ಇಂದಿನ ಗ್ರಹಬಲ: ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.
Team Udayavani, Apr 12, 2021, 7:40 AM IST
12-04-2021
ಮೇಷ: ಹಂತಹಂತವಾಗಿ ನಿಮ್ಮ ಅಭಿವೃದ್ಧಿ, ಆತ್ಮವಿಶ್ವಾಸ, ಪ್ರಯತ್ನ ಒಲವು ಹೆಚ್ಚಲಿದೆ. ಆದರೆ ಅತೀ ವಿಶ್ವಾಸ ನಿಮ್ಮಲ್ಲಿ ಅಹಂಕಾರ ತೋರಿಸಲಿದೆ. ತಾಳ್ಮೆ ಸಂಯಮದಿಂದ ವರ್ತಿಸಿದಲ್ಲಿ ಗೊಂದಲ ನಿವಾರಿಸಬಹುದು.
ವೃಷಭ: ವ್ಯವಹಾರಿಕವಾಗಿ ಕೊಂಡು ಕೊಳ್ಳುವುದರಲ್ಲಿ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದವರ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ತೋರಿಬರುವುದು. ವಿವಾಹ ಸಂಬಂಧಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಜಯ.
ಮಿಥುನ: ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಇಷ್ಟಾರ್ಥವು ಸಿದ್ಧಿಸಲಿದೆ. ಸಾಮಾಜಿಕವಾಗಿ ನಿಮ್ಮ ಪ್ರಭಾವ ಬೆಳೆಯಲಿದೆ. ಅದೃಷ್ಟ ಒಲವು ನಿಮ್ಮ ಪಾಲಿಗಿದ್ದು ನಿಮ್ಮ ಎಣಿಕೆಗಳೆಲ್ಲ ಈಡೇರಿ ಸಂತೋಷಗೊಳ್ಳುವಿರಿ.
ಕರ್ಕ: ಧೈರ್ಯದಿಂದ ಮುಂದೆ ಹೆಜ್ಜೆ ಇಟ್ಟು ಕಾರ್ಯ ಸಾಧಿಸಿರಿ. ಹೊಸ ವ್ಯವಹಾರದಲ್ಲಿ ನಿಮ್ಮನ್ನು ಹೊಂದಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾದೀತು. ಮನೆಯಲ್ಲಿ ಕುಟುಂಬದವರ ಒಳಜಗಳ ಮನಸ್ಸು ಕೆಡಿಸಲಿದೆ.
ಸಿಂಹ: ದೂರ ಪ್ರಯಾಣದ ಸಾಧ್ಯತೆ ಕಂಡು ಬರುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಒಳಜಗಳ, ಹಿತಶತ್ರು ಬಾಧೆ, ಭಿನ್ನಾಭಿಪ್ರಾಯಗಳಿಂದ ಕುಟುಂಬ ಜೀವನ ಗೊಂದಲಮಯವಾದೀತು.
ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಉದ್ವೇಗ ಪರಿಸ್ಥಿತಿಯಲ್ಲಿ ಸಿಲುಕಿ ತೊಳಲಾಡುವಿರಿ. ಬಹುಶಃ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳೇ ಕಾರಣವಾಗಬಹುದು.
ತುಲಾ: ವ್ಯಾಪಾರಿ ವರ್ಗದವರಿಗೆ ಜೀವನವು ಮಂದಗತಿಯಲ್ಲಿ ಸಾಗಲಿದೆ. ವಿದ್ಯಾರ್ಥಿ ವರ್ಗಕ್ಕೆ ಹೆಚ್ಚಿನ ಪ್ರಯತ್ನ ಬಲದಿಂದ ಮುಂದುವರಿದಲ್ಲಿ ಉತ್ತಮವಿದೆ. ಅಪಘಾತಗಳ ಬಗ್ಗೆ ಅತೀ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ.
ವೃಶ್ಚಿಕ: ಉದ್ಯೋಗಿಗಳಿಗೆ ವರ್ಗಾವಣೆಯ ಯಾ ಸ್ಥಾನ ಬದಲಾವಣೆ ಯೋಗ ತೋರಿಬರುವುದು. ಕುಟುಂಬ ಸ್ಥಾನದಲ್ಲಿ ಅನಗತ್ಯ ವಿಚಾರದಲ್ಲಿ ಭಿನ್ನಾಭಿಪ್ರಾಯವು ಮೂಡಿಬಂದು ಕಲಹವಾದೀತು. ಜಾಗ್ರತೆ .
ಧನು: ಹಂತಹಂತವಾಗಿ ನಿಮ್ಮ ಆತ್ಮವಿಶ್ವಾಸದ, ಪ್ರಯತ್ನ ಬಲದಿಂದ ಜಾಗೃತಿಯು ಉಂಟಾಗುವುದು. ಉದ್ಯಮ, ವ್ಯಾಪಾರ, ವ್ಯವಹಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಕೊಟ್ಟುಕೊಳ್ಳುವಿಕೆಯಲ್ಲಿ ಲಾಭವಿದೆ.
ಮಕರ: ಸಂತಸ, ಸಮಾಧಾನದ ಸುದ್ದಿಯನ್ನು ಆಲಿಸಲಿದ್ದೀರಿ. ವಿವಾಹ, ಹುಟ್ಟುಹಬ್ಬ ಇತ್ಯಾದಿಗಳಿಂದ ಉಲ್ಲಾಸಕರ ವಾತಾವರಣ ಕಂಡು ಬರಲಿದೆ. ದೂರ ಪ್ರಯಾಣದಿಂದ ಕಾರ್ಯಾನುಕೂಲವಿದೆ. ಪತ್ನಿ, ಮಕ್ಕಳಿಂದ ಸಂತಸವಿದೆ.
ಕುಂಭ: ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುವಿರಿ. ಮಿತ್ರ ವರ್ಗದವರಿಂದ ಸಹಕಾರ ಸಿಕ್ಕಿ ನೆಮ್ಮದಿಯಾಗಲಿದೆ. ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.
ಮೀನ: ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ದೊರಕಲಿದೆ. ಅಲ್ಲದೆ ವಿದೇಶ ಯಾನದ ಯೋಗವೂ ಕೂಡಿ ಬಂದೀತು. ಈ ಸಮಯದಲ್ಲಿ ಹೇಗೆ ಉಪಯೋಗಿಸಿಕೊಳ್ಳುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ಅಡಗಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.