ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?
Team Udayavani, May 7, 2021, 7:01 AM IST
7-5-2021
ಮೇಷ: ಹಂತಹಂತವಾಗಿ ಜೀವನದ ಮಧುರ ಓಟದ ಸವಿಯನ್ನು ಅನುಭವಿಸಲಿದ್ದೀರಿ. ಧಾರ್ಮಿಕ ಮನೋಭಾವದಿಂದ ದೇವತಾಕಾರ್ಯಗಳು ನಡೆದು ಮನಸ್ಸಿಗೆ ಮುದ ನೀಡಲಿದೆ. ಅವಿವಾಹಿತರಿಗೆ ಹೊಂದಾಣಿಕೆ ಅಗತ್ಯವಿದೆ.
ವೃಷಭ: ಪ್ರೇಮಿಗಳ ಬಾಂಧವ್ಯ ಗಟ್ಟಿಯಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಬುದ್ಧಿವಂತಿಕೆ ಆರ್ಥಿಕ ಲಾಭವನ್ನು ಹೆಚ್ಚಿಸಬಹುದಾಗಿದೆ. ಅವಿವಾಹಿತರು ಹೊಂದಾಣಿಕೆಯನ್ನು ಮಾಡಿಕೊಂಡಲ್ಲಿ ನೆಂಟಸ್ತಿಕೆಯು ಗಟ್ಟಿಯಾಗಲಿದೆ. ಶುಭವಿದೆ.
ಮಿಥುನ: ಹೂಡಿಕೆಗಳಲ್ಲಿ ಲಾಭಾಂಶ ಹೆಚ್ಚಿದರೂ ವಂಚನೆಗೆ ಅವಕಾಶಗಳಿರುತ್ತವೆ. ಜಾಗ್ರತೆ ವಹಿಸಬೇಕು. ವೃತ್ತಿರಂಗದಲ್ಲಿ ಅಡ್ಡಿಆತಂಕಗಳು ತೋರದಂತೆ ಜಾಗ್ರತೆ ಮಾಡಿದರೆ ಸಣ್ಣ ರೂಪದಲ್ಲಿ ಕಂಡುಬಂದೀತು. ಅವಸರಿಸದಿರಿ.
ಕರ್ಕ: ನಿಮ್ಮ ಕಾರ್ಯವಿಧಾನ, ಕ್ರಿಯಾಶೀಲತೆ, ಆತ್ಮವಿಶ್ವಾಸವು ಮುನ್ನಡೆಗೆ ಕರೆದೊಯ್ಯಲಿದೆ. ಮುಖ್ಯವಾಗಿ ಆರ್ಥಿಕ ಸ್ಥಿತಿ ಹಾಗೂ ಮಾನಸಿಕ ಅಸ್ಥಿರತೆಯಿಂದ ಆಗಾಗ ಆತಂಕವನ್ನು ಅನುಭವಿಸುವಂತಾದೀತು. ಸಹನೆ ಕಳೆದುಕೊಳ್ಳದಿರಿ.
ಸಿಂಹ: ನೀವು ಊಹಿಸಿದ ಅನೇಕ ಕೆಲಸ ಕಾರ್ಯಗಳು ಅಚ್ಚರಿಯ ರೀತಿಯಲ್ಲಿ ಅನುಕೂಲವಾಗಲಿದೆ. ಸಾಂಸಾರಿಕವಾಗಿ ಸಹಕಾರ, ಮಿತ್ರರಿಂದ ಕೂಡಾ ಎಲ್ಲಾ ರೀತಿಯ ಸಹಾಯ ಒದಗಿ ಬಂದಿತು. ಉದ್ವೇಗ, ಹಠ, ಸಿಟ್ಟು ಬೇಡ.
ಕನ್ಯಾ: ಅನೇಕ ರೀತಿಯ ಲಾಭದಾಯಕ ಕೆಲಸ ಕಾರ್ಯಗಳಿಗೆ ಗುರುಪೂರಕನಾಗಿ ಸೂಕ್ತ ಸ್ಥಾನಮಾನ, ಗೌರವಗಳು ಪ್ರಾಪ್ತಿಯಾದೀತು. ವೈವಾಹಿಕ ಮಾತುಕತೆಗಳು ಕಂಕಣ ಬಲಕ್ಕೆ ನಾಂದಿ ಹಾಡಲಿದೆ. ಅವಕಾಶಗಳು ಬಂದಾವು.
