ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭ; ದೇಹಾರೋಗ್ಯದಲ್ಲಿ ಏರುಪೇರು: ಇಂದಿನ ಗ್ರಹಬಲ
Team Udayavani, Mar 10, 2021, 7:38 AM IST
ಮೇಷ: ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವು ಅನುಭವಕ್ಕೆ ಬರುತ್ತದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆ, ಜಂಜಾಟದಿಂದ ಪಾರು ಮಾಡಲಿದೆ. ಅಧಿಕ ಆದಾಯವಿದ್ದರೂ ಖರ್ಚು ಅಷ್ಟೇ ಇರುತ್ತದೆ.
ವೃಷಭ: ರಾಜಕೀಯ ರಂಗದಲ್ಲಿ, ರಕ್ಷಣಾ ಪಡೆಗಳಲ್ಲಿ ಚೈತನ್ಯವೃದ್ಧಿ, ಶ್ಲಾಘನೆಯು ಕೇಳಿ ಬಂದೀತು. ಧನಾದಾಯವು ಹೆಚ್ಚಿದ್ದರೂ ಅಷ್ಟೇ ಖರ್ಚುಗಳು ಕಂಡುಬಂದು ತಲೆಬಿಸಿಯಾದೀತು. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶವಿದೆ.
ಮಿಥುನ: ಗೃಹದಲ್ಲಿ ಶುಭಕಾರ್ಯದ ಚಿಂತನೆ ನಡೆಯಲಿದೆ. ಎಷ್ಟು ಬಂದರೂ ಸಾಲದೆಂಬಂತೆ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರಲಿದೆ. ಕಾರ್ಯಾರ್ಥ ಅಲೆದಾಟಗಳು ಹೆಚ್ಚಲಿದೆ. ದೇಹಾರೋಗ್ಯವು ಏರುಪೇರಾಗಲಿದೆ. ಜಾಗ್ರತೆ.
ಕರ್ಕ: ಧಾರ್ಮಿಕ ಕೃತ್ಯಗಳಲ್ಲಿ ವೈರಾಗ್ಯ ಭಾವ ಬೆಳೆಯಲಿದೆ. ಸಾಂಸಾರಿಕ ಸುಖವು ಉತ್ತಮವಿದ್ದರೂ ಆಗಾಗ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹಕ್ಕೆ ಕಾರಣವಾಗಬಹುದು. ರಾಜಕೀಯ ಮಂದಿಗೆ ದ್ವಂದ್ವ ನೀತಿಯಿಂದ ಸಮಸ್ಯೆ ತಲೆದೋರಲಿದೆ.
ಸಿಂಹ: ವಿದ್ಯಾರ್ಥಿಗಳಿಗೆ ಮಾನಸಿಕ ಅಸ್ಥಿರತೆಯು ಕಾಡಲಿದೆ. ಹಂತಹಂತವಾಗಿ ಅಭಿವೃದ್ಧಿಯ ಕಾಲವಿದು. ಸದುಪಯೋಗಿಸಿರಿ. ಕೃಷಿ ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಧನ ವಿನಿಯೋಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಲಾಭವಿದೆ.
ಕನ್ಯಾ: ಎಲ್ಲ ರೀತಿಯಲ್ಲಿ ಕಾರ್ಯಾನುಕೂಲಕ್ಕಾಗಿ ಸಂಪಾದನೆಯನ್ನು ವರ್ಧಿಸಿಕೊಳ್ಳಿರಿ. ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು. ಕಾಳಜಿ ವಹಿಸಿರಿ. ವೃತ್ತಿನಿರತರಿಗೆ ಆಕಸ್ಮಿಕವಾಗಿ ಮುಂಭಡ್ತಿಯ ಯೋಗವು ಕಂಡುಬರಲಿದೆ.
ತುಲಾ: ಆರ್ಥಿಕವಾಗಿ ಧನದಾಯ ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ಸಾಂಸಾರಿಕವಾಗಿ ಆರೋಗ್ಯಭಾಗ್ಯ ಕಾಪಾಡಿಕೊಳ್ಳುವ ಹೊಣೆ ನಿಮ್ಮದು. ಕಾಳಜಿ ವಹಿಸಿರಿ. ಅವಿವಾಹಿತರಿಗೆ ಪರಿಶ್ರಮ ಅಗತ್ಯ.
ವೃಶ್ಚಿಕ: ಆರ್ಥಿಕವಾಗಿ ಧನದಾಯ ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ವೃತ್ತಿರಂಗದಲ್ಲಿ ಎಲ್ಲವನ್ನು ಸಮಾಧಾನ ಚಿತ್ತದಿಂದ ಅನುಭವಿಸಿರಿ. ರಾಜಕೀಯದಲ್ಲಿ ಅನೇಕ ರೀತಿಯಲ್ಲಿ ಕಿತ್ತಾಟ ಕಂಡುಬರಲಿದೆ.
ಧನು: ಪ್ರಯಾಣಾದಿಗಳು ಕಡಿಮೆ ಇರಲಿ. ಶಿಕ್ಷಣರಂಗದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಶೈಕ್ಷಣಿಕ ವರ್ಗಕ್ಕೆ ಸ್ಥಾನಮಾನಕ್ಕೆ ಕುಂದಿಲ್ಲ . ವ್ಯಾಪಾರ, ವ್ಯವಹಾರದಲ್ಲಿನ ಹೂಡಿಕೆ, ವಿಸ್ತರಣೆಯಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ.
ಮಕರ: ನ್ಯಾಯಾಲಯಗಳ ವಿಚಾರದಲ್ಲಿ ಮಧ್ಯಸ್ಥಿಕೆ, ರಾಜೀ ಮನೋಭಾವಗಳು ಕಾರ್ಯಾನುಕೂಲಕ್ಕೆ ಸಾಧಕವಾದೀತು. ಕ್ರೀಡಾ ಚಟುವಟಿಕೆಗಳು ಕ್ರೀಡಾಕಾರರಿಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಮಂಗಲವಾದ್ಯ ಮೊಳಗಲಿದೆ.
ಕುಂಭ: ರಾಜಕೀಯದಲ್ಲಿ ಶತ್ರು ಪರಾಜಯದ ಸೂಚನೆ ಕಾಣಿಸಿ, ಸಂತಸವೆನಿಸಲಿದೆ. ಪುಣ್ಯಕಾರ್ಯ, ಶುಭಮಂಗಲ ಕಾರ್ಯಗಳು ಮನೆಯಲ್ಲಿ ನಡೆಯಲಿದೆ. ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬಿಡುವಿರದು.
ಮೀನ: ಧನ ಸಂಗ್ರಹದ ಕೊರತೆ ಕಾಣಿಸಿಕೊಳ್ಳಲಿದೆ. ವೃತ್ತಿರಂಗದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಲ್ಲಿ ಯಶಸ್ಸು ನಿಮ್ಮದಾಗಲಿದೆ. ಪತ್ನಿಯ ತವರುಮನೆಯ ವಾಸದಿಂದ ಏಕಾಕಿತನದ ಬೇಸರ ಕಂಡುಬರಲಿದೆ. ಶುಭವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.