ಇಂದಿನ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ಅಚ್ಚರಿಯ ವಾರ್ತೆ ತೋರಿಬರುತ್ತದೆ
Team Udayavani, Feb 8, 2021, 7:43 AM IST
08-02-2021
ಮೇಷ: ಸಣ್ಣ ಗ್ರಹಗಳ ಪ್ರತಿಕೂಲತೆ ಪರಿಣಾಮ ನಿಮ್ಮ ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮ್ಮ ಕೈಗೆ ಸಿಗಲಾರದು. ಕುಟುಂಬದಲ್ಲಿ ಮನಸ್ತಾಪಗಳು ಕಂಡುಬಂದು ಜೀವನ ದುಸ್ತರವೆನಿಸಲಿದೆ.
ವೃಷಭ: ಸಾಮಾಜಿಕ ಚಟುವಟಿಕೆಗಳು ನಿಮ್ಮ ಮನಸ್ಸಿಗೆ ಸಮಾಧಾನ ನೀಡುವುದು. ಮಿಥ್ಯಾರೋಪವು ಕಾಡಲಿದೆ. ಜಾಗರೂಕರಾಗಿರಿ. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ತೋರಿಬರುತ್ತದೆ. ಕಿರು ಪ್ರಯಾಣವಿದೆ.
ಮಿಥುನ: ಕೌಟುಂಬಿಕ ಸಮಸ್ಯೆಗಳು ನಿಮಗೆ ಕಾಡಲಿದ್ದು ,ಸಂಗಾತಿಯ ಸಲಹೆಯಿಂದ ಶಮನವಾಗಲಿದೆ, ವಿರೋಧಿಗಳ ಕುಚೋದ್ಯದಿಂದ ನ್ಯಾಯಾಲಯದ ದರ್ಶನವಾಗಲಿದೆ. ಸರಕಾರಿ ಕಚೇರಿಯ ದರ್ಶನವಿದೆ.
ಕರ್ಕ: ನಿಮಗೆ ತಾಳ್ಮೆ ಸಹನೆಯ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಯಶೋಲಾಭವಿದೆ. ನಿರುದ್ಯೋಗಿಗಳಿಗೆ ಅನೇಕ ಅವಕಾಶಗಳು ಒದಗಿಬರುವುದು. ಅನಿರೀಕ್ಷಿತ ಉದ್ಯೋಗ ದೊರಕಲಿದೆ. ಸಣ್ಣಪುಟ್ಟ ಕಿರಿಕಿರಿ ಇರುತ್ತದೆ.
ಸಿಂಹ: ಅನಿರೀಕ್ಷಿತ ಕಾರ್ಯಸಾಧನೆಯಾಗಿ ಅಚ್ಚರಿ ತರುವುದು. ಮನೆಯಲ್ಲಿ ಸಮಾಧಾನದ ವಾತಾವರಣ ಕಂಡುಬರುವುದು. ಬರಹಗಾರರಿಗೆ ಕಲಾವಿದರಿಗೆ ಸೂಕ್ತ ಪ್ರೋತ್ಸಾಹವು ದೊರಕಲಿದೆ. ಸ್ಥಾನಮಾನ, ಪುರಸ್ಕಾರವು ದೊರೆಯುವುದು.
ಕನ್ಯಾ: ವೈವಾಹಿಕ ಪ್ರಸ್ತಾವಗಳು ಕಂಕಣಬಲ ತಂದು ಕೊಡಲಿದೆ. ಉದ್ಯೋಗಸ್ಥರಿಗೆ ಮುಂಭಡ್ತಿಯ ಸಾಧ್ಯತೆ ಇದೆ. ನಾನಾರೀತಿಯಿಂದ, ಅನೇಕ ಕಡೆಗಳಿಂದ ಅಧಿಕ ಖರ್ಚುಗಳು ಕೂಡಿ ಬಂದೀತು. ಜಾಗ್ರತೆಯಿಂದ ಮುನ್ನಡೆಯಿರಿ.
ತುಲಾ: ನಿತ್ಯದ ಕೆಲಸದಲ್ಲಿ ತುಸು ಶ್ರಮವು ಕಾಡಲಿದೆ. ಅಧಿಕ ಕೆಲಸ, ಅಧಿಕ ಶ್ರಮ ಕಂಡುಬರಲಿದೆ. ದಿನವಿಡೀ ದುಡಿತವಿರುತ್ತದೆ. ಅಧಾರ್ಮಿಕ ಹೆಜ್ಜೆಯಿಂದ ಪಶ್ಚಾತ್ತಾಪ ಪಡುವಂತಾದೀತು. ಜಾಗ್ರತೆ ಮಾಡಿರಿ.
ವೃಶ್ಚಿಕ: ಗುರು ಯಾ ಕುಲದೇವತಾ ದರ್ಶನ ಭಾಗ್ಯವು ಕಂಡುಬರಲಿದೆ. ಕೆಲವು ಸಲ ಅತೀ ನೋವನ್ನು ನುಂಗಿ ಕೋಪವು ಒಮ್ಮೆಲೇ ಭುಗಿಲೇಳಲಿದೆ. ಆದರೂ ಅತೀ ಸಮಾಧಾನಿಯಾದ ನೀವು ಪ್ರಸನ್ನರಾಗಿರಿ. ಶುಭವಿದೆ.
ಧನು: ಈ ದಿನ ನಿಮಗೆ ಧನಾಗಮನವು ಚೆನ್ನಾಗಿರುತ್ತದೆ. ,ಅತೀಯಾದ ಖರ್ಚು ಇರುತ್ತದೆ. ಸಮತೋಲನ ಮಾಡಿರಿ. ವೃತ್ತಿರಂಗದಲ್ಲಿ ಗಣ್ಯ ವ್ಯಕ್ತಿಗಳ ಪ್ರಭಾವ ಹಾಗೂಸಹಕಾರದಿಂದ ಉತ್ತಮ ಅವಕಾಶವಿರುತ್ತದೆ.
ಮಕರ: ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರಗಲಿದೆ. ಪತ್ನಿ ಹಾಗೂ ಮಕ್ಕಳೊಂದಿಗೆ ಕಾಲಯಾಪನೆ ಮಾಡುವಿರಿ. ಮನೆಯಲ್ಲಿ ಅತಿಥಿಗಳ ಆಗಮನವಿದೆ. ಹಿರಿಯರ ಮಾರ್ಗದರ್ಶನದತ್ತ ಒಲವಿರಲಿ.
ಕುಂಭ: ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿರಿ. ದುಡುಕಿನಿಂದ ಕೆಲಸಕ್ಕೆ ಹಾನಿ ಮಾಡದಿರಿ. ಜಾಗ್ರತೆ ಇರಲಿ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಕಂಡುಬಂದು ಸ್ವಲ್ಪ ಸಮಾಧಾನವಾಗಲಿದೆ. ಚಿಂತಿಸದಿರಿ.
ಮೀನ: ಕೃಷಿಕರಿಗೆ ಆಗಾಗ ಆರಂಭದಲ್ಲಿ ಸಮಾಧಾನ ನೆಮ್ಮದಿ ಇದ್ದರೂ ನಂತರ ತಲೆಬಿಸಿಯ ದಿನಗಳಾದಾವು. ನಿಮ್ಮ ಇಚ್ಛೆಗೆ ಅನುಗುಣವಾದ ಉದ್ಯೋಗವು ದೊರಕಲಿದೆ. ಎಲ್ಲ ವಿಷಯದಲ್ಲೂ ಸಾವಕಾಶವಾಗಿ ಆಲೋಚಿಸಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.