ಈ ರಾಶಿಯವರಿಗೆ ವೃತ್ತಿರಂಗದಲ್ಲಿ ಯಾವುದೇ ನಿರ್ಣಯಗಳಿಗೆ ಇದು ಉತ್ತಮ ಕಾಲವಲ್ಲ
Team Udayavani, Apr 6, 2021, 7:39 AM IST
06-04-2021
ಮೇಷ: ಕೆಟ್ಟ ಕೆಲಸಗಳ ಬಗ್ಗೆ ಪ್ರಚೋದಿತರಾಗದಿರಿ. ಕಾಂಟ್ರಾಕ್ಟ್ದಾರರಿಗೆ, ಕಮಿಶನ್ ವ್ಯಾಪಾರಿಗಳಿಗೆ ಅಧಿಕ ರೀತಿಯಲ್ಲಿ ಲಾಭಾಂಶ ತಂದು ಕೊಡಲಿದೆ. ವೃತ್ತಿರಂಗದಲ್ಲಿ ಯಾವುದೇ ನಿರ್ಣಯಗಳಿಗೆ ಇದು ಉತ್ತಮ ಕಾಲವಲ್ಲ.
ವೃಷಭ: ಯೋಗ್ಯ ವಯಸ್ಕರಿಗೆ ಸಂಗಾತಿಯ ಬಗ್ಗೆ ಹೆಚ್ಚಿನ ಪ್ರಯತ್ನ ಬಲ ಹಾಗೂ ಹುಡುಕಾಟ ತೋರಿ ಬರುತ್ತದೆ. ದಾಯಾದಿಗಳಿಂದ ಶತ್ರುತ್ವ ಏರ್ಪಡುವ ಸಂಭವವಿದೆ. ಪತ್ನಿಯಿಂದ ಸುಖ, ಸಮಾಧಾನಗಳಿದ್ದು ನೆಮ್ಮದಿ ಇದೆ.
ಮಿಥುನ: ಕೋರ್ಟು ಕಚೇರಿಗಳ ಕಾರ್ಯಭಾಗದಲ್ಲಿ ಹಿನ್ನಡೆಯ ಸಾಧ್ಯತೆ ಕಂಡುಬರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನಿರಾಸಕ್ತಿ ಕಂಡುಬರಲಿದೆ. ಸಾಂಸಾರಿಕವಾಗಿ ಹಾಗೂ ವೃತ್ತಿರಂಗದಲ್ಲಿ ಕೂಡಾ ಸಮಸ್ಯೆಗಳು ಉಪಶಮನವಾಗಲಿದೆ.
ಕರ್ಕ: ದಾಂಪತ್ಯದಲ್ಲಿ ಸಮಾಧಾನವಿರುತ್ತದೆ. ಗೃಹಿಣಿಯ ಆಕಾಂಕ್ಷೆಗಳು ಪೂರೈಕೆಯೊಂದಿಗೆ ಶಾಂತಿ ಸಮಾಧಾನ ನೆಲೆಸಲಿದೆ. ಸಂತಸ, ಸಮಾಧಾನದ ಕಾಲವಿದು. ಭಾವೋದ್ವೇಗಕ್ಕೆ ಅನಾವಶ್ಯಕವಾಗಿ ಒಳಗಾಗುವುದು ಅಗತ್ಯವಿಲ್ಲ.
ಸಿಂಹ: ಮಾನಸಿಕವಾಗಿ ಆತ್ಮವಿಶ್ವಾಸ ಹಾಗೂ ಧೈರ್ಯ ಅತೀ ಇರುವ ನಿಮಗೆ ಎಲ್ಲಾ ಕಾರ್ಯದಲ್ಲೂ ಜಯ ಸಿಗಲಿದೆ. ಆರ್ಥಿಕವಾಗಿ ಅಭಿವೃದ್ಧಿಯ ಕಾಲವಿದು. ಹಂತಹಂತವಾಗಿ ಸಮಸ್ಯೆಗಳಿಂದ ಪಾರಾಗಲಿದ್ದೀರಿ. ಅಭಿವೃದ್ಧಿ ಇದೆ.
ಕನ್ಯಾ: ಸಾಂಸಾರಿಕವಾಗಿ ಮಕ್ಕಳು ಪತ್ನಿಯಿಂದ ಸುಖ ಹಾಗೂ ಸಮಾಧಾನಗಳಿರುತ್ತದೆ. ಯೋಗ್ಯ ವಯಸ್ಕರಿಗೆ ಕಂಕಣಬಲವು ಕೂಡಿ ಬಂದು ಅವಕಾಶಗಳು ಒದಗಿ ಬರಲಿದೆ. ಆರ್ಥಿಕವಾಗಿ ಗಟ್ಟಿಗೊಳ್ಳಲಿದ್ದೀರಿ. ಖರ್ಚು ಇದೆ.
