![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 25, 2021, 8:02 AM IST
25-03-2021
ಮೇಷ: ನಿಮ್ಮ ಜೀವನದಲ್ಲಿ ಮೂಡಿಬಂದ ಗೊಂದಲಗಳು ಹಂತಹಂತವಾಗಿ ತಿಳಿಯಾಗಲಿದೆ. ಕೆಲವೊಮ್ಮೆ ನಿಮ್ಮ ಅದೃಷ್ಟದ ಬಗ್ಗೆ ನಿಮಗೆ ಆಶ್ಚರ್ಯವಾದೀತು. ಆದರೆ ಸಂಸಾರದಲ್ಲಿ ಮೂಡಿಬಂದ ಗೊಂದಲ ನಿವಾರಣೆಯಾಗಲಿದೆ.
ವೃಷಭ: ಸಾಂಸಾರಿಕವಾಗಿ ನೀವು ಹೊಂದಿಕೆ ಮಾಡಿದಂತೆ ಯಾರಿಂದಲೂ ಆಗದು. ಆದರೂ ಈಗ ಸೃಷ್ಟಿಯಾದ ಆರೋಗ್ಯ ಸಮಸ್ಯೆ ನಿಧಾನವಾಗಿ ಸರಿಯಾಗಲಿದೆ. ಸ್ವಲ್ಪ ತಾಳ್ಮೆಯ ಅವಶ್ಯಕತೆ ಇದೆ. ಅಧೈರ್ಯ ಬೇಡ.
ಮಿಥುನ: ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಫಲಿತಾಂಶ ಸಿಗಲಿದೆ. ತುಂಬಾ ಸಂತೋಷವಾಗಲಿದೆ. ಪರಿಶ್ರಮಕ್ಕೆ ಉತ್ತಮ ಫಲವಿದೆ.
ಕರ್ಕ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸುವುದು ಅಗತ್ಯವಿದೆ. ಆದಷ್ಟು ಮೌನ ವಹಿಸಿದರೆ ಉತ್ತಮ. ನಿಮ್ಮ ಮಾತು ನಿಮ್ಮನ್ನು ಪೇಚಿಗೆ ಸಿಲುಕಿಸಲಿದೆ. ಜಾಗ್ರತೆ ಮಾಡಿರಿ.
ಸಿಂಹ:ವಿಲಾಸೀ ವಸ್ತುಗಳ ಖರೀದಿಯಿಂದ ಹತ್ತುಹಲವು ಖರ್ಚುಗಳು ಬಂದೀತು. ಸಾವರಿಸಿಕೊಂಡು ಹೋಗಬೇಕಾದೀತು. ಖರ್ಚು ಮಿತಿ ಮೀರಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ. ಕಷ್ಟಗಳನ್ನು ಎದುರಿಸುವುದು ಮುಖ್ಯ.
ಕನ್ಯಾ: ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ತೋರಿಬಂದು ಪ್ರಗತಿ ಕಾಣಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಯು ಕಂಡುಬಂದೀತು. ಕಾರ್ಯಕ್ಷೇತ್ರದಲ್ಲಿ ನಿಷ್ಠುರ ಕಟ್ಟಿಕೊಳ್ಳದೆ, ಸಮಾಧಾನದಿಂದ ಕಾರ್ಯಪ್ರವೃತ್ತರಾಗಿರಿ.
ತುಲಾ: ದೂರ ಸಂಚಾರದಲ್ಲಿ ಸಂತಸವಿದ್ದರೂ ಮನೆಯಿಂದ ದೂರವಿರಬೇಕಾದೀತು. ಕಾರ್ಯರಂಗದಲ್ಲಿ ಕಿರಿಕಿರಿ ತೋರಿಬರುವುದು. ಅವೆಲ್ಲವನ್ನೂ ದಾಟಿ ಮುನ್ನಡೆದರೆ ದಡ ಸೇರುವಿರಿ. ಪ್ರಯತ್ನ ಬಲದ ಅಗತ್ಯವಿರುತ್ತದೆ.
ವೃಶ್ಚಿಕ: ನಿಮ್ಮ ಅಭಿವೃದ್ಧಿ ಹಾಗೂ ಉನ್ನತಿ ಕಂಡು ಇತರರು ಹೊಟ್ಟೆ ಉರಿಸಿಕೊಂಡಾರು. ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ನಿಮ್ಮ ಕೆಲಸವನ್ನು ನೀವು ಮಾಡಿರಿ. ಪ್ರತಿಫಲದ ಅಪೇಕ್ಷೆಯನ್ನು ಮಾಡದಿರಿ.
ಧನು: ವಿದ್ಯಾರ್ಥಿಗಳ ಪ್ರಯತ್ನ ಬಲಕ್ಕೆ ತಕ್ಕಫಲ ಸಿಗದೆ ಬೇಸರವಾದೀತು. ಆದರೆ ಅದರ ಬೆನ್ನಹಿಂದೆ ಬಿದ್ದರೆ ನೀವು ಯಶಸ್ಸು ಸಾಧಿಸುವಿರಿ. ನಿಮ್ಮ ಪ್ರಯತ್ನ, ಆತ್ಮವಿಶ್ವಾಸ, ಸಹನೆ ನಿಮ್ಮನ್ನು ಮುನ್ನಡೆಸಲಿದೆ.
ಮಕರ: ಪ್ರವಾಸವು ಕೂಡಿ ಬಂದೀತು. ಆದರೆ ಪ್ರವಾಸದಿಂದ ಉತ್ತಮ ಫಲ ದೊರಕಲಿದೆ. ಸಂತಸವು ಲಭಿಸಲಿದೆ. ಯಶಸ್ಸು ನಿಶ್ಚಿತ. ಭೂ ವ್ಯವಹಾರದಲ್ಲಿ ಲಾಭ ಕಂಡು ಬಂದೀತು. ಗೃಹ ಯಾ ನಿವೇಶನದ ಖರೀದಿ ಇದ್ದೀತು.
ಕುಂಭ: ಧಾರಾಳ ಅವಕಾಶಗಳು ಕಂಡು ಯಾವುದನ್ನು ಆರಿಸಲು ಅರಿಯದಂತಾಗುವಿರಿ. ಸೂಕ್ತ ಸಲಹೆಗಳಿಂದ ಮುನ್ನಡೆಯಿರಿ. ಆರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಸುಧಾರಿಸಿಕೊಳ್ಳುವಿರಿ. ಪತ್ನಿಯ ನಿರ್ಧಾರ ಸರಿಯಾಗಿರುತ್ತದೆ.
ಮೀನ: ಮನಸ್ಸಿಗೆ ನೆಮ್ಮದಿ ಕಡಿಮೆಯಾದೀತು. ಆರ್ಥಿಕ ಅಡಚಣೆಗಳು ಕಂಡು ಬಂದಾವು. ಮನೆಯಲ್ಲಿ ಶುಭ ಮಂಗಲ ಕಾರ್ಯದ ಚಿಂತನೆಯಿಂದ ಗೊಂದಲಗಳು ಉದ್ಭವಿಸಲಿದೆ. ಆದರೆ ಸಮಾಧಾನದಿಂದ ಆಲೋಚನೆ ಮಾಡಿರಿ.
ಎನ್.ಎಸ್.ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.