ಈ ರಾಶಿಯ ತಾರುಣ್ಯದ ಯುವಕರಿಗೆ ಕನಸಿನ ಕನ್ಯೆ ಬಾಳಸಂಗಾತಿಯಾಗಿ ಕಾಣಿಸಲಿದ್ದಾರೆ
Team Udayavani, Mar 19, 2021, 7:39 AM IST
19-03-2021
ಮೇಷ: ನಿರುದ್ಯೋಗಿಗಳಿಗೆ ಈ ದಿನವು ವೃತ್ತಿಯ ಸ್ಥಾನ ನೀಡಿ ಶುಭ ಸಮಾಚಾರ ತರಲಿದೆ. ಯಾವುದಕ್ಕೂ ವಿಘ್ನದಿಂದಲೇ ವಿಜಯ ಪ್ರಾಪ್ತಿಯೆಂಬುದು ನಿಮ್ಮ ಅನುಭವಕ್ಕೆ ಬರಲಿದೆ. ರಾಜಕೀಯದವರಿಗೆ ನಿರೀಕ್ಷಿತ ಅಭಿವೃದ್ಧಿ ಇದೆ.
ವೃಷಭ: ಮನೆಯಲ್ಲಿ ನಿರೀಕ್ಷಿತ ಮಂಗಲಕಾರ್ಯ ಜರಗಲಿದೆ. ನಿರೀಕ್ಷಿತ ಅಭಿವೃದ್ಧಿ ಇದ್ದರೂ ನಾನಾ ರೀತಿಯಲ್ಲಿ ಗೊಂದಲಗಳು ತಪ್ಪದು. ಧನಾಗಮನವು ಕಡಿಮೆ ಇದ್ದರೂ ಖರ್ಚುವೆಚ್ಚಗಳು ಹೆಚ್ಚೀತು. ಜಾಗ್ರತೆ ಮಾಡಿರಿ.
ಮಿಥುನ: ಸರಕಾರೀ ಅಧಿಕಾರಿಗಳಿಗೆ ವರ್ಗಾವಣೆ ಸಾಧ್ಯತೆ ಇರುತ್ತದೆ. ಕೌಟುಂಬಿಕವಾಗಿ ಸ್ಥಿರಾಸ್ತಿ ವಿವಾದ ರಾಜಿಯಿಂದ ಪರಿಹರಿಸಿಕೊಳ್ಳಿರಿ. ವಿದ್ಯಾರ್ಥಿ ವರ್ಗಕ್ಕೆ ಆಗಾಗ ಉದಾಸೀನತೆ ಕಾಡಲಿದೆ. ಆರ್ಥಿಕ ಸ್ಥಿತಿ ಕಣ್ಣುಮುಚ್ಚಾಲೆ ಆಟ ಆಡೀತು.
ಕರ್ಕ: ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರತೆ ಆಗಾಗ ಅಸಮಾಧಾನಕ್ಕೆ ಕಾರಣವಾಗಲಿದೆ. ಕೌಟುಂಬಿಕ ಸಮಸ್ಯೆಗಳು ದಾಯಾದಿಗಳಿಂದ ಕೋರ್ಟುಕಟ್ಟೆ ಹತ್ತಿಯಾವು. ಪದೇ ಪದೇ ಕೈಕೊಡುವ ಅನಾರೋಗ್ಯವು ಅತೀ ಬೇಸರ ತರಲಿದೆ.
ಸಿಂಹ: ನಿರುದ್ಯೋಗಿಗಳು ಪ್ರಯತ್ನಪಟ್ಟಲ್ಲಿ ತಾತ್ಕಾಲಿಕ ವೃತ್ತಿ ಸಿಗಬಹುದು. ಶ್ರೀ ಕುಲದೇವತಾ ದಯೆ ನಿಮ್ಮ ಮೇಲಿರಬಹುದು. ಕೌಟುಂಬಿಕ ಬಿರುಕುಗಳು ಪುನಃಹ ಜೋಡಣೆಯಾಗಿ ಸಂತಸ ತರಲಿದೆ. ಮುನ್ನಡೆಯಿರಿ.
ಕನ್ಯಾ: ತಾರುಣ್ಯದ ಯುವಕರಿಗೆ ಕನಸಿನ ಕನ್ಯೆ ಬಾಳಸಂಗಾತಿಯಾಗಿ ಕಾಣಿಸಲಿದ್ದಾರೆ. ಧನಾತ್ಮಕ ಚಿಂತನೆಯು ಉತ್ತಮ ಫಲ ನೀಡಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಅವಶ್ಯಕತೆ ಇದೆ. ದಿನಾಂತ್ಯ ಶುಭವಿದೆ.
