ನಿಮ್ಮ ಗ್ರಹಬಲ: ಈ ರಾಶಿಯವರು ಮಡದಿಯ ಮಾತಿಗೆ ಕಿವಿಗೊಡದೆ ಪದೇ ಪದೇ ತಪ್ಪಿಸುವಿರಿ!
Team Udayavani, Feb 9, 2021, 7:37 AM IST
09-02-2021
ಮೇಷ: ಮಕ್ಕಳ ವಿದ್ಯಾಪ್ರಗತಿಯಲ್ಲಿ ಆಶಾಭಂಗವಾಗಲಿದೆ. ಹೇಳಿದ ಮಾತು ಕೇಳದೆ ಉಡಾಫೆ ಮಾತನಾಡಿಯಾರು. ಸಂಗೀತ, ನರ್ತನಾದಿ ಕಲೆಗಳಲ್ಲಿ ಮಗಳ ಪಾಂಡಿತ್ಯವು ಮೆರೆದೀತು. ವಿದೇಶ ಸಂಚಾರದ ಯೋಗ ಇರುತ್ತದೆ.
ವೃಷಭ: ಅಧಿಕಾರಿ ವರ್ಗಕ್ಕೆ ಕಾರ್ಯಬಾಹುಳ್ಯದಿಂದ ಬೇಸರ ಕಂಡುಬಂದೀತು. ರಾಜಕೀಯದಲ್ಲೂ ಕಿರಿಕಿರಿಯ ವಾತಾವರಣ ಕಂಡುಬರಲಿದೆ. ಜಾಣ್ಮೆಯಿಂದ ವರ್ತಿಸಿದಲ್ಲಿ ಸ್ವಲ್ಪ ನೆಮ್ಮದಿ ಕಂಡುಬರಲಿದೆ. ಶುಭವಿದೆ.
ಮಿಥುನ: ಉನ್ನತ ವ್ಯಾಸಂಗಕ್ಕೆ ಅಡೆತಡೆ ಕಂಡುಬಂದೀತು. ಹಿರಿಜೀವಕ್ಕೆ ಯಾತ್ರಾದಿಗಳಿಂದ ತೃಪ್ತಿ ಇರುತ್ತದೆ. ಆರ್ಥಿಕವಾಗಿ ಚಿಂತೆಯು ಕಾಡಲಿದೆ. ಗೃಹದಲ್ಲಿ ಸೌಖ್ಯ, ಶಾಂತಿ ನೆಲೆಸಲಿದೆ. ಕಿರುಸಂಚಾರವು ಕೂಡಿಬಂದೀತು.
ಕರ್ಕ: ಆದಾಯ ವೃದ್ಧಿ ಇದ್ದರೂ ಖರ್ಚುಗಳು ಅಷ್ಟೇ ಕಂಡುಬರುವುದು. ಆದರೂ ಸುಖ ಸೌಖ್ಯವು ವೃದ್ಧಿಸಲಿದೆ. ಆರೋಗ್ಯಕ್ಕೆ ಆಪತ್ತು, ಶತ್ರುಪೀಡೆ, ಸ್ಥಾನಮಾನಕ್ಕೆ ಧಕ್ಕೆ ತರಬಹುದು. ಮಕ್ಕಳ ವಿಚಾರದಲ್ಲಿ ಚಿಂತೆ ಹೆಚ್ಚಾದೀತು.
ಸಿಂಹ: ಸಂಪತ್ತು ಸತ್ಕಾರ್ಯಕ್ಕೆ ವಿನಿಯೋಗವಾಗದೇ ವ್ಯರ್ಥವೆನಿಸಲಿದೆ. ವಿದೇಶ ಪ್ರಯಾಣದಲ್ಲಿ ಕುತ್ತು ತಂದೀತು. ವೃತ್ತಿಯಲ್ಲಿ ಅತಂತ್ರ ಸ್ಥಿತಿಯು ನಿರ್ಮಾಣವಾಗಲಿದೆ. ಮೂರನೆಯವರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯು ತಿಳಿಯಾಗಲಿದೆ.
