ಈ ರಾಶಿಯವರಿಗಿಂದು ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಅಪಮಾನ ಪ್ರಸಂಗ ಎದುರಾಗಬಹುದು!
Team Udayavani, Apr 23, 2021, 7:41 AM IST
23-04-2021
ಮೇಷ: ಕಾರ್ಯಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳು ನಿವಾರಣೆಯಾದರೂ ಭಯಭೀತಿಯು ನಿಮಗೆ ಇದ್ದೇ ಇರುವುದು. ಆರ್ಥಿಕವಾಗಿ ನಿಮ್ಮಲ್ಲಿ ಹೇರಳ ಧನ ಸಂಪತ್ತಿದ್ದರೂ ತಾತ್ಕಾಲಿಕವಾಗಿ ಕಳವಳವಾದೀತು. ಧೈರ್ಯದಿಂದ ಮುನ್ನಡೆಯಿರಿ.
ವೃಷಭ: ಉದರಕ್ಕೆ ಸಂಬಂಧಿಸಿದ ಅನಾರೋಗ್ಯವು ಕಂಡುಬರುವುದು. ನೌಕರ ವರ್ಗದವರಿಗೆ ಮುಂಭಡ್ತಿಯ ಯೋಗವು ಕಂಡುಬರುವುದು. ನೌಕರ ವರ್ಗದವರಿಗೆ ಅಸಾಧ್ಯವಾದ ಕಷ್ಟಗಳು ಕಂಡುಬಂದರೂ ಸುಧಾರಿಸಬಹುದು.
ಮಿಥುನ: ಶುಭಮಂಗಲ ಕಾರ್ಯಗಳು ಅಡೆತಡೆಗಳಿಂದಲೇ ಜರಗುವುವು. ಕಾರ್ಯಕ್ಷೇತ್ರದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಮಧ್ಯಸ್ಥಿಕೆ, ಪಂಚಾತಿಕೆಗಳಿಂದ ದೂರವಿರುವುದು.
ಕರ್ಕ: ಅಸೂಯಪರವಾದ ಜನರಿಂದ ದೂರವಿದ್ದಷ್ಟು ಉತ್ತಮ. ಗೃಹದಲ್ಲಿ ಆಗಾಗ ಪತಿ, ಪತ್ನಿಯೊಳಗೆ ವಾದ- ವಿವಾದಗಳು ಸೃಷ್ಟಿಯಾದೀತು. ಮೌನವಾಗಿದ್ದರೆ ಉತ್ತಮ. ಮನೆಯ ಸದಸ್ಯರಿಗೆ ದೇಹಾರೋಗ್ಯದಲ್ಲಿ ಏರುಪೇರಾದೀತು.
ಸಿಂಹ: ಸರಕಾರಿ ಕೆಲಸ ಕಾರ್ಯಗಳು ಸುಗಮವಾಗಿ ಜರಗಲಿವೆ. ಉದ್ಯೋಗದಲ್ಲಿ ಮುಂಭಡ್ತಿಯ ಅವಕಾಶವು ಕಂಡುಬರುವುದು. ಮನೆಯಲ್ಲಿ ಹಿರಿಯ ವ್ಯಕ್ತಿಗಳಿಗೆ ಅನಾರೋಗ್ಯ ಕಂಡು ಬಂದೀತು. ಅಧಿಕಾರಿಗಳಿಂದ ಕಿರುಕುಳವಿದ್ದೀತು.
ಕನ್ಯಾ: ಆರ್ಥಿಕರಂಗದಲ್ಲಿ ಅಭಿವೃದ್ಧಿ ಕಂಡುಬಂದೀತು. ಹಂತಹಂತವಾಗಿ ಆತಂಕಗಳು ಹಗುರವಾಗಲಿದೆ. ಋಣಬಾಧೆ ನಿವಾರಣೆಯಿಂದ ಸಮಾಧಾನವಾಗಲಿದೆ. ಕೌಟುಂಬಿಕ ವಾದ-ವಿವಾದಗಳಿಗೆ ಸಿಲುಕದಂತೆ ಇರಿ.