ತುಲಾ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಕಾರ್ಯರಂಗದಲ್ಲಿ ಅತೀ ಉತ್ಸಾಹದಿಂದ ಕೆಲಸ ಮಾಡುವಿರಿ. ಸ್ವಲ್ಪ ಆಯಾಸವು ಕಂಡು ಬಂದೀತು. ಸಾಂಸಾರಿಕವಾಗಿ ಮನದನ್ನೆಯ ಮಾತನ್ನು ಮೀರದಿರಿ. ತೃಪ್ತಿಯ ಸಂಸಾರ.
ವೃಶ್ಚಿಕ: ಸಾಂಸಾರಿಕವಾಗಿ ಮಕ್ಕಳ ಶ್ರೇಯಸ್ಸಿನಿಂದ ಸಂತಸ ವಾಗಲಿದೆ. ಕಾರ್ಯರಂಗದಲ್ಲಿ ಶತ್ರುಗಳು ತಾವಾಗಿಯೇ ನಿಮ್ಮ ಬೆನ್ನ ಹಿಂದೆ ಬಿದ್ದಾರು. ಆಕರ್ಷಿತರಾದಾರು. ವೃತ್ತಿರಂಗದಲ್ಲಿ ಉನ್ನತಿಯ ಲಕ್ಷಣಗಳು ಕಂಡುಬಂದಾವು.
ಧನು: ನೂತನ ವಾಹನ ಯಾ ಗೃಹ ಖರೀದಿಗೆ ಅನುಕೂಲ ತಂದೀತು. ಅವಿವಾಹಿತರು ಹೊಂದಾಣಿಕೆಗೆ ಮನಸ್ಸು ಮಾಡಿದ್ದಲ್ಲಿ ಕಂಕಣಬಲಕ್ಕೆ ಸಾಧಕವಾಗಲಿದೆ. ಪ್ರವಾಸಕ್ಕೆ ಪ್ರಯಾಸ ತಂದೀತು. ಆಟೋಟದಲ್ಲಿ ಗೆಲುವಿದೆ.
ಮಕರ: ಆಗಾಗ ವೃತ್ತಿಕ್ಲೇಶ, ಅಪವಾದ ಭೀತಿ ತೋರಿಬಂದೀತು. ನಿಮ್ಮ ಸುತ್ತ ಸ್ವಲ್ಪ ಮಟ್ಟಿನ ಗೊಂದಲಗಳು ಸೃಷ್ಟಿಯಾಗಬಹುದು. ಎಲ್ಲವನ್ನೂ ಸುಧಾರಿಸಿಕೊಂಡು ಹೋದರೆ ಉತ್ತಮ. ಹೆತ್ತವರಿಗೆ ಮಕ್ಕಳ ಚಿಂತೆ ಕಾಡಲಿದೆ.
ಕುಂಭ: ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಕಂಡು ಬಾರದಿದ್ದರೂ ಖರ್ಚುವೆಚ್ಚಗಳು ಏರುವುದು.ವೃತ್ತಿಯಲ್ಲಿ ಒಳ್ಳೆಯ ಅಭಿವೃದ್ಧಿ ಇರುವುದು. ಆರ್ಥಿಕತೆಯ ಬಗ್ಗೆ ಜಾಗ್ರತರಾಗಿರುವುದು. ನಿಧಾನವಾಗಿ ಎಲ್ಲವೂ ಸರಿಯಾಗಲಿದೆ.
ಮೀನ: ಆದಾಯ ವೃದ್ಧಿಯಾದರೂ ಖರ್ಚು ಅಷ್ಟೇ ಇದ್ದೀತು. ಗೃಹದಲ್ಲಿ ಶುಭಮಂಗಲ ಕಾರ್ಯದ ಓಡಾಟವು ಕಂಡುಬಂದೀತು. ಉದ್ಯೋಗಸ್ಥೆ ಮಹಿಳೆಯರಿಗೆ ಉತ್ತಮ ಅವಕಾಶಗಳು ಒದಗಿ ಮನೋಕಾಮನೆ ಪೂರೈಕೆಯಾದೀತು.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ ಆಗಲಿದೆ
Horoscope: ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ
Horoscope: ಸಪ್ತಾಹದ ಕೊನೆಯ ದಿನ ಉತ್ತಮ ಫಲಗಳು, ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ
Daily Horoscope: ಶುಭಫಲಗಳೇ ಅಧಿಕವಾಗಿರುವ ದಿನ, ಉದ್ಯೋಗದಲ್ಲಿ ವೇತನ ಏರಿಕೆಯ ಸಾಧ್ಯತೆ
Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.