![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 14, 2023, 7:10 AM IST
ಮೇಷ: ಕರ್ತವ್ಯ ನಿಷ್ಠೆ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ ಜನಮನ್ನಣೆ. ಉತ್ತಮ ಧನಾರ್ಜನೆ. ಸ್ಪರ್ಧೆಗಳಲ್ಲಿ ಜಯ. ಗುರುಹಿರಿಯರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.
ವೃಷಭ: ಉತ್ತಮ ವಾಕ್‌ಚತುರತೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಹೆಚ್ಚಿದ ಧನ ಸಂಪತ್ತು ವೃದ್ಧಿ. ಪಾಲುದಾರರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ದೂರದ ಸ್ಥಳದಿಂದ ಜ್ಞಾನ ಸಂಪಾದನೆ. ಮನೆಯಲ್ಲಿ ಸಂಭ್ರಮ ಪರಿಸ್ಥಿತಿ.
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಮಗ್ನತೆ. ವಿದ್ಯಾರ್ಜನೆಯಲ್ಲಿಯೂ ಮಕ್ಕಳಲ್ಲಿಯೂ ಸಮಯ ಕಳೆಯುವಿಕೆ. ಸಾಹಸ ಪ್ರವೃತ್ತಿಯಿಂದಲೂ ಬುದ್ಧಿವಂತಿಕೆಯಿಂದಲೂ ಗೌರವ ಸ್ಥಾನ ಪ್ರಾಪ್ತಿ. ದಾಂಪತ್ಯ ತೃಪ್ತಿಕರ. ಮನೆಯ ನಿಮಿತ್ತ ಹೆಚ್ಚಿದ ಜವಾಬ್ದಾರಿ.
ಕರ್ಕ: ಕಾರ್ಯ ಸಾಧಿಸಿದ್ದರಿಂದ ಮನಸ್ಸಿನಲ್ಲಿ ಸಂತೋಷ. ಗುರುಹಿರಿಯರಲ್ಲಿ ಸಮಾದಾನ ತಾಳ್ಮೆ ಅಗತ್ಯ. ನಿರೀಕ್ಷಿಸಿದಂತೆ ಧನವೃದ್ಧಿ. ದೂರದ ಮಿತ್ರರಿಂದ ಸಹಾಯ ಹಾಗೂ ಅವರಿಗಾಗಿ ಧನ ವ್ಯಯ ಸಂಭವ. ಮಕ್ಕಳಿಂದ ಸಂತೋಷ.
ಸಿಂಹ: ಆರೋಗ್ಯ ವೃದ್ಧಿ. ಸರಕಾರೀ ಕೆಲಸಗಳಲ್ಲಿ ಪ್ರಗತಿ. ನಿರೀಕ್ಷಿತ ಸ್ಥಾನ ಲಾಭ. ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆಸ್ತಿ ಭೂಮಿ ಕಟ್ಟಡಗಳ ಬಗ್ಗೆ ಬದಲಾವಣೆ ಸಂಭವ. ಸನ್ಮಾರ್ಗದ ಸಂಪತ್ತಿಗೆ ಆದ್ಯತೆ ನೀಡಿ.
ಕನ್ಯಾ: ಹೆಚ್ಚಿದ ದೈಹಿಕ ಶ್ರಮ ಜವಾಬ್ದಾರಿ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ, ಮನಃ ಸಂತೋಷ. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಗುರುಹಿರಿಯರಿಂದ ಮನೆಯಲ್ಲಿ ತೃಪ್ತಿಕರ ವಾತಾವರಣ.
ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಹು ಜನ ಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ.
ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ. ಮನಃ ತೃಪ್ತಿ. ಭೂಮ್ಯಾದಿ ವ್ಯವಹಾರಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂಭ್ರಮ.
ಧನು: ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ.
ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಾಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧುಮಿತ್ರರ ಸಹಾಯ ಸಹಕಾರ ಲಭಿಸುವುದು.
ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್ ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ.
ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನ ವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು. ಬಂಧುಮಿತ್ರರಿಗಾಗಿ ಹೆಚ್ಚಿನ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.