ಈ ರಾಶಿಯವರಿಗಿಂದು ಅನಾವಶ್ಯಕವಾಗಿ ಅಪವಾದ, ಅಪಮಾನ ಭೀತಿಯು ಕಾಡಲಿದೆ!
Team Udayavani, Mar 29, 2021, 7:43 AM IST
29-03-2021
ಮೇಷ: ರಾಜಕೀಯದವರಿಗೆ ಅಸಮಾಧಾನವು ಕಾಡಲಿದೆ. ಆತ್ಮೀಯರೊಡನೆ ವೃಥಾ ವಿರಸ ಕಾಡುವುದು. ಮಹತ್ವದ ವಿಚಾರದಲ್ಲಿ ದುಡುಕದೆ ಹಿರಿಯರ ಸಲಹೆ ಪಡೆದಲ್ಲಿ, ನಿಶ್ಚಿತ ರೂಪದಲ್ಲಿ ಪ್ರಗತಿ ತಂದುಕೊಟ್ಟಿàತು.
ವೃಷಭ: ದೈವಾನುಗ್ರಹದಿಂದ ಪ್ರಯತ್ನಬಲದ ಫಲಗಳು ಗೋಚರಕ್ಕೆ ಬರಲಿವೆ. ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಕಂಡುಬರಲಿದೆ. ಮುಂದಿನ ಅಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯ ಕೈಗೂಡಲಿದೆ.
ಮಿಥುನ: ಆಕಸ್ಮಿಕ ಧನ ಸಂಪಾದನೆ ಇದ್ದುದರಿಂದ ಹಿಂದಿನ ಋಣ ಮುಕ್ತಾಯವಾಗಲಿದೆ. ಮನದನ್ನೆಯ ಸಹಕಾರ, ಪ್ರೀತಿ, ವಿಶ್ವಾಸ ಹಿತವೆನಿಸಲಿದೆ. ವಿವಾಹಿತರಿಗೆ ಸಂತಾನಭಾಗ್ಯದ ಕುರುಹು ಕಂಡುಬರಲಿದೆ.
ಕರ್ಕ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಸ್ಥಾನ ಪ್ರಾಪ್ತಿಯಿಂದ ಸಂತಸ ತಂದೀತು. ಕೌಟುಂಬಿಕವಾಗಿ ಉತ್ತಮ ಸಹಕಾರವು ಹಿರಿಯರಿಂದ ದೊರಕಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಸಾಕಷ್ಟು ಆದಾಯವಿರದು.
ಸಿಂಹ: ಅನಿರೀಕ್ಷಿತವಾಗಿ ಹಲವು ಖರ್ಚುವೆಚ್ಚಗಳು ಕಂಡುಬಂದು ನಷ್ಟವಾದೀತು. ಅನಾವಶ್ಯಕವಾಗಿ ಅಪವಾದ, ಅಪಮಾನ ಭೀತಿಯು ನಿಮ್ಮನ್ನು ಕಾಡಲಿದೆ. ಅಭಿಮಾನಕ್ಕೆ ಪೆಟ್ಟಾದೀತು. ಸಮಾಧಾನದಿಂದ ಚಿಂತಿಸಿರಿ.
ಕನ್ಯಾ: ಸಾಮಾಜಿಕವಾಗಿ ವಿಡಂಬನೆಯಿಂದ ಮನ ನೊಂದೀತು. ಆದರೂ ತುಸು ಸಮಾಧಾನಕರ ವಾತಾವರಣದಿಂದ ಮನಸ್ಸಿಗೆ ತೃಪ್ತಿ ತಂದೀತು. ಅನಾರೋಗ್ಯವು ಸ್ವಲ್ಪ ಕಾಡಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವ ಬರಲಿದೆ.
ತುಲಾ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿಬಂದೀತು. ಕಲೆ, ಸಂಗೀತ, ಚಿತ್ರ ಜಗತ್ತಿನಲ್ಲಿ ಆರ್ಥಿಕವಾಗಿ ಲಾಭದಾಯಕವೇ ಆದೀತು. ಸರಕಾರೀ ಕೆಲಸ ಕಾರ್ಯಗಳು ನಡೆದಾವು.
ವೃಶ್ಚಿಕ: ಚಿನ್ನ, ಬೆಳ್ಳಿಯ ಒಡವೆಗಳ ಖರೀದಿಗಾಗಿ ಧನ ವಿನಿಯೋಗವಾಗಲಿದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಯೋಗವು ಕೂಡಿಬರುವುದು. ಆರೋಗ್ಯದಲ್ಲಿ ಶೀತ, ಪಿತ್ತೋಷ್ಣ ಪ್ರಕೋಪಗಳು ತೋರಿಬಂದೀತು.
ಧನು: ಕೌಟುಂಬಿಕವಾಗಿ ಸಹೋದರರೊಳಗೆ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಮೂಡಿಬಂದೀತು. ವಿತ್ತ, ಖಾತೆ, ಜೀವವಿಮೆಯ ಕಚೇರಿಯಲ್ಲಿ ಉದ್ಯೋಗಿಗಳಿಗೆ ಉತ್ತಮ ಲಾಭ ಕಂಡುಬಂದೀತು. ಶುಭವಿದೆ.
ಮಕರ: ಉದ್ಯೋಗದ ಕುರಿತು ಸಂದರ್ಶನ ಎದುರಿಸಿ ಬೇಸತ್ತ ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ದೊರೆತು ಸಂತಸವಾಗಲಿದೆ. ಮಕ್ಕಳೊಂದಿಗೆ ವಿರಸ ಮೂಡೀತು. ಪ್ರೀತಿಯಿಂದ ವರ್ತಿಸುವುದು.
ಕುಂಭ: ಪರಿವರ್ತನೆಯ ಕಾಲಚಕ್ರದ ಅನುಭವವಾಗಲಿದೆ. ಶತ್ರುಕಾಟ, ವಿರೋಧಗಳು ತಣ್ಣಗಾಗಲಿದೆ. ನಿಮ್ಮಿಷ್ಟದಂತೆ ಚಿಂತಿತ ವಿಚಾರಗಳು ಕಾರ್ಯಗತವಾಗಿ ಸಫಲವಾಗಲಿದೆ. ಋಣಭಾರದ ಚಿಂತೆ ಪರಿಹಾರವಾಗಲಿದೆ.
ಮೀನ: ಯಾತ್ರೆ, ದೇವತಾ ಸ್ಥಳಗಳ ಸಂದರ್ಶನ ಕಂಡುಬಂದೀತು. ಅವಿರತ ಕಾರ್ಯದೊತ್ತಡದಿಂದ ದೇಹಾಯಾಸ ತಂದೀತು. ನೂತನ ಮಿತ್ರಾಗಮನದಿಂದ ಕಾರ್ಯಸಾಧನೆಗೆ ಸಾಧ್ಯವಾಗಲಿದೆ. ಮುನ್ನಡೆ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.