ನಿತ್ಯಭವಿಷ್ಯ: ಈ ರಾಶಿಯವರ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ ಹಠಾತ್ ಪ್ರಗತಿ
Team Udayavani, Apr 20, 2021, 7:37 AM IST
ಮೇಷ: ತುಂಬಾ ಚಟುವಟಿಕೆಯಿಂದ ಉತ್ಸಾಹವು ಮೂಡಿ ಬರಲಿದೆ. ನಿಮ್ಮ ಮಟ್ಟಿಗೆ ಅತೀ ಒಳ್ಳೆಯ ಸಮಯ. ಆದರೂ ಮನೆಯಲ್ಲಿ ಸಾಂಸಾರಿಕವಾಗಿ ನೆಮ್ಮದಿ ಇಲ್ಲವಾದೀತು. ಅತಿಥಿಗಳ ಭೇಟಿಯಿಂದ ಸಂತಸ.
ವೃಷಭ: ವ್ಯವಹಾರಿಕವಾಗಿ ನಿಮ್ಮ ಪ್ರಯತ್ನ ಬಲಕ್ಕೆ ಹೆಚ್ಚಿನ ಲಾಭ ಕಂಡು ಬರಲಿದೆ. ಮನೆಯಲ್ಲಿ ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆಯು ಕಂಡು ಬರುವುದು. ಲಾಭವೂ ಉಂಟಾಗಲಿದೆ. ಆರೋಗ್ಯದಲ್ಲಿ ಕಿರಿಕಿರಿ ಇರುವುದು.
ಮಿಥುನ: ಹೆಚ್ಚಿನ ಕಾರ್ಯಗಳು ಚಾಲನೆಗೆ ಬರಲಿದ್ದು ಮುಂದುವರಿಯಲು ಅವಕಾಶವು ಕಂಡು ಬರುವುದು. ಗೃಹ ನಿರ್ಮಾಣದ ಕಾರ್ಯ ಸಾಕಾರಗೊಳ್ಳಲು ಸ್ವಲ್ಪ ಕಾಲಾವಕಾಶಕ್ಕೆ ಕಾಯಬೇಕಾದೀತು. ಉದ್ವೇಗ ಬೇಡ ತಿಳಿಯಿತಾ.
ಕರ್ಕ: ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನಗಳೆರಡರಲ್ಲೂ ಹಠಾತ್ ಪ್ರಗತಿಯು ತೋರಿ ಬಂದು ಲಾಭವಿರುವುದು. ನಿಮಗೆ ಸಿಹಿಕಹಿ ಎರಡೂ ಅನುಭವ ಬರುವುದು. ಆದರೆ ಲಾಭಾಂಶ ಹೆಚ್ಚಾಗಿರುವುದು.
ಸಿಂಹ: ವ್ಯಾಪಾರಿಗಳಿಗೆ ದೈನಂದಿನ ಜೀವನದಲ್ಲಿ ಹೆಚ್ಚಿನ ಅಭಿವೃದ್ಧಿಯು ಕಂಡು ಬರುವುದು. ಹಲವು ಸಮಸ್ಯೆಗಳು ಎದುರಾಗಬಹುದು. ಆದರೂ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಲು ಕಲಿಯಿರಿ. ಮಾತಿಗಿಂತ ಮೌನ ಲೇಸು.
ಕನ್ಯಾ: ನಿಮ್ಮ ಕಾರ್ಯಕ್ಷೇತ್ರದ ವ್ಯವಹಾರಗಳನ್ನು ತರಾತುರಿಯಿಂದ ಮುಗಿಸಲು ಸನ್ನದ್ಧರಾಗಿರುವಿರಿ. ನಿಮ್ಮ ಹಠ ಛಲ, ಉದ್ವೇಗವನ್ನು ಕಡಿಮೆ ಮಾಡಿದರೆ ಉತ್ತಮ. ಕೌಟುಂಬಿಕವಾಗಿ ಹಲವು ಖರ್ಚುಗಳು ಎದುರಾಗಬಹುದು.
