![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 23, 2023, 7:14 AM IST
ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನ ಸಂಪತ್ತು ಲಭಿಸದಿದ್ದರೂ ಮನಃತೃಪ್ತಿಗೆ ಕೊರತೆಯಾಗದು .
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ಪ್ರಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಅಧಿಕ ಧನಸಂಚಯನ. ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ. ಮಕ್ಕಳಿಂದ ಸಂತೋಷ.
ಮಿಥುನ: ಚುರುಕುತನ, ಪಟುತ್ವ, ವಿದ್ಯೆ ವಿನಯ ಸಂಪನ್ನತೆಯಿಂದ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನಮಾನ ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಧನಸಂಪತ್ತು ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕರ್ಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಗುರುಹಿರಿಯರಲ್ಲಿ ಸಮಾಧಾನದಿಂದ ವರ್ತಿಸಿ ಅವರ ಮಾರ್ಗದರ್ಶನ ಸದುಪಯೋಗಿಸಿಕೊಳ್ಳುವುದರಿಂದ ಶ್ರೇಯಸ್ಸು ಲಭ್ಯ.
ಸಿಂಹ: ಆರೋಗ್ಯ ಗಮನಿಸಿ. ಸ್ಥಿರ ಬುದ್ಧಿಯಿಂದ ಕಾರ್ಯಪ್ರವೃತ್ತರಾಗಿ. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಅಧಿಕ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ ಕಂಡೀತು.
ಕನ್ಯಾ: ದೂರ ಪ್ರಯಾಣ ಬಂಧು ಮಿತ್ರರ ಮಿಲನ ಸಂತೋಷ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ . ಮಕ್ಕಳಿಂದ ಸುಖ ಸಂತೋಷದ ವಾರ್ತೆ. ಆರ್ಥಿಕ ಸುದೃಢತೆ ಇತ್ಯಾದಿ ಶುಭಫಲ ಕಂಡು ಬಂದೀತು.
ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.
ವೃಶ್ಚಿಕ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಉದ್ಯೋಗದಲ್ಲಿ ಹೆಚ್ಚಿದ ಗೌರವ.
ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಸ್ಥಾನ ಪ್ರಾಪ್ತಿ .
ಮಕರ: ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು. ಜನ ಮನ್ನಣೆ. ಉತ್ತಮ ವಾಕ್‌ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ ವೃದ್ಧಿ. ನೂತನ ಮಿತ್ರರ ಸಮಾಗಮ. ದೀರ್ಘ ಪ್ರಯಾಣ ಯೋಗ.
ಕುಂಭ: ಅನಿರೀಕ್ಷಿತ ಧನಲಾಭ. ಮಿತ್ರರಿಂದಲೂ ಸಹೋದರರಿಂದಲೂ ಸುಖ. ಮಕ್ಕಳು, ವಿದ್ಯಾರ್ಥಿಗಳ ವಿಚಾರದಲ್ಲಿ ಸಂತೋಷದ ಪರಿಸ್ಥಿತಿ. ಆಹಾರೋದ್ಯೋಮ ಉದ್ಯೋಗದವರಿಗೆ ಅಭಿವದ್ಧಿ. ಜಲೋತ್ಪನ್ನ ವಸ್ತುಗಳ ವ್ಯವವಾರಸ್ಥರಿಗೆ ಉತ್ತಮ ದಿನ.
ಮೀನ: ಆರೋಗ್ಯ ಉತ್ತಮ. ಉದ್ಯೋಗದಲ್ಲಿ ನಿರೀಕ್ಷಿತ ಗೌರವ ಉತ್ತಮ ಧನಾರ್ಜನೆ ವಿದ್ಯಾರ್ಥಿಗಳಿಗೆ ಏರಿಳಿತದ ಅನುಭವ. ಧಾರ್ಮಿಕ ಕಾರ್ಯಗಳಲ್ಲಿ ಮಿತವ್ಯಯ. ಸಣ್ಣ ಪ್ರಯಾಣ. ಮಕ್ಕಳಿಂದ ಸುಖ. ಸಹೋದರರಲ್ಲಿ ಪ್ರೀತಿಯಿಂದ ವ್ಯವಹರಿಸಿ ಕಾರ್ಯ ಸಾಧನೆ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.