ಈ ರಾಶಿಯವರಿಗಿಂದು ಗಣ್ಯ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಹವಾಸವು ಉನ್ನತಿ ತಂದುಕೊಡಲಿದೆ
Team Udayavani, Jan 19, 2021, 8:25 AM IST
19-01-2021
ಮೇಷ: ಅವಿವಾಹಿತರಿಗೆ ಉತ್ತಮ ಸಂಬಂಧಗಳಿಗಾಗಿ ತುಂಬಾ ಪ್ರಯಾಸ ಪಡಬೇಕಾಗಬಹುದು. ದಿನವಿಡೀ ಕಠಿಣ ಪರಿಶ್ರಮದಿಂದ ದುಡಿವ ನಿಮಗೆ ಉತ್ತಮ ಫಲಿತಾಂಶ ದೊರಕದು. ಕಿರು ಪ್ರಯಾಣ ಬರಬಹುದು.
ವೃಷಭ: ನಿಮ್ಮ ಮನಸ್ಸಿಗೆ ಸಮಾಧಾನವಾಗುವ ಘಟನೆಗಳು ನಡೆದೀತು. ಆರೋಗ್ಯದ ಏರುಪೇರಿನಿಂದ ಮನಸ್ಸು ವ್ಯಾಕುಲಗೊಂಡೀತು. ಆದರೆ ಹೆದರುವ ಅವಶ್ಯಕತೆ ಇಲ್ಲ. ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇದೆ.
ಮಿಥುನ: ಮನಸ್ಸು ಸಂತೋಷದಿಂದ ಹಾರಾಡಲಿದೆ. ಅಪರಿಚಿತರ ಭೇಟಿಯಾಗುವ ಸುಸಂದರ್ಭ ಬರಲಿದೆ. ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರಿಗೆ ಭಡ್ತಿಯ ಸಂಭವವಿದೆ. ಕಿರು ಸಂಚಾರ ಯೋಗವಿದೆ.
ಕರ್ಕ: ಮನೆಯಲ್ಲಿ ಮಕ್ಕಳಿಂದ ಸಂತಸ, ಸಮಾಧಾನ ಸಿಗಲಿದೆ. ವಿದ್ಯಾರ್ಥಿವರ್ಗಕ್ಕೆ ಅಭಿವೃದ್ಧಿ ಕಂಡು ಬರಲಿದೆ. ನೀವು ಹಾಕಿದ ಪ್ರಯತ್ನ ಸಾರ್ಥಕವಾಗಲಿದೆ. ದೇಹಾರೋಗ್ಯದಲ್ಲಿ ಶೀತ, ಕಫದ ಭಾದೆಯು ಕಂಡು ಬರಲಿದೆ.
ಸಿಂಹ: ಮನಸ್ಸು ಇಬ್ಬಗೆಯಲ್ಲಿ ಆಲೋಚನೆಗೆ ಒಳಗಾದೀತು. ನೀವು ಆಲೋಚಿಸಿದ ಕಾರ್ಯವು ಕೈಕೊಂಡು ಸಮಾಧಾನವಾದೀತು. ದಿನದಿಂದ ದಿನ ಮನಸ್ಸಿನ ಬೇಗೆಯು ಕಡಿಮೆಯಾಗಲಿದೆ. ಅಲ್ಪರ ಸಹವಾಸ ಬೇಡ.
ಕನ್ಯಾ: ನಿಮ್ಮ ಪತ್ನಿಯ ಸಹವಾಸದಿಂದ ನಿಮಗೆ ಸಮಾಧಾನ ಹಾಗೂ ಶಾಂತಿ ದೊರಕಲಿದೆ. ನವ ವಿವಾಹಿತರಿಗೆ ಪತ್ನಿಯನ್ನು ಅರ್ಥೈಸಿಕೊಂಡು ನಡೆಯುವುದೇ ದೊಡ್ಡ ಸಾಹಸವಾದೀತು. ಸಮಾರಂಭದಲ್ಲಿ ಭಾಗಿಯಾಗುವಿರಿ.
ತುಲಾ: ಗಣ್ಯ ಹಾಗೂ ಪ್ರತಿಷ್ಠಿತ ವ್ಯಕ್ತಿಗಳ ಸಹವಾಸವು ನಿಮಗೆ ಉನ್ನತಿ ತಂದುಕೊಡಲಿದೆ. ಆದರೂ ಖರ್ಚುವೆಚ್ಚಗಳಲ್ಲಿ ನಿಗಾವಹಿಸಿರಿ. ಅತೀ ಸ್ನೇಹ, ಅತೀ ಸಲುಗೆ ನಿಮ್ಮನ್ನು ಅಧಃಪತನಕ್ಕೊಯ್ಯಲಿದೆ. ಜಾಗ್ರತೆ ವಹಿಸಿರಿ.
ವೃಶ್ಚಿಕ: ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣವು ಕೂಡಿ ಬರಲಿದೆ. ಆದರೂ ನಿಮ್ಮ ಜಾಗ್ರತೆಯಲ್ಲಿ ನೀವಿದ್ದರೆ ಉತ್ತಮ. ಧರ್ಮವನ್ನು ಬಿಡಬೇಡಿ. ಹಿರಿಯರಿಗೆ ಗೌರವ ಹಾಗೂ ಸತ್ಕರಿಸುವದನ್ನು ಮರೆಯದಿರಿ. ಉತ್ತಮ ಲಾಭವಿದೆ.
ಧನು: ನಿಮ್ಮ ಧೈರ್ಯ, ಆತ್ಮವಿಶ್ವಾಸ ಹಾಗೂ ಧನಾತ್ಮಕ ಚಿಂತನೆಗಳು ನಿಮ್ಮನ್ನು ಮುನ್ನಡೆಸಿಕೊಂಡು ಹೋಗಲಿದೆ. ಸ್ವಲ್ಪ ಎಡರು ತೊಡರುಗಳು ಕಂಡು ಬಂದರೂ ನೀವು ಮುಂದೆ ಹಾಕಿದ ಹೆಜ್ಜೆಯನ್ನು ಹಿಂದಿಡದಿದ್ದರೆ ಒಳ್ಳೆಯದು.
ಮಕರ: ದಿನದಿಂದ ದಿನಕ್ಕೆ ಉತ್ತಮ ಅಭಿವೃದ್ಧಿಗೆ ಪೂರಕವಾಗಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುವಿರಿ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಿರಿ. ಗೃಹದಲ್ಲಿ ತೃಪ್ತಿ ಸಮಾಧಾನವಿದೆ.
ಕುಂಭ: ಕಾರ್ಯಕ್ಷೇತ್ರದಲ್ಲಿ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿರದು. ಅಲ್ಲದೆ ಖರ್ಚು ವೆಚ್ಚವು ಅತೀಯಾದೀತು. ದೇವತಾ ಕಾರ್ಯಾಧಿ ಪ್ರಯಾಣ ಹಾಗೂ ಖರ್ಚು ಬರುವುದು.
ಮೀನ: ಮನೆ ಮಂದಿಯ ವಿಶ್ವಾಸವನ್ನು ಇಟ್ಟುಕೊಂಡನೆ ಉತ್ತಮ. ವಿಶ್ವಾಸಘಾತಕತನದ ಕೆಲಸ ಮಾಡಬೇಡಿರಿ. ನಿಮ್ಮ ವೃತ್ತಿರಂಗದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರುವುದು. ಆದರೆ ಮೇಲಾಧಿಕಾರಿಗಳ ಕಾಟವಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.