![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 26, 2022, 7:15 AM IST
ಮೇಷ:
ಚುರುಕು ಬುದ್ಧಿ ಇದ್ದರೂ ಸ್ವಾಭಿಮಾನ ಶಾಂತ ಸ್ವಭಾವದಿಂದ ಕೂಡಿದ ಕಾರ್ಯ ವೈಖರಿ. ಸಫಲತೆ ರಾಜಕೀಯ ವಿಚಾರದಲ್ಲಿ ಬೇಸರವಿದ್ದರೂ ಸ್ಥಾನಮಾನ ಪ್ರಾಪ್ತಿ. ಮಕ್ಕಳ ವಿಚಾರದಲ್ಲಿ ಹಿರಿಯರಿಗೆ ಶ್ರಮ.
ವೃಷಭ:
ಗೃಹೋಪಕರಣ ವಸ್ತು ಸಂಗ್ರಹ. ಧನಾರ್ಜನೆಗೆ ಕೊರತೆ ಇರದು. ದಾನಧರ್ಮದಿಂದ ತೃಪ್ತಿ. ಮಕ್ಕಳಿಂದ ಸುಖ. ಮಿತ್ರರು, ಸಹೋದರ ಸಹೋದರಿಯರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ.
ಮಿಥುನ:
ಉತ್ತಮ ಜನರ ಒಡನಾಟದಿಂದ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ತೃಪ್ತಿ. ಪ್ರಯಾಣದಿಂದ ನಿರೀಕ್ಷಿತ ಕಾರ್ಯ ಸಾಧನೆ.
ಕಟಕ:
ದೇವತಾ ಕಾರ್ಯದಿಂದ ಶ್ರದ್ಧೆ ಭಕ್ತಿ ಪೂರ್ವಕ ನಿಮ್ಮನ್ನು ತೊಡಗಿಸಿಕೊಂಡು ಸಂತೋಷ ಪಡುವ ಸಮಯ. ಸರಕಾರಿ ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ವಾತ, ಕಫ ಸಂಬಂಧ ದೋಷ ಬರದಂತೆ ಜಾಗ್ರತರಾಗಿರಿ.
ಸಿಂಹ:
ಪರರಿಗೆ ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ಮೇಲಧಿಕಾರಿಗಳ ಗಮನಕ್ಕೆ ಒಳಗಾಗುವಿರಿ. ಸರಿಯಾಗಿ ವಿವೇಕತೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಉತ್ತಮ ಪ್ರಗತಿ ನಿಮ್ಮದಾಗಿಸಿಕೊಳ್ಳಿ.
ಕನ್ಯಾ:
ಅನ್ಯರ ಸಹಾಯವನ್ನು ಅಪೇಕ್ಷಿಸದೆ ಸ್ವಂತ ಪ್ರಯತ್ನದಿಂದ ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನಮಾನ ಪ್ರಾಪ್ತಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ತೃಪ್ತಿ. ಉತ್ತಮ ಧನಾಗಮನವಿದ್ದರೂ ಖರ್ಚಿನ ಬಗ್ಗೆ ನಿಗಾ ವಹಿಸಿ.
ತುಲಾ:
ಉತ್ತಮ ಆಲೋಚನೆಯಿಂದಲೂ ರಂಜಿಸುವ ಗುಣದಿಂದಲೂ ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅನಿರೀಕ್ಷಿತ ಧನಾಗಮ, ಕೀರ್ತಿ ಸ್ಥಾನ ಲಾಭ. ಆತ್ಮವಿಶ್ವಾಸದಿಂದ ಕೂಡಿದ ಕಾಲ. ಮನೆಯಲ್ಲಿ ಸಂತಸದ ವಾತಾವರಣ.
ವೃಶ್ಚಿಕ:
ಕೆಲವು ಸಮಯದಿಂದ ವಹಿಸಿ ಕೊಂಡು ಬಂದ ಕ್ಲೇಷಗಳಿಗೆ ಮುಕ್ತಿ. ಪೂರ್ವ ನಿರ್ಧಾರಿತ ಯೋಜನೆಗಳು ಸಫಲಗೊಂಡು ಸಂಭ್ರಮಿಸುವ ಕಾಲ. ನಾಯಕತ್ವ ಗುಣದಿಂದ ನಿರೀಕ್ಷಿತ ಸಾಧನೆ. ಧನ ಲಾಭ.
ಧನು:
ಗುರುಹಿರಿಯರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ. ಮಾನಸಿಕ ಗೊಂದಲಕ್ಕೆ ಒಳಗಾಗದೇ ತಾಳ್ಮೆ, ವಿವೇಕ, ಉದಾರಿತನದಿಂದ ಕಾರ್ಯ ಸಾಧನೆಗೆ ವಿಪುಲ ಅವಕಾಶ. ದೂರ ಪ್ರಯಾಣ ದಲ್ಲಿ ವಿಳಂಬ.
ಮಕರ:
ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಸ್ಥಿತಿ ಆರೋಗ್ಯಕ್ಕೋಸ್ಕರ ಯೋಗ, ವ್ಯಾಯಾಮ ಮನೋರಂಜನೆ ಕಡೆ ಗಮನಹರಿಸಿ. ಮಾತೃ ಪಿತೃ ಸಮಾನರ ಆರೋಗ್ಯದ ಕಡೆ ಗಮನ ಹರಿಸಿ. ನೂತನ ಮಿತ್ರರ ಭೇಟಿ.
ಕುಂಭ:
ಹೆಚ್ಚಿನ ಸ್ಥಾನ, ಧನಾರ್ಜನೆಗೋಸ್ಕರ ಪ್ರಯಾಣ. ಉದ್ಯೋಗ ಬದಲಾವಣೆಯ ಆಲೋಚನೆ. ಗುರುಹಿರಿಯರಿಗೆ, ಮೇಲಧಿಕಾರಿಗಳಿಗೆ ತೊಂದರೆ ಕೊಡದೆ ಪ್ರಮಾಣಿಕತೆಯಿಂದ ನಿಷ್ಠೆಯಿಂದ ವ್ಯವಹರಿಸಿ ಅಭಿವೃದ್ಧಿ ಸಾಧಿಸಿರಿ.
ಮೀನ:
ಗೌಪತ್ಯೆಯ ವ್ಯವಹಾರದಿಂದ ಲಾಭ. ಪಾಲುದಾರಿಕಾ ವ್ಯವಹಾರದಲ್ಲಿ ವಾದ ವಿವಾದಕ್ಕೆ ಅವಕಾಶ ನೀಡದೇ ಪರಸ್ಪರ ಪ್ರೋತ್ಸಾಹದಿಂದ ಅಭಿವೃದ್ಧಿ. ಸಾಲಗಾರರ ಭಯವಿದ್ದರೂ ಆರ್ಥಿಕ ವಿಚಾರದಲ್ಲಿ ಸಣ್ಣ ಪ್ರಮಾಣದ ಉಳಿತಾಯ ಸಾಧಿಸುವಿರಿ. ಆರೋಗ್ಯ ವಿಚಾರದಲ್ಲಿ ಗಮನವಿರಲಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.