ಈ ರಾಶಿಯವರಿಂದು ಕೈಗೊಳ್ಳುವ ನಿರ್ಧಾರದ ಪ್ರಭಾವ ಇಡೀ ವರ್ಷದ ಮೇಲೆ ಇರುವುದು
Team Udayavani, Mar 9, 2021, 7:50 AM IST
09-03-2021
ಮೇಷ: ಸಾಮಾಜಿಕ ರಂಗದಲ್ಲಿ ಹೊಸಬರೊಂದಿಗೆ ಸಂಪರ್ಕ ಬಂದು ಸಹಾಯಹಸ್ತ ದೊರೆಯುವುದು. ನಿಮ್ಮ ಜೀವನಗತಿಯಲ್ಲಿ ಇದು ಉದ್ವೇಗದ ಕಾಲ. ಸಮಾಧಾನ ಚಿತ್ತದಿಂದ ಮುಂದುವರಿಯಬೇಕಾದೀತು.
ವೃಷಭ: ಆರ್ಥಿಕವಾಗಿ ಹಿನ್ನಡೆ ತೋರಿಬಂದರೂ ಉದ್ಯೋಗ ರಂಗದಲ್ಲಿ ಮುನ್ನಡೆ ಸಾಧಿಸಲಿದ್ದೀರಿ. ಹಾಗೇ ಮನೆಯಲ್ಲಿ ಹಂತಹಂತವಾಗಿ ವಾತಾವರಣವು ತಿಳಿಯಾಗುವುದು. ಕಾರ್ಯಕ್ಷೇತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಹಾಗೂ ಸಂತೋಷದ ಕಾಲವೆನ್ನಬಹುದು.
ಮಿಥುನ: ವಿದ್ಯಾರ್ಥಿ ವರ್ಗಕ್ಕೆ ಯಶಸ್ಸು ದೊರಕಲಿದೆ. ಹೆಚ್ಚಿನ ಇಷ್ಟಾರ್ಥ ಸಿದ್ಧಿಸಲಿದೆ. ಕಾರ್ಯಕ್ಷೇತ್ರದಲ್ಲಿ ಒಂದಿಲ್ಲೊಂದು ರೀತಿಯ ಬೇಡಿಕೆಗಳನ್ನು ಈಡೇರಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಇಲ್ಲಿ ಕೌಶಲಕ್ಕಿಂತ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆಯು ದೊರೆಯುತ್ತದೆ.
ಕರ್ಕ: ಕಾರ್ಯಕ್ಷೇತ್ರದಲ್ಲಿನ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿಕೊಳ್ಳಿರಿ. ಯಶಸ್ಸು ನಿಮ್ಮದಾಗಲಿದೆ. ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವ ಇಡೀ ವರ್ಷದ ಮೇಲೆ ಇರುವುದು. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಹೆಚ್ಚುವುದು.
ಸಿಂಹ: ವೃತ್ತಿರಂಗದಲ್ಲಿ ಯಾ ಕಾರ್ಯಕ್ಷೇತ್ರದಲ್ಲಿ ಕೆಲವೊಂದು ಕೊರತೆಗಳನ್ನು ಸರಿಪಡಿಸಿಕೊಂಡು ಮುಂದುವರಿಯ ಬೇಕಾದೀತು. ಇದು ನಿಮಗೆ ಸಾಧ್ಯವಾಗಲಿದೆ. ನಿಮ್ಮ ವ್ಯವಹಾರ ಕುಶಲತೆಗೆ ತುಂಬಾ ಬೆಲೆಯಿದೆ.
ಕನ್ಯಾ: ವೃತ್ತಿರಂಗದಲ್ಲಿ ಆತುರತೆ ಸಲ್ಲದು. ಕೆಲವೊಂದು ಮಹಣ್ತೀದ ಬದಲಾವಣೆ ತೋರಿಬರಲಿದೆ. ಸಾಮಾಜಿಕವಾಗಿ ಮುಂದಾಳತ್ವ, ಸ್ಥಾನಮಾನ, ಗೌರವವನ್ನು ಸಂಪಾದಿಸಲಿದ್ದೀರಿ. ಕೆಲವೊಮ್ಮೆ ಕುಟುಂಬದಲ್ಲಿ ಅನಾರೋಗ್ಯದ ಸಂಭವ ಇರುವುದು.
