾದ ಪತ್ರ ವ್ಯವಹಾರಕ್ಕೆ ಪ್ರಾಮುಖ್ಯತೆ ಇರಲಿ. ಸಹೋದರ ಸಮಾನರಿಂದ ಸಹಕಾರ.
ಧನು:
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ ವ್ಯವಹಾರಾದಿಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಲಭ್ಯ. ಗುರು ಹಿರಿಯರ ಉತ್ತಮ ಮಾರ್ಗದರ್ಶನ.
ಮಕರ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಅಧಿಕ ಧನಾರ್ಜನೆ. ಸತ್ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ ಲಭ್ಯ.
ಕುಂಭ:
ಆರೋಗ್ಯ ಸ್ಥಿರ. ಜನಮನ್ನಣೆ. ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಸುಖ. ಮಿತ್ರ ರಿಂದಲೂ ಗಣ್ಯರಿಂದಲೂ ಸಹಕಾರ ಪ್ರೋತ್ಸಾಹ. ದೂರದ ವ್ಯವಹಾರಗಳಲ್ಲಿ ಧನಾರ್ಜನೆ ಇತ್ಯಾದಿ ಶುಭಫಲ.
ಮೀನ:
ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ. ದೂರದ ಉದ್ಯೋಗ ಕೆಲಸ ಕಾರ್ಯಗಳಲ್ಲಿ ಅಡಚಣೆ ತೋರಿದರೂ ನಿರೀಕ್ಷಿತ ಸ್ಥಾನ ಸುಖ ಪ್ರಾಪ್ತಿ. ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕವಾಗಿ ನೆಮ್ಮದಿಯ ದಿನ . ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.