ಇಂದಿನ ಗ್ರಹಬಲ: ಯತ್ನಿತ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ
Team Udayavani, Apr 27, 2021, 7:24 AM IST
27-04-2021
ಮೇಷ: ಶುಭಕಾರ್ಯಗಳಿಗೆ ವಿಘ್ನಭೀತಿ ಇದ್ದರೂ ಆತ್ಮವಿಶ್ವಾಸ ಹಾಗೂ ಪ್ರಯತ್ನ ಬಲದಿಂದ ಕಾರ್ಯಸಿದ್ದಿಯಾಗಲಿದೆ. ಸಾಂಸಾರಿಕವಾಗಿ ಅನಗತ್ಯ ವಿವಾದವೊಂದು ಎದುರಾಗಲಿರುವ ಸಾಧ್ಯತೆ ಕಂಡು ಬರುವುದು. ಅವಕಾಶದಿಂದ ಕಾರ್ಯಸಿದ್ಧಿ ಇದೆ.
ವೃಷಭ: ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ವಹಿಸಬೇಕಾಗುತ್ತದೆ. ಆತ್ಮೀಯರ ಅನಾರೋಗ್ಯ ನಿಮಿತ್ತ ಆಸ್ಪತ್ರೆಯ ಸಂದರ್ಶನ ಸಾಧ್ಯತೆ ಇರುತ್ತದೆ. ಕಿರು ಪ್ರಯಾಣದ ಅವಕಾಶದಿಂದ ಕಾರ್ಯಸಿದ್ದಿ ಇದೆ ಸಾಂಸಾರಿಕವಾಗಿ ಉದ್ವಿಗ್ನತೆ ಕಂಡು ಬಂದೀತು.
ಮಿಥುನ: ಹಂತಹಂತವಾಗಿ ಏಳಿಗೆ ಹಾಗೂ ಅಭಿವೃದ್ಧಿ ಕಂಡು ಬರುವುದು. ಧನಪ್ರಾಪ್ತಿ ಇದ್ದರೂ ಖರ್ಚು ಅಷ್ಟೇ ಇರುವುದು. ಭೂಸಂಪತ್ತಿನ ಅಭಿವೃದ್ಧಿ ಕಾರ್ಯ, ಜಯ ಲಭ್ಯವಾಗಲಿದೆ. ಆರೋಗ್ಯದಲ್ಲಿ ಅಭಿವೃದ್ದಿ ಇರುತ್ತದೆ.
ಕರ್ಕ: ಒಂದೆಡೆ ಅಧಿಕ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡು ಬಂದರೂ ಇನ್ನೊಂದೆಡೆ ಧನಾಗಮನವು ಇದ್ದೇ ಇರುತ್ತದೆ. ಯತ್ನಿತ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದು ಸಂತಸ.
ಸಿಂಹ: ರಾಜಕೀಯ ವರ್ಗದವರಿಗೆ ಅಧಿಕಾರದ ಉಳಿವಿಗಾಗಿ ಹೋರಾಟದ ಅನಿವಾರ್ಯತೆ ಕಂಡು ಬರುವುದು. ವೃತ್ತಿರಂಗದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸಬೇಕಾದ ಸಂದಿಗªತೆ ಕಂಡು ಬರುವುದು. ಮುನ್ನಡೆ ಇದೆ.
ಕನ್ಯಾ: ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳವು ಕಂಡು ಬಂದೀತು. ದೈಹಿಕ ಶ್ರಮದ ಕಾರ್ಯವು ದುಡುಕು ವರ್ತನೆಯಿಂದ ಮುಖಭಂಗದ ಪ್ರಸಂಗವಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿರೋಧ ಕಂಡು ಬಂದೀತು.
