ನಿಮ್ಮ ಗ್ರಹಬಲ: ಇಂದು ಈ ರಾಶಿಯವರ ಎಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ
Team Udayavani, Jan 7, 2021, 7:40 AM IST
07-01-2021
ಮೇಷ: ಜನಹಿತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವು ಕಂಡುಬರಲಿದೆ. ಗೃಹ ಖರೀದಿಯ ಸಾಧ್ಯತೆ ಕಂಡು ಬಂದೀತು. ನಿಮ್ಮ ಎಣಿಕೆಗಿಂತ ಮಿಗಿಲಾಗಿ ಖರ್ಚು ತಂದೀತು. ಬೇಸಾಯ, ಕೃಷಿ ಕಾರ್ಯಕ್ಕೆ ಕುತ್ತು ಬಂದೀತು.
ವೃಷಭ: ಶ್ರಮಜೀವಿಗಳಿಗೆ ಕೊಂಚ ಲಾಭಕರವಾದ ದಿನವಾದೀತು. ಕಟ್ಟಡ ಕಾರ್ಯದವರಿಗೆ ಹೆಚ್ಚಿನ ಲಾಭವು ದೊರಕುವುದು. ಮೀನುಗಾರರಿಗೆ ಸ್ವಲ್ಪ ಕಷ್ಟದ ಸಮಯವಾದೀತು. ಧೈರ್ಯ ಕಳೆದುಕೊಳ್ಳದೆ ಮುಂದಡಿ ಇಡಿ.
ಮಿಥುನ: ಲಾಭಾಂಶವು ನಿಮಗೆ ಹೆಚ್ಚಿದ್ದು ನಿಮ್ಮೆಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ. ಜನರ ಭಾವನೆಗಳಿಗೆ ಸ್ಪಂದಿಸಿರಿ. ಧನ ವಿನಿಯೋಗವು ಸತ್ಕಾರ್ಯಕ್ಕಾಗಿ ಆದೀತು. ಆರೋಗ್ಯವು ಸುಧಾರಿಸಿ ಪುಷ್ಟಿಯಾಗಿರುವಿರಿ.
ಕರ್ಕ: ಮನೆಯಲ್ಲಿ ಗೃಹ ರಿಪೇರಿ ಯಾ ನವೀಕರಣದ ಕಾರ್ಯವು ನಡೆಯಲಿದೆ. ಲಾಭಾಂಶಕ್ಕಿಂತ ಹೆಚ್ಚು ಖರ್ಚು ನಿಮ್ಮಿಂದ ಆಗಲಿದೆ. ಹಿರಿಯ ಬಂಧುಗಳಿಂದ ಸ್ವಲ್ಪ ಕಿರುಕುಳವಿದ್ದೀತು. ರೈತಬಂಧುಗಳಿಗೆ ಅಸಮಾಧಾನವಿದೆ.
ಸಿಂಹ: ನಿಮಗೆ ಜೀವನದಲ್ಲಿ ತುಂಬಾ ನಿರಾಸೆ ಮೂಡಿ ಬಂದೀತು. ಎಲ್ಲಾ ಕಡೆಯಲ್ಲೂ ಸಮಾಧಾನವಿರದು. ನೀವು ಊಹಿಸಿದ ಕೆಲಸವೂ ಕೈಕೊಡಲಿದೆ. ಆದರೆ ಚಿಂತಿಸದಿರಿ. ಚಕ್ರ ತಿರುಗಲೇಬೇಕು. ಮುನ್ನಡೆಯಿರಿ.
ಕನ್ಯಾ: ಮಂಗಲಕಾರ್ಯ ನಿಮಿತ್ತ ಪ್ರಯಾಣವು ಕೂಡಿ ಬಂದು ಆಯಾಸವಾದೀತು. ಖರ್ಚುವೆಚ್ಚದಲ್ಲಿ ನಿಗಾ ಇರಲಿ. ಧನಾಗಮನ ಹೆಚ್ಚಿದೆ ಎಂದು ಅಪವ್ಯಯ ಮಾಡದಿರಿ. ಬಂಧುಗಳೊಂದಿಗೆ ಸಮಾಗಮ.
ತುಲಾ: ವಿದ್ಯಾಭ್ಯಾಸದಲ್ಲಿ ಹಾಗೂ ಕಾರ್ಯರಂಗದಲ್ಲಿರುವವರಿಗೆ ಪ್ರಗತಿ ತೋರಿ ಬರುವುದು. ವಿದೇಶಯಾನ ಕೂಡಿ ಬರಲಿದೆ. ಬಂಧುಗಳಿಂದ ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸೆ, ಗೌರವ, ಮರ್ಯಾದೆ ದೊರಕಲಿದೆ.
ವೃಶ್ಚಿಕ: ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ ವ್ಯವಹಾರವು ಒಳ್ಳೆಯ ಪ್ರಗತಿ ಪಥದತ್ತ ಸಾಗುವುದು. ಗೃಹದಲ್ಲಿ ಸಂಭ್ರಮಾಚರಣೆ ಕಂಡುಬಂದೀತು. ದೇಹಾಯಾಸವು ಇದ್ದರೂ ಚೇತರಿಕೆಯು ಬೇಗನೆ ಆಗುವುದು.
ಧನು: ಪ್ರಯಾಣದ ಆಯಾಸವು ತಲೆದೋರಿ ಕೆಲಸ ಕಾರ್ಯಗಳು ವಿಳಂಬಗತಿ ಕಂಡಾವು. ಉದ್ಯೋಗಿಗಳಿಗೆ ಅಷ್ಟೇನೂ ಏರುಪೇರು ಕಂಡುಬಾರದು. ವಿಧೇಯತೆ, ವಿನಯ ಹಾಗೂ ಪ್ರಾಮಾಣಿಕತೆ ನಿಮ್ಮನ್ನು ರಕ್ಷಿಸಲಿದೆ.
ಮಕರ: ಕಾರ್ಯಕ್ಷೇತ್ರದಲ್ಲಿ ಭಡ್ತಿಗೆ ಅವಕಾಶ ವಿರುತ್ತದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯು ದೊರಕೀತು. ಮಾತಾಪಿತೃಗಳಿಂದ ಒಳ್ಳೆಯ ಆದರ ದೊರಕಲಿದೆ. ಖರ್ಚುವೆಚ್ಚವು ಕಡಿಮೆಯಾಗಿ ಸಂತಸ.
ಕುಂಭ: ಅವಿರತ ದುಡಿಮೆಯಿಂದ ಆಯಾಸ ಕಂಡು ಬಂದೀತು. ಕುಟುಂಬ ಸದಸ್ಯರಲ್ಲಿ ಶುಭಮಂಗಲ ಕಾರ್ಯವು ಇರುವುದರಿಂದ ಪ್ರಯಾಣವಿದ್ದೀತು. ಪತ್ನಿ , ಮಕ್ಕಳೊಂದಿಗೆ ಸಂತಸದಿಂದ ಇರುವಿರಿ.
ಮೀನ: ಮನೆಯಲ್ಲಿ ಮಾತಾಪಿತರಿಗೆ ಮಕ್ಕಳ ಶುಭಮಂಗಲ ಕಾರ್ಯದ ಬಗ್ಗೆ ಚಿಂತೆ ತಲೆದೋರಲಿದೆ. ಮಕ್ಕಳ ಪ್ರಗತಿಯಿಂದ ಸಂತಸವಾದೀತು. ಆದರೂ ದಾರಿತಪ್ಪಿ ನಡೆಯದಿರಿ. ಅವಮಾನವಾದೀತು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.