Horoscope: ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರವಾಗಲಿದೆ
Team Udayavani, Sep 9, 2024, 7:10 AM IST
ಮೇಷ: ಹಬ್ಬದ ಬಳಿಕದ ಎರಡನೆಯ ದಿನ ಶುಭಾರಂಭ. ನಿಮ್ಮ ಪ್ರಾರ್ಥನೆ ಫಲ ನೀಡುತ್ತದೆ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ವೃಷಭ: ಗಣಪನ ಹಬ್ಬದ ಬಳಿಕ ಎರಡನೆಯ ದಿನ. ಶಿವನ ಕೃಪೆಯಿಂದ ಇಷ್ಟಾರ್ಥಸಿದ್ಧಿ. ನಿರೀಕ್ಷಿತ ಪದೋನ್ನತಿ ಸಂಭವ. ಸರಕಾರಿ ಅಧಿಕಾರಿಗಳಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ.
ಮಿಥುನ: ಹೊಸ ವಿಭಾಗಕ್ಕೆ ಒಗ್ಗಿಕೊಳ್ಳುವ ಪ್ರಯತ್ನ. ಸಹೋದ್ಯೋಗಿಗಳಿಗೆ ಸಹಾಯ ಮಾಡಿ ಹರ್ಷ. ಸ್ವಂತ ಉದ್ಯಮಕ್ಕೆ ಎದುರಾಳಿಗಳಿಂದ ಪ್ರಬಲ ಸ್ಪರ್ಧೆ. ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಸಫಲ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಸತತ ಪರಿಶ್ರಮಕ್ಕೆ ಗೌರವ. ಉದ್ಯಮಕ್ಕೆ ಕಾನೂನು ಸಮಸ್ಯೆಗಳಿಂದ ಮುಕ್ತಿ. ನೌಕರರ ಯೋಗಕ್ಷೇಮಕ್ಕೆ ವಿಶೇಷ ಯೋಜನೆ. ಖಾದಿ, ಗ್ರಾಮೋದ್ಯೋಗ ಬೆಳೆಸಲು ಆಸಕ್ತಿ.
ಸಿಂಹ: ಯಾವ ಸಮಸ್ಯೆ ಬಂದರೂ ನಿಭಾಯಿಸುವ ಬುದ್ಧಿವಂತಿಕೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಪಶ್ಚಿಮದ ಕಡೆಯಿಂದ ಶುಭ ಸಮಾಚಾರ. ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ.
ಕನ್ಯಾ: ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಎಲೆಕ್ಟ್ರಾನಿಕ್ಸ್ ಉದ್ಯಮಗಳಿಗೆ ಅಧಿಕ ಬೇಡಿಕೆ. ಸ್ವಂತ ಉದ್ಯಮಗಳನ್ನು ಬೆಳೆಸಲು ಸರಕಾರದ ಪ್ರೋತ್ಸಾಹ. ವೃತ್ತಿ ಪರಿಣತಿ ವೃದ್ಧಿಗೆ ಪ್ರಯತ್ನ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ.
ತುಲಾ: ಚಾಂಚಲ್ಯಕ್ಕೆ ವಿದಾಯ. ಅದೃಷ್ಟ ಒಲಿಯುವ ಸಮಯ ಸನ್ನಿಹಿತ. ಮನೋಬಲ ವೃದ್ಧಿಗೆ ಸಾಧನೆ ಮುಂದುವರಿಕೆ. ವೃತ್ತಿ ಪರಿಣತಿ ವೃದ್ಧಿಗೆ ಹಳಬರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಹತ್ತಿರದ ದೇವಾಲಯಕ್ಕೆ ಸಂದರ್ಶನ.
ವೃಶ್ಚಿಕ: ಬದಲಾಗುವ ಬದುಕಿಗೆ ಹೊಂದಿಕೊಳ್ಳುವ ಅನಿವಾರ್ಯತೆ. ಉದ್ಯಮ ಸ್ಥಾನದ ಹೊಸ ವ್ಯವಸ್ಥೆಯಲ್ಲಿ ನಿಧಾನ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ. ಹಳೆಯ ನಿಕಟ ಪರಿಚಿತರ ಅಕಸ್ಮಾತ್ ಭೇಟಿ. ನಿಶ್ಚಿತ ವಿವಾಹ ತಪ್ಪಿಹೋಗುವ ಭೀತಿ.
ಧನು: ಉದ್ಯೋಗದಲ್ಲಿ ಪದೋನ್ನತಿಗೆ ಪೈಪೋಟಿ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಭರವಸೆ. ಊರಿನ ದೇವಾಲಯಕ್ಕೆ ಸಂದರ್ಶನ. ಕೌಟುಂಬಿಕ ವಿವಾದ ಸಂವಾದದಿಂದ ಪರಿಹಾರ.
ಮಕರ: ಹಬ್ಬ ಮುಗಿದು ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನ ನವೀಕರಣ. ಉದ್ಯಮಕ್ಕೆ ಸೇರ್ಪಡೆಯಾದ ಹೊಸ ನೌಕರರಿಗೆ ಆನಂದ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.
ಕುಂಭ: ಜನಸೇವೆಯಿಂದ ಪುಣ್ಯಸಂಪತ್ತು ವೃದ್ಧಿ. ಉದ್ಯೋಗಸ್ಥಾನದಲ್ಲಿ ಹೊಸಬರಿಗೆ ಮಾರ್ಗದರ್ಶನ. ಗೃಹೋದ್ಯಮ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ವಸ್ತುಗಳ ವಿತರಕರಿಗೆ ಅಪಾರ ಲಾಭ.
ಮೀನ: ಹೊಸ ಸಪ್ತಾಹದಲ್ಲಿ ಹೊಸ ಪ್ರಸ್ತಾವಗಳು. ಸರಕಾರಿ ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಅಧ್ಯಾಪಕರ ಸೇವೆಗೆ ಪ್ರಶಂಸೆ. ಕೃಷ್ಯುತ್ಪನ್ನಗಳ ವ್ಯಾಪಾರದಲ್ಲಿ ಲಾಭ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.