ತುಲಾ: ಸಾಮಾಜಿಕವಾಗಿ ಜನಪ್ರಿಯತೆ, ಗೌರವ, ಸ್ಥಾನಮಾನ ದೊರಕಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯದ ನಿಮಿತ್ತ ಓಡಾಟ ತಂದೀತು. ದೂರದ ಸಂಬಂಧಿಗಳ ನಿಮಿತ್ತ ನಿಮಗೆ ಲಾಭ ಕಂಡು ಬರುವುದು. ಶುಭವಿರುವುದು.
ವೃಶ್ಚಿಕ: ಆರ್ಥಿಕ ಅಡಚಣೆಗಳು ದೂರವಾಗಿ ಯೋಜನೆಗಳು ಕಾರ್ಯರೂಪಕ್ಕೆ ಬರಲಿದೆ. ಆದರಿಂದ ಮನೆಯಲ್ಲಿ ಸಂತಸ ಸಮಾಧಾನವಿದೆ. ಅದೃಷ್ಟವು ತೂಗುಯ್ಯಾಲೆ ಆಡಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು.
ಧನು: ಮನೆಯಲ್ಲಿ ನಿಮ್ಮ ವಿಚಾರವನ್ನು ಒಪ್ಪದೆ ಇದ್ದುದಕ್ಕೆ ಬೇಸರಿಸದೆ ತಿಳಿ ಹೇಳಿರಿ. ಅದಕ್ಕೆ ಒಪ್ಪುವರು. ವ್ಯಾಪಾರಿ ವರ್ಗಕ್ಕೆ ತುಂಬಾ ತಲೆಬಿಸಿಯ ಸಮಯವಾಗಿದೆ. ಲಾಭದಾಯಕ ಆದಾಯದಿಂದ ಸಂತಸ ಮೂಡೀತು.
ಮಕರ: ಹೊಸ ವಾತಾವರಣಕ್ಕೆ ಒಗ್ಗಲು ಸ್ವಲ್ಪ ಕಷ್ಟವಾದೀತು. ಹಣದ ಮುಗ್ಗಟ್ಟು ಸ್ವಾಭಾವಿಕವಾಗಿರುವುದು. ಆತ್ಮವಿಶ್ವಾಸ ವನ್ನು ಬಲಪಡಿಸಿಕೊಳ್ಳಿರಿ. ಸಂಚಾರದಲ್ಲಿ ಜಾಗ್ರತೆ ಮಾಡಿರಿ. ಹಂತಹಂತವಾಗಿ ಅಭಿವೃದ್ಧಿ ಇರುವುದು.
ಕುಂಭ: ವ್ಯವಹಾರಿಕವಾಗಿ ಕೊಡು-ಕೊಳ್ಳುವುದರಲ್ಲಿ ಲಾಭವನ್ನು ಪಡೆಯಲಿದ್ದೀರಿ. ವ್ಯವಹಾರ ಸಂಬಂಧಿತ ಹಾಗೂ ಉದ್ಯೋಗ ಸಂಬಂಧಿತ ಶುಭ ಸಮಾಚಾರ ಕೇಳಲಿದ್ದೀರಿ. ವಿದ್ಯಾರ್ಥಿಗಳ ಇಷ್ಟಾರ್ಥವು ಸಿದ್ದಿಸಲಿರುವುದು.
ಮೀನ: ಸಾಮಾಜಿಕವಾಗಿ ನಿಮ್ಮ ಪ್ರಭಾವವು ಬೆಳೆಯಲಿದೆ. ಅದೃಷ್ಟಬಲವು ನಿಮ್ಮ ಪಾಲಿಗಿದೆ. ನಿಮ್ಮ ಎಣಿಕೆಗಳು ಈಡೇರುವುದರಿಂದ ಧೈರ್ಯದಿಂದ ಅಭಿವೃದ್ಧಿಯತ್ತ ದಾಪುಗಾಲು ಇಡಿರಿ. ಶುಭಮಂಗಲ ಕಾರ್ಯ ನಡೆದೀತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ದಿನವಿಡೀ ಒಂದಾದ ಮೇಲೊಂದರಂತೆ ಬರುವ ಕೆಲಸಗಳು…
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.