Daily Horoscope: ಹಣಕಾಸಿನ ವಿಚಾರದಲ್ಲಿ ಜಾಗೃತೆಯ ನಡೆಯಿಂದ ಪ್ರಗತಿ
Team Udayavani, May 24, 2023, 7:13 AM IST
ಮೇಷ: ಆರೋಗ್ಯ ಸ್ಥಿರ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕೂಡಿದ ನಡೆ. ದೂರ ವ್ಯವಹಾರ ದಿಂದ ಧನವೃದ್ಧಿ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರನ್ನು ಅನುಸರಿಸುವುದರಿಂದ ಕ್ಷೇಮ .
ವೃಷಭ: ಪ್ರಯಾಣದಿಂದ ದೇಹಾಯಾಸ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಅಭಿವೃದ್ಧಿ. ಧಾರ್ಮಿಕ ಕೆಲಸಗಳಿಂದ ಮಾನಸಿಕ ನೆಮ್ಮದಿ. ಗೃಹೋಪಕರಣ ವಸ್ತುಗಳ ಸಂಗ್ರಹಕ್ಕೆ ಧನ ವ್ಯಯ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ಮಿಥುನ: ನಿರೀಕ್ಷಿತ ಸ್ಥಾನ ಪ್ರಾಪ್ತಿ. ಅಧ್ಯಯನಶೀಲ ರಿಗೆ ಉತ್ತಮ ಗೌರವ ಆದರಗಳು ಸಿಗುವ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ದೈಹಿಕವಾಗಿಯೂ, ಮಾನಸಿಕವಾಗಿಯೂ ಆರೋಗ್ಯ ಸುದೃಢ. ಹಣಕಾಸಿನ ವಿಚಾರದಲ್ಲಿ ಜಾಗೃತೆ ಅಗತ್ಯ.
ಕರ್ಕ: ದೈಹಿಕ ಆರೋಗ್ಯ ಉತ್ತಮವಿದ್ದರೂ ಮಾನಸಿಕ ಒತ್ತಡ ಸಂಭವ. ಉದ್ಯೋಗ ಕೆಲಸ ಕಾರ್ಯಗಳಲ್ಲಿ ಉನ್ನತಿ. ಉತ್ತಮ ಧನ ಸಂಮೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಕಿರಿಯರಿಗೆ ಅನುಕೂಲಕರ ಪರಿಸ್ಥಿತಿ.
ಸಿಂಹ: ಗೃಹೋಪಕರಣ ವಸ್ತುಗಳ ಸಂಗ್ರಹಕ್ಕಾಗಿ ಧನವ್ಯಯ. ಉದ್ಯೋಗ ವ್ಯವಹಾರಗಳಲ್ಲಿ ಒತ್ತಡಗಳಿದ್ದರೂ ಕಾರ್ಯ ಪೂರೈಸುವಿರಿ. ಧನಾರ್ಜನೆಗೆ ಕೊರತೆ ಕಾಣದು. ಸಾಂಸಾರಿಕ ಸುಖ ತೃಪ್ತಿದಾಯಕ. ನೂತನ ಮಿತ್ರರ ಸಹಕಾರ. ಹಿರಿಯರ ಉತ್ತಮ ಮಾರ್ಗದರ್ಶನ.
ಕನ್ಯಾ: ಆರೋಗ್ಯ ಉತ್ತಮ, ಧನಾರ್ಜನೆ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸರಿಯಾದ ಯೋಜನೆಯಿಂದ ಕೂಡಿದ ಕಾರ್ಯ ವೈಖರಿ. ಸಹೋದರ ಸಹೋದ್ಯೋಗಿ ಸಹಾಯ ಸಹಕಾರ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.
ತುಲಾ: ಜ್ಞಾನ ವಿವೇಕ ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರು ಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.
ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಹೆಚ್ಚು ಶ್ರಮ ವಹಿಸದೇ ಕಾರ್ಯ ಪ್ರವೃತ್ತರಾಗಿ. ದೀರ್ಘ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅಧಿಕ ಚಿಂತಿಸುವವರಿಗೆ ಜವಾಬ್ದಾರಿ ವಹಿಸುವಾಗ ತಿಳಿದು ನಿರ್ಣಯಿಸಿ.
ಧನು: ನಿರೀಕ್ಷಿತ ಸ್ಥಾನಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ದಂಪತಿಗಳಿಂದ ಸಾಮರಸ್ಯ ಕಾಪಾಡಲು ಅದಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಯಾವುದೇ ಕೊರತೆಯಾಗದು .
ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸಿದ ತೃಪ್ತಿ. ಅನಿರೀಕ್ಷಿತ ಧನವೃದ್ಧಿ. ಅತೀ ಬುದ್ಧಿವಂತಿಕೆಯ ಮಾತುಗಳಿಂದ ಕೂಡಿದ ಕಾರ್ಯವೈಖರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ ಹಾಗೂ ಸಫಲತೆ.
ಕುಂಭ: ಆಸ್ತಿ ಸಂಚಯನದಲ್ಲಿ ಪ್ರಗತಿ. ದೂರ ಪ್ರಯಾಣ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ಗುರುಹಿರಿಯರಿಂದ ಉತ್ತಮ ಸಹಕಾರ ಪ್ರೋತ್ಸಾಹ. ಹಣಕಾಸಿನ ವಿಚಾರದಲ್ಲಿ ಜಾಗೃತೆಯ ನಡೆಯಿಂದ ಪ್ರಗತಿ. ಸಾಲ ಬಾಧೆ.
ಮೀನ: ಆರೋಗ್ಯ ವೃದ್ಧಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಿತ್ರರೊಂದಿಗೆ ತಾಳ್ಮೆಯಿಂದ ವಿವೇಚನೆಯಿಂದ ನಡೆದುಕೊಳ್ಳಿ. ಅನಗತ್ಯ ಜವಾಬ್ದಾರಿ ತೆಗೆದುಕೊಳ್ಳದಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.