ತುಲಾ: ಆಗಾಗ ಪಿತ್ತ ಯಾ ಉಷ್ಣ ಪ್ರಕೋಪದಿಂದ ಶರೀರದಲ್ಲಿ ಬಾಧೆ ಕಾಣಿಸಬಹುದು. ಅವಿವಾಹಿತರಿಗೆ ಯೋಗ್ಯ ವೈವಾಹಿಕ ಪ್ರಸ್ತಾಪಗಳು ಕೂಡಿಬರಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಒಳ್ಳೆಯ ಲಾಭಾಂಶವಿರುತ್ತದೆ.
ವೃಶ್ಚಿಕ: ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಲಿದ್ದು ಕೆಳವರ್ಗದವರಿಗೆ ಹಿಂಸೆ ತಂದೀತು. ಆಕಸ್ಮಿಕವಾಗಿ ಧನ ಸಂಪತ್ತು ಕೈಗೆ ಬಂದೀತು. ಸರಕಾರೀ ಕೆಲಸ ಕಾರ್ಯಗಳಿಗಾಗಿ ಹಲವು ಖರ್ಚುಗಳು ಬಂದು ತಲೆ ಕೆಡಲಿದೆ.
ಧನು: ಆಗಾಗ ತಾಪತ್ರಯಗಳು ಹೆಚ್ಚಾಗಲಿದ್ದು ಆತಂಕ ತಂದೀತು. ಮನೆಯ ಸದಸ್ಯರಿಗೆ ಶೀತ, ಕಫಬಾಧೆ ಕಂಡುಬರಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ನಡೆಯಲಿದೆ. ಅತಿಥಿಗಳ ಆಗಮನದಿಂದ ಖರ್ಚು ಇದೆ.
ಮಕರ: ಮನೆಯಲ್ಲಿ ಮಕ್ಕಳ ಆಗಮನದಿಂದ ಸಂತಸ ಕಂಡುಬರುವುದು. ತೀರ್ಥಕ್ಷೇತ್ರ ಯಾ ಪ್ರವಾಸಗಳಿಗೆ ಹೋಗುವ ಮನಸ್ಸಾಗಲಿದೆ. ಕುಂಬಾರ, ಬೇಸಾಯದ ಕೆಲಸಗಾರರಿಗೆ ಸ್ವಲ್ಪ ಆಲೋಚನೆ ಮಾಡಿ ಮುನ್ನಡೆಯಬೇಕಾದೀತು.
ಕುಂಭ: ಸಾರ್ವಜನಿಕ ಕಾರ್ಯದಲ್ಲಿ ಅವಮಾನ ಹಾಗೂ ಅಪಮಾನ ಪ್ರಸಂಗ ಎದುರಾಗಲಿರುವುದರಿಂದ ಆದಷ್ಟು ಜಾಗ್ರತೆ ಮಾಡತಕ್ಕದ್ದು . ನರಸಂಬಂಧಿ ಅನಾರೋಗ್ಯವು ಕಾಡಲಿದೆ. ವೈದ್ಯರ ಸಂದರ್ಶನದ ಅವಶ್ಯಕತೆ ಇದೆ.
ಮೀನ: ಪ್ರತಿಷ್ಠಿತ ಸ್ಥಾನಮಾನಕ್ಕಾಗಿ ಪ್ರತಿಸ್ಪರ್ಧಿಗಳ ಕಾಟ ಕಂಡುಬರುವುದು. ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಂಡುಬಂದು ತಲೆ ಕೆಡಲಿದೆ. ಕ್ರೀಡಾಳುಗಳಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ಆರೋಗ್ಯ ಅಭಿವೃದ್ಧಿ ಇದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.