ತುಲಾ: ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಮಕ್ಕಳ ಕಿರಿಕಿರಿ ತಪ್ಪದು. ಆರ್ಥಿಕವಾಗಿ. ಅನಿರೀಕ್ಷಿತವಾಗಿ ಒದಗಿ ಬರುವ ನೆರವು ನೆಮ್ಮದಿ ತಂದೀತು . ಆಗಾಗ ವ್ಯಾಪಾರ, ವ್ಯವಹಾರಗಳಲ್ಲಿ ಏರುಪೇರು ತೋರಿ ಬಂದೀತು. ಮುನ್ನಡೆ ಇದೆ.
ವೃಶ್ಚಿಕ: ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭಿಸಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯಕ್ಕೆ ಸಂಬಂಧ ಪಟ್ಟ ಚಟುವಟಿಕೆಗಳಿಂದ ಸಂಭ್ರಮಿಸುವಂತಾದೀತು. ಆಪ್ತ ವಲಯದಲ್ಲಿ ಮಾನ್ಯತೆ ಲಭಿಸಲಿದೆ.
ಧನು: ಋಣ ಪರಿಹಾರಾರ್ಥ ಆರ್ಥಿಕ ಪ್ರಗತಿಪರ ಕಾರ್ಯಗಳ ಪ್ರಯತ್ನ ನಡೆಯಲಿವೆ. ಆತ್ಮೀಯರಿಂದ ನಿರುದ್ಯೋಗಿಗಳ ಪ್ರಯತ್ನವು ಸಫಲವಾಗಲಿದೆ. ಅನಿರೀಕ್ಷಿತವಾಗಿ ಒದಗಿ ಬರುವ ನೆರವು ಕಷ್ಟಕ್ಕೆ ಬಂದೀತು.
ಮಕರ: ಮನಸ್ಸಿನಲ್ಲಿ ನಾನಾ ರೀತಿಯಲ್ಲಿ ಸಂಶಯಗಳು ಎದ್ದೀತು. ಕೌಟುಂಬಿಕ ಪೀಡೆ, ಮನೋವ್ಯಾಕುಲತೆ, ಚಿಂತೆ ಬಂಧು ಮಿತ್ರರೊಳಗೆ ಕಲಹ, ಭಿನ್ನಾಭಿಪ್ರಾಯಗಳಿಂದ ಅಹಿತಕರ ವಾತಾವರಣವು ಕ್ಲೇಶ ತಂದೀತು. ಜಾಗ್ರತೆ ಮಾಡಿರಿ.
ಕುಂಭ: ನ್ಯಾಯಾಲಯದ ವ್ಯಾಜ್ಯಗಳಿಂದ ತೊಂದರೆ ಇತ್ಯಾದಿಗಳು ಆಗಾಗ ಕಂಡು ಬಂದಾವು. ಹೊರಗಿನ ವ್ಯವಹಾರಗಳಲ್ಲಿ ಮುನ್ನಡೆ ಕಂಡು ಬಂದು ಲಾಭಾದಿಗಳಿರುತ್ತವೆ. ಆರ್ಥಿಕವಾಗಿ ಋಣಭಾಧೆಯು ಮುಕ್ತಾಯವಾಗಲಿದೆ.
ಮೀನ: ಆಕಸ್ಮಿಕವಾಗಿ ಆತ್ಮೀಯರ ಮಿಲನದಿಂದ ಸಂತೋಷ ಸಿಗಲಿದೆ. ವಿಲಾಸ ಪ್ರಿಯತೆ ಇತ್ಯಾದಿಗಳಿರುತ್ತದೆ. ದೂರ ಸಂಚಾರ ಹಾಗೂ ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಒಂಟಿ ತನವು ಕಾಡಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Horoscope: ಹೆಚ್ಚಿನ ಜವಾಬ್ದಾರಿಗಳಿಗೆ ಸಿದ್ಧತೆ, ಗೃಹಿಣಿಯರ ಸ್ವಂತ ಆದಾಯ ಗಳಿಕೆ ವೃದ್ಧಿ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.