ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆತ್ಮೀಯ ಮಿತ್ರರ ಭೇಟಿಯಿಂದ ತುಂಬಾ ಸಂತಸವಾಗಲಿದೆ
Team Udayavani, Jan 13, 2021, 7:31 AM IST
13-01-2021
ಮೇಷ: ವೃತ್ತಿರಂಗದಲ್ಲಿ ಸ್ಥಾನಮಾನ, ಪ್ರೀತಿ ಪ್ರಾಪ್ತಿಯಾದೀತು. ಕಾರ್ಯರಂಗದಲ್ಲಿ ಪ್ರಶಂಸೆ ಕೇಳಿ ಬರಲಿದೆ. ಅತೀ ವಿಶ್ವಾಸ, ಪ್ರೀತಿ, ಸ್ನೇಹ ಯಾರಲ್ಲೂ ಬೇಡ. ನ್ಯಾಯಾಲಯದ ಕಾರ್ಯದಲ್ಲಿ ನಿಮ್ಮ ವಿರುದ್ಧ ತೀರ್ಪು ಬರಲಿದೆ.
ವೃಷಭ: ಅನೇಕ ಬಾರಿ ನಿಮ್ಮ ಎಣಿಕೆಯಂತೆ ದೈವಬಲವು ಒದಗಿ ಬಂದು ನೀವೆಣಿಸಿದ ಕಾರ್ಯವು ಸುಗಮವಾಗಿ ಸಾಗಲಿದೆ. ಗೃಹ ನಿರ್ಮಾಣ ಯಾ ಕಟ್ಟಡ ಸಾಮಗ್ರಿಗಳ ಖರೀದಿಯು ಕಂಡುಬರಲಿದೆ. ಅತೀ ಚಿಂತೆ ಬೇಡ.
ಮಿಥುನ: ಗೃಹ ಬಳಕೆಯ ಸಾಮಾಗ್ರಿಗಳ ಖರೀದಿ ಕಂಡುಬರುವುದು. ಆತ್ಮೀಯ ಮಿತ್ರರ ಭೇಟಿಯಿಂದ ತುಂಬಾ ಸಂತಸವಾಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರವು ಕಂಡುಬರುವುದು.
ಕರ್ಕ: ಗೃಹದಲ್ಲಿ ಮಾತಿಮಾತಿಗೆ ಗೃಹಿಣಿಯೊಂದಿಗೆ ಕಲಹವು ಏರ್ಪಟ್ಟೀತು. ಆದುದರಿಂದ ಮಾತು ಕಡಿಮೆ ಮಾಡಿದರೆ ಉತ್ತಮವಾದೀತು. ದಾಯಾದಿಗಳಿಂದ ಕಿರಿಕಿರಿಯು ಕಂಡು ಮನ ಕಲುಷಿತಗೊಂಡೀತು.
ಸಿಂಹ: ವ್ಯಾಪಾರ, ವ್ಯವಹಾರದಲ್ಲಿ ಮೂಲಧನಕ್ಕೆ ಹಾನಿಯಾಗದಂತೆ ಜಾಗ್ರತೆ ವಹಿಸುವುದು ಉತ್ತಮ. ನಿಮ್ಮ ವಿಶಾಲ ಮನಸ್ಸಿನ ದುರುಪಯೋಗವಾದೀತು. ಅಧಿಕಾರಿ ವರ್ಗದವರೊಂದಿಗೆ ಕಲಹ, ಮನಃಸ್ತಾಪವು ಬೇಡ.
ಕನ್ಯಾ: ಆರೋಗ್ಯದಲ್ಲಿ ಪಿತ್ತ, ಉಷ್ಣವಾಯು ಪ್ರಕೋಪ ತೋರಿಬರಲಿದೆ. ಮಕ್ಕಳೊಂದಿಗೆ ವಿರಸ ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ ಸಲ್ಲಲಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆಯಾದೀತು.
ತುಲಾ: ರಾಜಕೀಯ ವರ್ಗದಲ್ಲಿ ಸ್ಥಾನಮಾನ, ಗೌರವ ಬೆಳೆಯಲಿದೆ. ಅಧಿಕಾರಿ ವರ್ಗದವರೊಂದಿಗೆ ರಾಜೀ ಮನೋಭಾವ ಬೆಳೆಸಿಕೊಳ್ಳಿರಿ. ಸರಕಾರೀ ಯಾ ನ್ಯಾಯಾಲಯ ವಿಭಾಗದಿಂದ ನಿಮಗೆ ಅವಮಾನ ಪ್ರಸಂಗ ಇರುತ್ತದೆ.
ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಹಲವು ವಿರುದ್ಧಗಳು ನಿಮಗೆ ಕಂಡುಬಂದು ನಿಮಗೇ ಅಚ್ಚರಿಯಾದೀತು. ಅನಾವಶ್ಯಕ ಖರ್ಚುವೆಚ್ಚಗಳು ಕಂಡುಬಂದಾವು. ದೂರ ಪ್ರಯಾಣವು ಕಂಡು ಬರಲಿದೆ. ಸದ್ಯದಲ್ಲೇ ಶುಭವಿದೆ.
ಧನು: ಸಂಗೀತ, ಚಿತ್ರೋದ್ಯಮಿ ಯಾ ಕಲಾವಿದರಿಗೆ ಪ್ರಗತಿಯು ಕಂಡುಬರುವುದು. ಗೃಹದಲ್ಲಿ ಅಂತಃ ಕಲಹಕ್ಕೆ ಕಾರಣರಾಗದಿರಿ. ಚರ್ಚೆ, ವಿಚಾರ ವಿನಿಮಯದಿಂದ ಕಾರ್ಯಸಿದ್ಧಿಯಾಗಲಿದೆ. ಸಹನೆ ಇರಲಿ.
ಮಕರ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಉಪದ್ರವದಿಂದ ಸಮಸ್ಯೆಗಳು ತೋರಿಬರಲಿದೆ. ತಂದೆಮಕ್ಕಳೊಳಗೆ ಮನಸ್ತಾಪ ಸಂಭವ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಯಲ್ಲಿ ಪ್ರಗತಿ ತೋರಿಬರುವುದು. ಶುಭವಿದೆ.
ಕುಂಭ: ದೀರ್ಘಕಾಲೀನ ಕಾರ್ಯಗಳಲ್ಲಿ ಅತೀ ಲಾಭವು ದೊರಕಲಿದೆ. ಧನಾಗಮನದಲ್ಲಿ ತೊಂದರೆ ಇಲ್ಲ. ಆದರೂ ಖರ್ಚುವೆಚ್ಚ ಅಧಿಕವಾಗಿರುತ್ತದೆ. ವಿದ್ಯಾಭ್ಯಾಸದಲ್ಲಿ ಕೊರತೆ ಕಂಡುಬಂದು ಹಿನ್ನಡೆಯಾದೀತು.
ಮೀನ: ನಿಮ್ಮಿಚ್ಛೆಯಂತೆ ಎಲ್ಲಾ ಕೆಲಸ ಕಾರ್ಯಗಳು ನಡೆದು ಸಂತಸವಾದೀತು. ಆದರೂ ಅತೀ ವಿಶ್ವಾಸವು ಉತ್ತಮವಲ್ಲ. ಉಳಿತಾಯ ಮಾಡಿದ ಹಣವೆಲ್ಲ ಖರ್ಚಾಗಿ ಹೋಗಲಿದೆ. ಅತೀ ಸಲುಗೆ ಎಂದಿಗೂ ಬೇಡ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.