ನಿಮ್ಮ ಗ್ರಹಬಲ: ಈ ರಾಶಿಯ ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಬರಲಿವೆ
Team Udayavani, Dec 16, 2020, 9:08 AM IST
16-12-2020
ಮೇಷ: ಕಾರ್ಯಕ್ಷೇತ್ರದಲ್ಲಿ ಕೀರ್ತಿಶಾಲಿಗಳಾಗುವಿರಿ. ಹಾಗೂ ಆತ್ಮೀಯರ ಸಲಹೆ, ಸಹಕಾರಗಳು ಮುನ್ನಡೆಗೆ ಸಾಧಕವಾಗಲಿದೆ. ದೇಹಾರೋಗ್ಯ ಹಾಗೂ ಮನಸ್ಸು ಸ್ವಲ್ಪ ಖನ್ನತೆಗೊಳಗಾಗಲಿದೆ. ಜಾಗ್ರತೆ.
ವೃಷಭ: ಎಡರುತೊಡರುಗಳಿದ್ದರೂ ಹಂತಹಂತವಾಗಿ ನವಚೈತನ್ಯ ಉಂಟಾಗಲಿದೆ. ಅತಿಥಿ ಅಭ್ಯಾಗತರ ಆಗಮನದಿಂದ ಮನಸ್ಸು ಸಂತೋಷಗೊಳ್ಳಲಿದೆ. ಹೊಗಳೇ ಭಟರ ಮಾತಿಗೆ ಮರುಳಾಗದಿರಿ. ಶುಭವಿದೆ.
ಮಿಥುನ: ಆರ್ಥಿಕವಾಗಿ ನಿಮ್ಮ ಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ನಿಮ್ಮ ಪಾಲುಗಾರಿಕಾ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರಕದು. ಮನದಿನಿಯನ ಮಾತು ಅರಿತು ನಡೆವ ಗೃಹಿಣಿಗೆ ಹಿಗ್ಗು ಕಾದಿದೆ. ಶುಭವಾರ್ತೆ.
ಕರ್ಕ: ಕಾರ್ಯರಂಗದಲ್ಲಿ ನೀವೀಗ ತುಂಬಾ ಕ್ಲೇಶ ಅನುಭವಿಸಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಇರುವುದು. ಧನಾಗಮನವು ಸ್ವಲ್ಪ ಚಿಂತೆಗೀಡು ಮಾಡಲಿದೆ. ಅಧಿಕ ಖರ್ಚುವೆಚ್ಚಗಳು ಮನಸ್ಸನ್ನು ಕೆಡಿಸಲಿದೆ.
ಸಿಂಹ: ಸಾರ್ಥಕತೆಯಿಂದ ಶತ್ರು ಭಯ ನಿವಾರಣೆ ಯಾದರೂ ಹಿತಶತ್ರು ಬಾಧೆಯು ಬೆಂಬಿಡದು. ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ನ್ಯಾಯಾಲಯದ ವಾದವಿವಾದಗಳು ಮುಕ್ತಾಯಗೊಂಡು ಸಮಾಧಾನವಾದೀತು.
ಕನ್ಯಾ: ಗೃಹದಲ್ಲಿ ಗೃಹಿಣಿಯ ಬೇಡಿಕೆಗೆ ಸ್ಪಂದಿಸ ಬೇಕಾದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ತೋರಿಬಂದರೂ ಆಗಾಗ ಮುಜುಗರವನ್ನು ಅನುಭವಿಸುವಂತಾದೀತು. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಬರಲಿವೆ.
ತುಲಾ: ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇದ್ದಲ್ಲಿ ಮೂಲಧನವು ಇಮ್ಮಡಿಯಾದೀತು. ಆಗಾಗ ಅಡ್ಡಿ ಆತಂಕಗಳನ್ನು ನೀವು ಎದುರಿಸಬೇಕಾದೀತು. ಉದ್ಯೋಗಿಗಳಿಗೆ ಶುಭ ಸುದ್ದಿ ಇದೆ.
ವೃಶ್ಚಿಕ: ಆರ್ಥಿಕವಾಗಿ ಆಗಾಗ ಹಿನ್ನಡೆ ತೋರಿಬಂದು ಸಮಸ್ಯೆಗಳು ಎದುರಾಗಲಿವೆ. ದುಡುಕು ನಿರ್ಧಾರದಿಂದ ಅನಾವಶ್ಯಕ ಕಿರಿಕಿರಿ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬಂದು ಹಿನ್ನಡೆಯಾದೀತು.
ಧನು: ಶುಭ ಆಶಾಕಿರಣ ತೋರಿಬಂದೀತು. ಆರೋಗ್ಯ ಭಾಗ್ಯವು ವರ್ಧಿಸಲಿದೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಖರ್ಚುವೆಚ್ಚವು ಸಮತೋಲನ ಸಾಧಿಸೀತು. ವಿದ್ಯಾರ್ಥಿಗಳ ಅಭ್ಯಾಸಬಲವು ಮುನ್ನಡೆ ಸಾಧಿಸೀತು.
ಮಕರ: ಹೊಸ ಯೋಜನೆಗಳು ಕಾರ್ಯಗತವಾಗಲಿದೆ. ಅತಿಥಿ ಅಭ್ಯಾಗತರ ಆಗಮನದಿಂದ ಮನದಲ್ಲಿ ಶಾಂತಿ, ವಿವೇಚನೆಯಿಂದ ಕಾರ್ಯವೆಸಗಿರಿ. ಸ್ವರ್ಣ, ಲೋಹ, ಗೃಹೋಪಕರಣಗಳ ವ್ಯವಹಾರದಲ್ಲಿ ಚೇತರಿಕೆ.
ಕುಂಭ: ನಿರೀಕ್ಷಿತ ಸ್ಥಾನವಲ್ಲದಿದ್ದರೂ ಸ್ಥಿತಿಗೆ ಮೋಸವಿಲ್ಲ. ಸಹೋದ್ಯೋಗಿಗಳೊಂದಿಗೆ ಅನಾವಶ್ಯಕವಾಗಿ ನಿಷ್ಠುರ ಕಟ್ಟಿಕೊಳ್ಳುವಿರಿ. ಕಾಳಜಿ ವಹಿಸಿರಿ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಪಡೆಯುವರು.
ಮೀನ: ಈ ವಾರವು ಕೊಂಚ ಆಶಾದಾಯಕವಾದೀತು. ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ ದೊರೆತು ನೆಮ್ಮದಿ ತಂದೀತು. ಆರೋಗ್ಯಭಾಗ್ಯ ಸುಧಾರಿಸಿದರೂ ಉದಾಸೀನತೆ ಸಲ್ಲದು. ನೂತನ ವಸ್ತು ಖರೀದಿ ಇದೆ.
ಎನ್.ಎಸ್ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.