ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ
Team Udayavani, Apr 18, 2021, 7:44 AM IST
18-04-2021
ಮೇಷ: ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಜವಾಬ್ದಾರಿಯುತ ನಡೆಯು ನಿಮ್ಮದಾಗಲಿ. ಜನರಿಂದ ಹಲವು ತರದ ಮಾತನ್ನು ಅನ್ನಿಸಿಕೊಂಡು ಬೇಸರವಾದೀತು.
ವೃಷಭ: ಮಹಿಳೆಯರಿಗೆ ಬೆಳ್ಳಿ, ಚಿನ್ನದ ಅಲಂಕಾರಿಕ ವಸ್ತುಗಳ ಖರೀದಿ ತೋರಿಬರಲಿದೆ. ಮನೆ ರಿಪೇರಿಯಂತಹ ಕೆಲಸಗಳು ನಡೆದಾವು. ನಿರುದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಯಶಸ್ಸು ಹಂತ ಹಂತವಾಗಿ ತೋರಿಬಂದೀತು.
ಮಿಥುನ: ವೈದ್ಯಕೀಯ ವೃತ್ತಿ ನಿರತರಿಗೆ ಈ ಸಮಯವು ಉತ್ತಮವಲ್ಲ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ತುಂಬಾ ಗಮನಹರಿಸಬೇಕು. ದೇವತಾ ಕಾರ್ಯಗಳು ವಿಘ್ನಗಳಿಂದಲೇ ನಡೆಯಲಿದೆ.
ಕರ್ಕ: ಕೋಪಗೊಂಡರೂ ಮರುಕ್ಷಣದಲ್ಲಿ ಶಾಂತಚಿತ್ತರು. ಯೋಚಿಸಿ ಮಾತನಾಡುವ ನಿಮಗೆ ಈ ವರ್ಷದ ಕೊನೆ ತನಕ ಅಷ್ಟಕಷ್ಟೇ. ಸಾಂಸಾರಿಕವಾಗಿ ಸಮಾಧಾನಕರ ವಾತಾವರಣವು ತೋರಿಬರುತ್ತದೆ.
ಸಿಂಹ: ಅಸಹನೆ, ಸ್ವಾರ್ಥಕ್ಕಾಗಿ ಕಾರ್ಯಸಾಧನೆ, ಆರ್ಥಿಕವಾಗಿ ಲೆಕ್ಕಾಚಾರದ ನಿಮಗೆ ಈ ವರ್ಷದ ಕೊನೆ ತನಕ ಪ್ರತಿಕೂಲತೆ ಆಗಾಗ ತೋರಿ ಬಂದರೂ ನಿಮ್ಮ ಮನಸ್ಸಿನ ಇಚ್ಛೆ ನೆರವೇರಲಿದೆ. ಮುನ್ನಡೆಯಿರಿ.
ಕನ್ಯಾ: ನೌಕರ ವರ್ಗಕ್ಕೆ ಮುಂಭಡ್ತಿ ಯೋಗವಿದೆ. ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಲಾಭದ ಯೋಗವಿದೆ. ಆರೋಗ್ಯದ ಬಗ್ಗೆ ಜಾಗ್ರತೆಯಾಗಿರಿ. ಪಿತ್ತ ಕೋಶದಲ್ಲಿ ಸಮಸ್ಯೆಯು ಕಂಡು ಬರಬಹುದು. ಆರೋಗ್ಯ ಸುಧಾರಿಸಲಿದೆ.
ತುಲಾ: ವೃತ್ತಿರಂಗದಲ್ಲಿ ಸನ್ಮಿತ್ರರ ಸಮಾಗಮದಿಂದ ಕೆಲಸವು ಪೂರ್ಣಗೊಳ್ಳಲಿದೆ. ಸಲಹೆಗಳು ಮುನ್ನಡೆಗೆ ಸಾಧಕವಾಗಲಿದೆ. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಕಂಕಣಬಲವನ್ನು ತಂದಾವು. ವ್ಯಾಪಾರದಲ್ಲಿ ಲಾಭವಿದೆ.
ವೃಶ್ಚಿಕ: ಭೂ ಖರೀದಿಗೆ ಸಕಾಲವಿದು. ಸದುಪಯೋಗಿಸಿಕೊಳ್ಳಿ. ವಾಹನ ಖರೀದಿಗೆ ಸಕಾಲವಲ್ಲ. ಮನೆಯಲ್ಲಿ ಪತ್ನಿಗೆ ಪ್ರಾಮುಖ್ಯತೆ ನೀಡಿರಿ. ವೈದ್ಯಕೀಯ ವೃತ್ತಿಯವರಿಗೆ ಪ್ರಶಂಸೆ ದೊರಕಲಿದೆ.
ಧನು: ನೀವು ಧೈರ್ಯಪಟ್ಟು ಹೆಜ್ಜೆ ಇಟ್ಟಲ್ಲಿ ಮುನ್ನಡೆಯು ಕಂಡುಬರಲಿದೆ. ಅಸಹನೆ, ಸ್ವಾರ್ಥ ದಿಂದ ಕಾರ್ಯ ಸಾಧನೆಯಾಗದು. ಆರ್ಥಿಕವಾಗಿ ಲೆಕ್ಕಚಾರ ಇಟ್ಟುಕೊಳ್ಳಿರಿ. ಗ್ರಹಗಳ ಪ್ರತಿಕೂಲತೆಯಿಂದ ಕೆಲಸವು ನಿಧಾನವಾಗಲಿದೆ.
ಮಕರ: ಉದ್ಯೋಗ ಸ್ಥಿತಿಯಲ್ಲಿ ಆರ್ಥಿಕವಾಗಿ ಲಾಭ ಕಂಡುಬರಲಿದೆ. ಮನೆಯಲ್ಲಿ ಪತ್ನಿಯ ಸಿಡುಕಿನಿಂದ ಬೇಸರವಾಗಲಿದೆ. ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ. ದೇಹದಂಡನೆ ಅಗತ್ಯವಿದೆ.
ಕುಂಭ:ಅವಿವಾಹಿತರ ವಿವಾಹ ಪ್ರಸ್ತಾವಗಳಲ್ಲಿ ಅಡಚಣೆಗಳು ಕಂಡುಬರುವುದು. ಹಿರಿಯರ ಕ್ಲೇಶದಿಂದ ದುಃಖವು ಕಂಡುಬರುವುದು. ದಾಯಾದಿಗಳ ವಿವಾದ ನ್ಯಾಯಾಲಯ ಮೆಟ್ಟಿಲನ್ನು ಹತ್ತಿಸೀತು. ಯಶಸ್ಸು ಸಿಗಲಿದೆ.
ಮೀನ: ವ್ಯಾಪಾರ ವಹಿವಾಟಿನಲ್ಲಿ ಅಧಿಕ ಲಾಭವಿದೆ. ಗೆಳೆಯರ ಹಾಗೂ ಬಂಧುಗಳ ಸೂಕ್ತ ಸಲಹೆಗಳು ನಿಮ್ಮ ಉಪಯೋಗಕ್ಕೆ ಬರಲಿದೆ. ಆದಾಯವೃದ್ಧಿಯ ಸೂಚನೆ ಕಂಡು ಬರುವುದು. ಕಂಕಣಬಲವು ಕೂಡಿ ಬಂದು ಸಂತಸವಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.