ತುಲಾ: ವಿದ್ಯಾರ್ಥಿಗಳು ತಮ್ಮ ಫಲಿತಾಂಶದಲ್ಲಿ ಅದೃಷ್ಟಭಾಗ್ಯವನ್ನು ಹೊಂದಲಿದ್ದಾರೆ. ಸಾಂಸಾರಿಕವಾಗಿ ಶುಭಮಂಗಲ ಕಾರ್ಯಗಳಿಗೆ ನಿಮ್ಮ ದೃಢ ನಿರ್ಧಾರಗಳೇ ಅಧಿಕೃತವಾಗಲಿದೆ. ವಿಶೇಷವಾಗಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದೀತು.
ವೃಶ್ಚಿಕ: ಅನೇಕ ರೀತಿಯಲ್ಲಿ ಕಿರಿಕಿರಿಗಳು ಕಂಡು ಬಂದು ನಿಮ್ಮ ತಾಳ್ಮೆ ಸಮಾಧಾನವನ್ನು ಪರೀಕ್ಷಿಸುವಂತಾಗುತ್ತದೆ. ದೈಹಿಕವಾಗಿ ಅಪಘಾತ, ಅವಘಡಗಳು ಸಂಭವಿಸದಂತೆ ಜಾಗರೂಕರಾಗಿರಿ. ಒಮ್ಮೊಮ್ಮೆ ಹಠ ಸಾಧನೆ ಹೆಚ್ಚಾಗಲಿದೆ.
ಧನು: ಆರ್ಥಿಕವಾಗಿ ಹೆಚ್ಚಿನ ಏರಿಳಿತಗಳಿಲ್ಲದೆ ವಿವಿಧ ಮೂಲಗಳಿಂದ ಧನಪ್ರಾಪ್ತಿಯಾಗಲಿದೆ. ಉದ್ಯೋಗ, ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇದ್ದು ಸಾಂಸಾರಿಕ ಜೀವನವು ಸಂತೃಪ್ತಿ ನೀಡಲಿದೆ. ರಾಜಕೀಯದವರಿಗೆ ಶ್ರಮ ಹೆಚ್ಚು.
ಮಕರ: ಮನೆಯ ಸ್ಥಿತಿಗತಿಗಳನ್ನು ಸುಧಾರಿಸಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಸಾಂಸಾರಿಕವಾಗಿ ಸಾಮರಸ್ಯವಿರದು. ಆರ್ಥಿಕ ಅಡಚಣೆಗಳು ಆಗಾಗ ಅನುಭವಕ್ಕೆ ಬರುವ ಕಾರಣ ಖರ್ಚುವೆಚ್ಚಗಳನ್ನು ಹಿಡಿತದಲ್ಲಿಟ್ಟುಕೊಳ್ಳಿರಿ.
ಕುಂಭ: ಇಚ್ಛಿತ ಕಾರ್ಯಗಳಲ್ಲಿ ಕೆಲವೊಂದು ಸುಸೂತ್ರವಾಗಿ ನಡೆಯಲಿವೆ. ದೇವತಾಕಾರ್ಯಗಳು ಮನೆಯಲ್ಲಿ ನಡೆದಾವು. ವೃತ್ತಿರಂಗದಲ್ಲಿ ಪ್ರಮುಖರ ಭೇಟಿಯು ನಿಮ್ಮ ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ಮುನ್ನಡೆಯಿರಿ.
ಮೀನ: ಪ್ರಯತ್ನಬಲ, ವಿಶ್ವಾಸ, ಪ್ರಾಮಾಣಿಕ ಯತ್ನಕ್ಕೆ ನಿಶ್ಚಿತ ರೂಪದಲ್ಲಿ ಯಶಸ್ಸು ನಿಮ್ಮನ್ನು ಹಿಂಬಾಲಿಸಲಿದೆ. ಹಿರಿಯರ ಹಾರೈಕೆ, ಸೂಕ್ತ ಸಲಹೆ, ಮಾರ್ಗದರ್ಶನದಿಂದ ಮುನ್ನಡೆಗೆ ಸಾಧಕವಾಗಲಿದೆ. ಅತಿಯಾದ ಶ್ರಮವು ನಿಮ್ಮದಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.