ತುಲಾ: ದೈವಾನುಗ್ರಹದಿಂದ ಕಾರ್ಯಕ್ಷೇತ್ರದಲ್ಲಿ ಹಲವಾರು ತರದ ಕೆಲಸಕಾರ್ಯಗಳು ನಿಮ್ಮ ಪಾಲಿಗೆ ಬಂದು ನೀವು ಅವುಗಳಿಂದ ಉಲ್ಲಸಿತರಾಗುವಿರಿ. ಹಾಗೇ ಆರ್ಥಿಕವಾಗಿ ಅದೃಷ್ಟವು ನಿಮ್ಮ ಪಾಲಿಗಿದ್ದು ಸಂತೃಪ್ತಿಗೊಳಿಸಲಿದೆ.
ವೃಶ್ಚಿಕ: ನಿರೀಕ್ಷಿತ ಮಂಗಲಕಾರ್ಯಗಳು, ಉದ್ಯೋಗ ಲಾಭ, ವಿದ್ಯಾರ್ಥಿಗಳಿಗೆ ಯಶಸ್ಸು ತಂದೀತು. ವ್ಯವಹಾರ, ಉದ್ಯೋಗ, ವ್ಯಾಪಾರಗಳಲ್ಲೂ, ಸರಿಯಾದ ನಿರ್ಧಾರಕ್ಕೆ ಬಂದು ಲಾಭದಾಯಕ ಆದಾಯ, ಗೌರವ ಎರಡನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿದೆ.
ಧನು: ಕ್ರಯ-ವಿಕ್ರಯದಲ್ಲಿ ಉತ್ತಮ ಆದಾಯ, ಉದ್ಯೋಗ ಲಾಭವಿದೆ. ಖರ್ಚು-ವೆಚ್ಚಗಳ ಬಗ್ಗೆ ಹಿಡಿತವಿರಲಿ. ಇದು ಅನಿವಾರ್ಯ ಕೂಡ. ಮನೆಯಲ್ಲಿ ಸುಖ, ಸಂತೋಷಗಳಿಂದ ನೆಮ್ಮದಿ, ಮಕ್ಕಳಿಂದ ಸಂತಸ.
ಮಕರ: ಕಾರ್ಯರಂಗದಲ್ಲಿ ಹಾಗೇ ಜೀವನಕ್ಷೇತ್ರದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಜೀವನದಲ್ಲಿ ಹೊಂದಿಕೊಳ್ಳುವುದು ಅಗತ್ಯವಿದೆ. ಹಾಗೇ ಯಾವುದರಲ್ಲೂ ಆತುರ ತುಂಬಿ ಖಚಿತ ನಿರ್ಧಾರ ಕೈಗೊಳ್ಳದಿರಿ
ಕುಂಭ: ಬಂದ ಸಮಸ್ಯೆಯನ್ನು ಗುರುತಿಸಿಕೊಂಡು ಪರಿಹರಿಸಿಕೊಳ್ಳುವ ಆತ್ಮವಿಶ್ವಾಸ, ಪ್ರಯತ್ನಶೀಲತೆಯ ಶಕ್ತಿ ಪಡೆಯಲಿದ್ದೀರಿ. ಹಾಗೇ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳ ನಿವಾರಣೆ, ಅನ್ಯೋನ್ಯತೆ, ಸಹಕಾರ, ಸುಖ, ಸಂತೋಷ, ಸಮಾಧಾನಗಳು ಬೆಳೆಯಲಿವೆ.
ಮೀನ: ನೀವು ಕೈಗೊಳ್ಳುವ ನಿರ್ಧಾರದ ಪ್ರಭಾವ ಇಡೀ ವರ್ಷದ ಮೇಲೆ ಇರುವುದು. ಸಾಮಾಜಿಕವಾಗಿ ಸ್ಥಾನಮಾನ, ಗೌರವ ಹೆಚ್ಚುವುದು. ನಿಮ್ಮ ಜೀವನಗತಿಯಲ್ಲಿ ಇದು ಉದ್ವೇಗದ ಕಾಲ. ಸಮಾಧಾನಚಿತ್ತದಿಂದ ಮುಂದುವರಿಯಬೇಕಾದೀತು.
ಎನ್. ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.