![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 20, 2021, 7:05 AM IST
20-5-2021
ಮೇಷ: ವೃತ್ತಿರಂಗದಲ್ಲಿ ನಿಮ್ಮ ದುಡಿಮೆ ವೃತ್ತಿ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ದಿನಗಳಾಗಲಿವೆ. ಸದುಪಯೋಗಿಸಿಕೊಳ್ಳಿರಿ. ಸಾಂಸಾರಿಕವಾಗಿ ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವುದು ನಿಮ್ಮ ಮೇಲಿದೆ.
ವೃಷಭ: ರಾಜಕೀಯ ವರ್ಗದವರಿಗೆ ಎಷ್ಟೋ ದಿನಗಳಿಂದ ನಿರೀಕ್ಷಿಸಿರುವ ಕೆಲಸ ಕಾರ್ಯಗಳ ಚಾಲನೆಗೆ ಸೂಕ್ತ ಕಾಲವಿದು. ಗೃಹದಲ್ಲಿ ಮಿತ್ರ ಬಾಂಧವರ ಆಗಮನದಿಂದ ಸಂತಸವಾಗಲಿದೆ. ನಿಮ್ಮ ಕರ್ತವ್ಯವನ್ನು ಪಾಲಿಸಿರಿ.
ಮಿಥುನ: ಹಿನ್ನಡೆಗೊಂಡ ವೈವಾಹಿಕ ಸಂಬಂಧಗಳು ಪುಷ್ಟಿಗೊಳ್ಳಲಿದೆ. ತಾತ್ಕಾಲಿಕ ಉದ್ಯೋಗಗಳು ಖಾಯಂ ಆಗುವ ಸೂಚನೆ ತಂದೀತು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣ ಸಂಗ್ರಹವಾದರೂ ಎಚ್ಚರಿಕೆಯ ಅಗತ್ಯವಿದೆ.
ಕರ್ಕ: ವಿದ್ಯಾರ್ಥಿಗಳಿಗೆ ಬದಲಾವಣೆಯ ಸಾಧ್ಯತೆ ತೋರಿಬರುತ್ತದೆ. ವೃತ್ತಿರಂಗದಲ್ಲಿ ಅವಸರ, ದುಡುಕು ನಿರ್ಧಾರಗಳ ಬಗ್ಗೆ ಯೋಚಿಸುವಂತಾದೀತು. ಸಾಂಸಾರಿಕವಾಗಿ ಹೆಂಡತಿ, ಮಕ್ಕಳಿಂದ ಸಹಕಾರ ದೊರಕಲಿದೆ.
ಸಿಂಹ: ಆತ್ಮವಿಮರ್ಶೆಗೆ ಸಕಾಲವಿದು. ವೃತ್ತಿರಂಗದಲ್ಲಿ ಭವಿಷ್ಯ ನಿರ್ಧಾರವಾಗಲಿದೆ. ಆರ್ಥಿಕವಾಗಿ ವಿವಿಧ ರೀತಿಯ ಅನುಕೂಲಗಳು ತೋರಿಬರುತ್ತದೆ. ವೈವಾಹಿಕ ಮಾತುಕತೆಗಳು ನಿಮ್ಮ ಪರವಾಗಲಿದೆ.
ಕನ್ಯಾ: ಧಾರ್ಮಿಕವಾಗಿ, ಸಾಮಾಜಿಕವಾಗಿ ಹೊಸ ಆಯಾಮವಿದೆ. ಅರ್ಧಂಬರ್ಧಗೊಂಡ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲು ಇದು ಸಕಾಲವಾಗಿದೆ. ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಪ್ರಗತಿಯಿಂದ ಸಂತಸವಿದೆ.
ತುಲಾ: ಹಂತಹಂತವಾಗಿ ಶತ್ರುಗಳ ಪ್ರಭಾವವು ಕ್ಷೀಣಿಸಲಿದೆ. ಸಾಹಿತಿಗಳಿಗೆ ಬರವಣಿಗೆಯಿಂದ ಉತ್ತಮ ಆದಾಯವು ತೋರಿಬರುವುದು. ಕಾರ್ಯಕ್ಷೇತ್ರದಲ್ಲಿ ಆಗಾಗ ವಿಘ್ನಗಳು ತೋರಿಬರಲಿದೆ. ತಾಳ್ಮೆಯಿಂದ ವರ್ತಿಸಿರಿ.
ವೃಶ್ಚಿಕ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು. ವೃತ್ತಿರಂಗದಲ್ಲಿ ಹಿತಶತ್ರುಗಳಿಂದ ಆಗಾಗ ಮನಸ್ಸಿಗೆ ತೊಳಲಾಟವನ್ನು ಅನುಭವಿಸುವಂತಾದೀತು. ಶುಭವಿದೆ.
ಧನು: ಸಾಂಸಾರಿಕವಾಗಿ ಬೇಡಿಕೆ, ಈಡೇರಿಕೆಗಳ ಕಿರಿಕಿರಿಯ ಕಾಲವಿದು. ಕೌಟುಂಬಿಕವಾಗಿ ಸಂಬಂಧಗಳನ್ನು ಗಟ್ಟಿಗೊಳಿಸಬೇಕಾಗುತ್ತದೆ. ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯದ ಯೋಗ ತಂದೀತು. ಜಾಗ್ರತೆ ಅಗತ್ಯ.
ಮಕರ: ನಿಮ್ಮ ವೈಯಕ್ತಿಕ ವಿಚಾರದಲ್ಲಿ ನೀವೇ ಹತೋಟಿಯನ್ನು ಇಟ್ಟುಕೊಳ್ಳುವುದು ಅಗತ್ಯವಿದೆ. ಹಾಗೆಂದು ವೃತ್ತಿರಂಗದಲ್ಲಿ ನಿಮ್ಮ ಸ್ವಾಭಿಮಾನಕ್ಕೆ ತೀರಾ ಚ್ಯುತಿಯೇನೂ ತೋರಿಬಾರದು. ಸಿಟ್ಟು ಸಿಡುಕು ಅದುಮಿರಿ.
ಕುಂಭ: ನಿಮ್ಮ ಪರಿಶ್ರಮ, ಆತ್ಮವಿಶ್ವಾಸ, ದೃಢನಿರ್ಧಾರಗಳು ಕಾರ್ಯಸಾಧನೆಗೆ ಅನುಕೂಲವಿರುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುವೆಚ್ಚಗಳು ಅಧಿಕವಾಗಲಿದೆ. ಈ ಮಧ್ಯೆ ಅನಿರೀಕ್ಷಿತ ಧನಾಗಮನವಿದೆ.
ಮೀನ: ತಾಳ್ಮೆ ಸಮಾಧಾನದಿಂದ ಮಾತನ್ನುಆಡಿರಿ. ಇಲ್ಲದಿದ್ದಲ್ಲಿ ಕಷ್ಟವಾದೀತು. ಕೌಟುಂಬಿಕ ಸಮಸ್ಯೆಗಳು ಆಗಾಗ ಋಣಾತ್ಮಕ ಚಿಂತನೆಗೆ ಗುರಿ ಮಾಡಲಿದೆ. ಕಾರ್ಯರಂಗದಲ್ಲಿ ಎಡರುತೊಡರುಗಳಿದ್ದರೂ ಅಭಿವೃದ್ಧಿ ಇದೆ.
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.