ಆರೋಗ್ಯ ವಿಚಾರದಲ್ಲಿ ಗಮನಹರಿಸಿ. ಗುರು ಹಿರಿಯರೊಂದಿಗೆ ತಾಳ್ಮೆ ಸಮಾಧಾನ ದಿಂದ ವ್ಯವಹರಿಸಿ.
Team Udayavani, Mar 5, 2022, 7:30 AM IST
ಮೇಷ: ಕರ್ತವ್ಯ ನಿಷ್ಠೆ . ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಜನಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ಧೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಮಕ್ಕಳಿಂದ ಸಂತೋಷ. ಗೃಹದಲ್ಲಿ ಸಂತಸದ ವಾತಾವರಣ.
ವೃಷಭ: ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿನ ಧನ ಸಂಪತ್ತು ವೃದ್ಧಿ . ಪಾಲುದಾರರೊಂದಿಗೆ ತಾಳ್ಮೆಯಿಂದ ಸಹಕರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಗುರುಹಿರಿಯರಲ್ಲಿ ತಾಳ್ಮೆಯಿಂದ ವರ್ತಿಸಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿಯೂ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆಯಿಂದಲೂ ಗೌರವ ಸ್ಥಾನ ಪ್ರಾಪ್ತಿ. ಮನೆಯ ನಿಮಿತ್ತ ಹೆಚ್ಚಿದ ಜವಾಬ್ದಾರಿ.
ಕಟಕ: ಕಾರ್ಯ ಸಾಧಿಸಿದ್ದರಿಂದ ಮನಸ್ಸಿನಲ್ಲಿ ಸಂತೋಷ. ಗುರುಹಿರಿಯರಲ್ಲಿ ಸಮಾಧಾನ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನವೃದ್ಧಿ. ದೂರದ ಮಿತ್ರರಿಂದ ಸಹಾಯ ಹಾಗೂ ಅವರಿಗಾಗಿ ಧನ ವ್ಯಯ ಸಂಭವ. ಮಕ್ಕಳಿಂದ ಸಂತೋಷ.
ಸಿಂಹ: ಆರೋಗ್ಯ ವೃದ್ಧಿ. ಸರಕಾರೀ ಕೆಲಸ ಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆಸ್ತಿ ಭೂಮಿ ಕಟ್ಟಡಗಳ ಬಗ್ಗೆ ಬದಲಾವಣೆ ಸಂಭವ. ಸನ್ಮಾರ್ಗದ ಸಂಪತ್ತಿಗೆ ಆದ್ಯತೆ ನೀಡಿ.
ಕನ್ಯಾ: ಹೆಚ್ಚಿದ ದೈಹಿಕ ಶ್ರಮ ಜವಾಬ್ದಾರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರ ಗಳಲ್ಲಿ ಕೀರ್ತಿ ಮನಃಸಂತೋಷ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಗುರುಹಿರಿಯರಿಂದ ತೃಪ್ತಿ.
ತುಲಾ: ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ವ್ಯಾಪಾರಸ್ಥರಿಗೆ, ಉದ್ಯೋಗಸ್ಥರಿಗೆ ಸರಿಯಾದ ಮನ್ನಣೆ ದೊರಕಿ ಸುಖ ಸಂತೋಷದಿಂದ ಸಂಭ್ರಮಿ ಸುವ ಸಮಯ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಮಯ. ಪ್ರಯಾಣದಿಂದ ಶುಭಫಲ.
ವೃಶ್ಚಿಕ: ಉದಾರತೆ ಧೈರ್ಯ ವಿವೇಚನೆ ಪರಾಕ್ರಮ ನಾಯಕತ್ವ ಗುಣದಿಂದ ಜನಮನ್ನಣೆ. ಉದ್ಯೋಗಸ್ಥರಿಗೆ, ವ್ಯವಹಾರಸ್ಥರಿಗೆ ಪ್ರಗತಿ ಎಲ್ಲರ ಪ್ರೀತಿ ಸಂಪಾದಿಸುವ ಸಮಯ. ನಿರೀಕ್ಷಿತ ಧನ ಸಂಪಾದನೆ ಪ್ರಗತಿ. ಅಧ್ಯಯನಶೀಲರಿಗೆ ಅನುಕೂಲಕರ ಪರಿಸ್ಥಿತಿ.
ಧನು: ಆರೋಗ್ಯ ವಿಚಾರದಲ್ಲಿ ಗಮನಹರಿಸಿ. ಗುರು ಹಿರಿಯರೊಂದಿಗೆ ತಾಳ್ಮೆ ಸಮಾಧಾನ ದಿಂದ ವ್ಯವಹರಿಸಿ. ವ್ಯಾಪಾರ ವಹಿವಾಟು ಉದ್ಯೋಗ ನಿರತರಿಗೆ ತೃಪ್ತಿದಾಯಕ ದಿನ. ಗೃಹೋಪಕರಣಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ.
ಮಕರ: ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ಕಾರ್ಯ ನಿರ್ವಹಿಸಿ. ದೂರ ಪ್ರಯಾಣ ಅನುಕೂಲಕಾರಿ ಯಾಗಲಾರದು. ಖರ್ಚಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿ ಗಳಿಗೆ ಪರಿಶ್ರಮದಿಂದ ಸಫಲತೆ.
ಕುಂಭ: ನಿರೀಕ್ಷಿತ ಧನಾಗಮನವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರೀತು. ನೂತನ ಮಿತ್ರರ ಸಂಪರ್ಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಪ್ರಗತಿ. ಪ್ರಯಾಣ ಲಾಭಕರ. ಘರ್ಷಣೆಗೆ ಅವಕಾಶ ನೀಡದಿರಿ.
ಮೀನ: ಮಾನಸಿಕ ಆರೋಗ್ಯ ಸುದೃಢವಾಗಿದ್ದರೂ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ದಾಂಪತ್ಯದಲ್ಲಿ ತೃಪ್ತಿ ಸುಖ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನಾರ್ಜನೆ. ಆಲೋಚನೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ ಸಫಲತೆ. ಗುರು ಹಿರಿಯರ ಆರೋಗ್ಯ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.