ಇಂದು ನಿಮ್ಮ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ಇದು ಸಂತಸದ ಕಾಲ
Team Udayavani, Jan 14, 2021, 7:54 AM IST
14-01-2021
ಮೇಷ: ವಿದ್ಯಾರ್ಥಿಗಳಿಗೆ ಯಶೋ ಅಭಿವೃದ್ಧಿಯು ತೋರಿಬರುವುದು. ಹಾಳು ವ್ಯಸನದ ಗೀಳು ಹತ್ತೀತು. ಜಾಗ್ರತೆ ಮಾಡಿರಿ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಕಾರ್ಯ ನಿಮಿತ್ತ ಪ್ರವಾಸವು ಕೂಡಿ ಬರಲಿದೆ.
ವೃಷಭ: ಕ್ಲೇಶಾಯಾಸ ಆಗಾಗ ತೋರಿ ಬಂದರೂ, ಅಧಿಕ ಖರ್ಚುವೆಚ್ಚಗಳು ಕಾಣಿಸಿಕೊಂಡರೂ ಉತ್ತಮ ಧನಾಗಮನದಿಂದ ಕಾರ್ಯಸಿದ್ಧಿ ಇರುತ್ತದೆ. ಹಿರಿಯರೊಂದಿಗೆ ಮನಸ್ತಾಪ ಬೇಡ.
ಮಿಥುನ: ನಯವಂಚಕರ ಸಹಯೋಗ, ಚಾಡಿಮಾತು ಇತ್ಯಾದಿಗಳಿಂದ ದೂರವಿದ್ದಷ್ಟು ಉತ್ತಮ. ಎಣಿಕೆಯಂತೆ ಕೆಲಸವಾಗಿ ಕೌಟುಂಬಿಕವಾಗಿ ಸಂತಸದಿಂದಿರುವಿರಿ. ಪ್ರತಿಷ್ಠಿತರಿಂದ ಪ್ರಶಂಸೆ ಇದೆ.
ಕರ್ಕ: ಅವಿವಾಹಿತರಿಗೆ ಇದು ಸಂತಸದ ಕಾಲ. ಗೃಹಿಣಿಯ ಸುಪ್ರಸನ್ನತೆ ಹಾಗೂ ಸುಖಶಾಂತಿ ತರಬಲ್ಲದು. ಆರೋಗ್ಯದಲ್ಲಿ ಮಾತ್ರ ಕೊಂಚ ಏರುಪೇರು ಕಂಡುಬರಲಿದೆ. ಸಹನೆ ಇರಲಿ.
ಸಿಂಹ: ಧಾರ್ಮಿಕ ಕಾರ್ಯಕ್ಕೆ ವಿಘ್ನ ಅಡ್ಡಿಯಾದೀತು. ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭ ತಂದು ಕೊಡಲಿದೆ. ಆರೋಗ್ಯ ಮಾತ್ರ ಆಗಾಗ ಕೈಕೊಡಲಿದೆ. ಹಣದ ಅಡಚಣೆಯು ಕಂಡುಬಂದರೂ ನೀಗಲಿದೆ.
ಕನ್ಯಾ: ಸ್ವಜನ ಪಕ್ಷಪಾತದಿಂದ ಮಾನಸಿಕ ಕಿರಿಕಿರಿ ಕಂಡು ಬಂದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮುಂದುವರಿಯಬೇಕಾದೀತು. ಅವಿವಾಹಿತರಿಗೆ ಕಂಕಣಬಲದ ಯೋಗ ಕೂಡಿಬಂದೀತು.
ತುಲಾ: ಮಂಗಲ ಕಾರ್ಯಗಳಿಗೆ ವಿಳಂಬ ಹಾಗೂ ಆರ್ಥಿಕವಾಗಿ ನಾನಾ ರೀತಿಯ ಖರ್ಚಿನ ಚಿಂತೆಯು ಹೆಚ್ಚಾಗಲಿದೆ. ಸದ್ಯ ನೂತನ ಕಾರ್ಯಾರಂಭಕ್ಕೆ ಇದು ಸಕಾಲವಲ್ಲ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಬೇಕು.
ವೃಶ್ಚಿಕ: ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು. ಧನಾಗಮನಕ್ಕೂ, ಕಾರ್ಯಸಿದ್ಧಿಗೂ ದಾರಿ ಸುಗಮ ವಾಗಿರುವುದು. ಸಮಾಧಾನಕರವಾದ ದಿನವಿದು. ಮಾತುಮಾತಿಗೆ ಸಿಡುಕುವ ನಿಮಗೆ ತಾಳ್ಮೆ ಸಹನೆ ಅಗತ್ಯ.
ಧನು: ಗುರು ಕರುಣೆಯಿದ್ದು ಧನಾಗಮನಕ್ಕೆ ಏನೂ ಕೊರತೆ ಇರದು. ಗೃಹಿಣಿಯ ಮುನಿಸು ತಲೆ ಕೆಡಿಸಲಿದೆ. ಶಿಕ್ಷಣ ಖಾತೆಯವರಿಗೆ ಶ್ರಮ ಹೆಚ್ಚಿದ್ದರೂ ಸಾಕಷ್ಟು ಪ್ರತಿಫಲ ಸಿಗದೆ ನಿರಾಸೆಯಾದೀತು.
ಮಕರ: ಶುಭಫಲಗಳು ಅಷ್ಟಕಷ್ಟೇ ಇರುತ್ತದೆ. ಗೃಹದಲ್ಲೂ, ಕಾರ್ಯಕ್ಷೇತ್ರದಲ್ಲೂ ನಿಮ್ಮ ಪ್ರಾಮಾಣಿಕತೆಯಿಂದ ಯಶಸ್ಸು ಕಂಡುಬರಲಿದೆ. ಆಪ್ತರ ಕಾಲೋಚಿತ ಸಹಕಾರದಿಂದ ಎಣಿಕೆಯಂತೆ ಕಾರ್ಯಸಾಧನೆಯಾಗಲಿದೆ.
ಕುಂಭ: ವರ್ತಕ ವರ್ಗಕ್ಕೆ ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ಹಿರಿಯರ ಕಾಲೋಚಿತ ಸಲಹೆಗಳನ್ನು ಪಾಲಿಸಿದ್ದಲ್ಲಿ ಏಳಿಗೆ ಖಂಡಿತ ಸಾಧ್ಯವಾಗಲಿದೆ.
ಮೀನ: ಬಂಧು ದ್ವೇಷದಿಂದ, ದಾಯಾದಿಗಳ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮಂಗಲ ಕಾರ್ಯಗಳ ಮಾತುಕತೆಯು ಫಲ ನೀಡಲಿದೆ. ನಷ್ಟವೆಂದು ತಿರಸ್ಕರಿಸಿದ ಹೂಡಿಕೆಗಳು ಉತ್ತಮ ಏರಿಕೆ ಕಾಣಲಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.