ಕನ್ಯಾ: ಸರಕಾರಿ ನೌಕರರಿಗೆ ವರ್ಗಾವಣೆಯ ಸಂಕಟ ಕಂಡುಬರಲಿದೆ. ಅಧಿಕಾರಿ ಲಾಲಸೆಗೆ ಕೈಕೆಳಗಿನವರು ಕಡೆಗಣಿಸಿ ವಂಚನೆಗೈದಾರು. ವಿಲಾಸೀ ವಸ್ತುಗಳ ವಿಕ್ರಯ ಧನಸಂಪಾದನೆ ತಂದುಕೊಡಲಿದೆ. ದುಡಿಮೆಗೆ ಪ್ರತಿಫಲ ಸಿಗಲಿದೆ.
ತುಲಾ: ಯಾತ್ರೆ, ದೇವತಾದರ್ಶನಾದಿಗಳ ಸುಯೋಗ ಕಂಡುಬರಲಿದೆ. ಜಲವೃತ್ತಿಯವರಿಗೆ ಉತ್ತಮ ಲಾಭ ಕಂಡು ಬರಲಿದೆ. ಸಹೋದ್ಯೋಗಿಗಳ ಮಧ್ಯೆ ಗಲಾಟೆ ಸಂಭವಿಸೀತು. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಕರೆ ಬಂದು ಸಂತಸವಾಗಲಿದೆ.
ವೃಶ್ಚಿಕ: ಮಗನ ಶಿಕ್ಷಣದಲ್ಲಿ ಅಪವಾದ ಭಯ, ಸಂಗ ದೋಷವೂ ಕಂಡು ಬರುವುದು. ಆದಾಯವೃದ್ಧಿ ಇದ್ದರೂ ಖರ್ಚು ಅಷ್ಟೇ ಇದ್ದೀತು. ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಂಭವ ಕಂಡುಬಂದೀತು. ಗೃಹದಲ್ಲಿ ಉತ್ತಮ ಸಾಖ್ಯ.
ಧನು: ವಿದ್ಯಾರ್ಥಿಗಳಿಗೆ ಅಲಸ್ಯದಿಂದ ಬಂದ ಅವಕಾಶವು ತಪ್ಪಿಹೋದೀತು. ಚಿನ್ನ ಖರೀದಿಯಲ್ಲಿ ಎಡವಟ್ಟಾಗಲಿದೆ. ವಾಹನ ಚಾಲನೆಯ ವೃತ್ತಿಯವರಿಗೆ ಜಾಗ್ರತೆ ಅಗತ್ಯವಿದೆ. ನೆರೆಹೊರೆಯವರೊಂದಿಗೆ ಮಾತಿಗೆ ಮಾತು ಬೆಳೆದೀತು.
ಮಕರ: ಸನ್ಮಿತ್ರರ ಉತ್ತಮ ಸಹಾಯ ಹಾಗೂ ಸಲಹೆಗಳು ನಿಮ್ಮ ಯೋಚನೆಯನ್ನು ದೂರ ಮಾಡಲಿದೆ. ಹಿರಿಯರ ಸಲಹೆಗೆ ಸ್ಪಂದಿಸಿರಿ. ಮಧ್ಯದಲ್ಲಿ ಹಣದ ಮುಗ್ಗಟ್ಟು ಕಂಡುಬರಲಿದೆ. ಆಸ್ತಿ ವಿವಾದವು ಕಂಡುಬಂದರೆ ನಿರ್ಲಿಪ್ತರಾಗಿರಿ.
ಕುಂಭ: ಧನ ಸಂಪಾದನೆಯ ಮಾರ್ಗವೊಂದು ಗೋಚರಿಸಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಸ್ವಲ್ಪ ಭೀತಿಯ ವಾತಾವರಣ ನಿರ್ಮಾಣವಾದೀತು. ಸೇವಕರ ಅಭಾವದಿಂದ ಕೃಷಿಕಾರ್ಯಕ್ಕೆ ಹಿಂದೇಟು ಕಂಡುಬಂದೀತು. ಶುಭವಿದೆ.
ಮೀನ: ವಿದ್ಯಾರ್ಜನೆಯಲ್ಲಿ ಪುರಸ್ಕಾರವು ಲಭಿಸಲಿದೆ. ಧನ ಸಂಪಾದನೆಯ ಮಾರ್ಗವೊಂದು ಗೋಚರಿಸಲಿದೆ. ಮಡದಿಯ ಮಾತಿಗೆ ಕಿವಿಗೊಡದೆ ಪದೇ ಪದೇ ತಪ್ಪಿಸುವಿರಿ. ಜನನಿಂದನೆಗೆ ಗುರಿಯಾಗದಂತಿರಲು ಜಾಗ್ರತೆ ಮಾಡಿರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.