ತುಲಾ: ಆರ್ಥಿಕವಾಗಿ ಸ್ಥಿರತೆ ಇಲ್ಲವಾದರೂ ಸುಧಾರಿಸಿಕೊಂಡು ಹೋಗಬಹುದಾಗಿದೆ. ವ್ಯಾಪಾರ, ವ್ಯವಹಾರಸ್ಥರಿಗೆ ಲಾಭಾಂಶವಿರುತ್ತದೆ. ಆದರೂ ಖರ್ಚು ವೆಚ್ಚಗಳಲ್ಲಿ ಮಿತಿ ಇದ್ದರೆ ಉತ್ತಮ. ಕೋರ್ಟುಕಚೇರಿಯಲ್ಲಿ ಮುನ್ನಡೆ ಇದೆ.
ವೃಶ್ಚಿಕ: ನಿಮ್ಮ ಪ್ರಯತ್ನಬಲಕ್ಕೆ ಯಶಸ್ಸು ಹಿಂಬಾಲಿಸಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಯಾನವು ಕೂಡಿಬರುವುದು. ಸ್ಥಗಿತಗೊಂಡ ಕೆಲಸಕಾರ್ಯಗಳು ಪುನಃ: ಚಾಲನೆಗೆ ಬರಲಿದೆ. ಆಗಾಗ ಮಾನಸಿಕ ಕ್ಷೋಭೆ ಕಂಡುಬಂದೀತು.
ಧನು: ಸಾಹಿತಿ, ಕಲಾವಿದರಿಗೆ ಸ್ಥಾನಮಾನ, ಗೌರವ ಗಳು ಲಭಿಸಲಿದೆ. ಋಣಾತ್ಮಕ ಚಿಂತೆನೆಗೆ ಗುರಿಯಾಗ ದಿದ್ದಲ್ಲಿ ಉತ್ತಮ. ಆಗಾಗ ಆರ್ಥಿಕವಾಗಿ ಒತ್ತಡವನ್ನು ಅನುಭವಿಸುವಂತಾದೀತು. ದುಡುಕು ವರ್ತನೆ ಪಶ್ಚಾತ್ತಾಪ ತಂದೀತು.
ಮಕರ: ವಯಸ್ಕರಿಗೆ ಚಿಂತೆಯು ಕಾಡಲಿದೆ. ಸ್ವಾಭಿಮಾನವನ್ನು ಬದಿಗೊತ್ತಿ ಮೇಲಾಧಿಕಾರಿಗಳ ಕೃಪೆ ಪಡೆಯಿರಿ. ನಿಮ್ಮಿಂದ ಪಡೆದ ಹಣವನ್ನು ಮರಳಿ ಪಡೆಯಲು ಕಷ್ಟ ಕಂಡುಬಂದೀತು. ಅತಿ ಹೆಚ್ಚಿನ ಜಾಗ್ರತೆ ಮಾಡಿರಿ.
ಕುಂಭ: ಆತ್ಮಾಭಿಮಾನವನ್ನು ಸಂರಕ್ಷಿಸುವ ಅದೃಷ್ಟಬಲವನ್ನು ಕಾಯದೆ ಪ್ರಯತ್ನ ಬಲದಿಂದ ಕ್ರಿಯಾಶೀಲರಾದ ನಿಮಗೆ ಉತ್ತಮ ಪ್ರತಿಫಲ ದೊರಕಲಿದೆ. ಆಗಾಗ ಎಣಿಸಿದ ಕಾರ್ಯಗಳು ಅಡೆತಡೆಯಿಂದ ನಡೆದೀತು.
ಮೀನ: ಉದ್ಯೋಗರಂಗದಲ್ಲಿ ಒತ್ತಡಗಳಿಂದ ತಪ್ಪುಗಳು ಘಟಿಸಬಹುದು. ಸ್ವಲ್ಪ ಸವಾಧಾನದಿಂದ ಯೋಚಿಸಿ ಮುನ್ನಡೆಯಿರಿ. ಧನಾಗಮನ ಅಧಿಕ ರೂಪದಲ್ಲಿದ್ದರೂ ಖರ್ಚುವೆಚ್ಚಗಳು ಕಂಡುಬರುವುದು. ಶುಭವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.