![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 21, 2021, 7:12 AM IST
21-05-2021
ಮೇಷ: ಆಕಸ್ಮಿಕವಾಗಿ ಧನಾಗಮನದಿಂದ ಕಾರ್ಯಸಿದ್ಧಿ ಎನಿಸಿ ಮನೆಯಲ್ಲಿ ಧಾರ್ಮಿಕ ಹಾಗೂ ಶುಭಮಂಗಲ ಕಾರ್ಯಗಳಿಂದ ಮನಸ್ಸು ಉಲ್ಲಸಿತಗೊಳ್ಳಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು.
ವೃಷಭ: ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆದರೆ ಉತ್ತಮ ಎನಿಸಲಿದೆ. ಮಕ್ಕಳ ಆರೋಗ್ಯದತ್ತ ಗಮನಹರಿಸುವುದು ಅಗತ್ಯ. ದುಡುಕಿನಿಂದ ಕೆಟ್ಟ ಪರಿಣಾಮಗಳಿಗೆ ಕಾರಣರಾಗದಿರಿ. ಮನೆಯಲ್ಲಿ ಸಮಾಧಾನ ನೆಲೆಸಲಿದೆ.
ಮಿಥುನ: ಪ್ರೀತಿ ಪಾತ್ರರ ಸಮಾಗಮದಿಂದ ಉತ್ಸಾಹ ತೋರಿಬರಲಿದೆ. ವಾಹನ ಖರೀದಿ ಯಾ ಗೃಹ ಯಾ ಭೂಮಿ ಖರೀದಿದಾರರಿಗೆ ಅಧಿಕ ಧನವ್ಯಯವಾದರೂ ಸಮಾಧಾನವೆನಿಸಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದೆ.
ಕರ್ಕ: ಆರ್ಥಿಕವಾಗಿ ಅಭಿವೃದ್ಧಿಯು ಕಂಡು ಬರುವುದು. ಉದ್ಯೋಗಾಪೇಕ್ಷಿಗಳಿಗೆ ಆಕಸ್ಮಿಕ ಉದ್ಯೋಗ ಲಾಭ ಒದಗಿ ಬರಲಿದೆ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಆಪ್ತ ಸ್ನೇಹಿತರಿಂದ ನೆರವು ಕಂಡುಬಂದೀತು.
ಸಿಂಹ: ಕೃಷಿಕರಿಗೆ ಆಗಾಗ ಆರಂಭದ ಮಳೆಯಿಂದ ತುಸು ನೆಮ್ಮದಿ ಎನಿಸಿ ಸಾಧಕವಾಗಲಿದೆ. ಆಚಾರವಂತರಿಗೆ ದೂರದ ಕ್ಷೇತ್ರಗಳ ದರ್ಶನ ಭಾಗ್ಯ ದೊರೆತು ನೆಮ್ಮದಿ ತರಲಿದೆ. ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಲಿದೆ.
ಕನ್ಯಾ: ನಿಮ್ಮ ಕಾರ್ಯವೈಖರಿಗೆ ಸಹೋದ್ಯೋಗಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ನಿರುದ್ಯೋಗಿಗಳು ಉದ್ಯೋಗದ ಲಾಭವನ್ನು ಪಡೆದಾರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಮುಂದಾಳತ್ವ ವಹಿಸುವಿರಿ.
ತುಲಾ: ಉದ್ಯೋಗಿಗಳಿಗೆ ಕಚೇರಿಯ ಕೆಲಸಗಳು ನಿಮ್ಮ ಪರವಾಗಿ ಕಾರ್ಯ ಮಾಡಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರಕಲಿದೆ. ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗವು ಲಭಿಸಲಿದೆ. ಶುಭವಿದೆ.
ವೃಶ್ಚಿಕ: ಆರೋಗ್ಯ ಭಾಗ್ಯವು ಸಾವಕಾಶವಾಗಿ ಸುಧಾರಿಸಿ ತೃಪ್ತಿ ಎನಿಸಲಿದೆ. ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭವು ಸಿಗಲಿದೆ. ಆಕಸ್ಮಿಕ ವಿದೇಶ ಯಾನದ ಯೋಗದಿಂದ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ದೊರಕಲಿದೆ.
ಧನು: ಅತೀ ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನೆಯಿಂದ ಹೆಜ್ಜೆ ಇಟ್ಟಲ್ಲಿ ಜಯವು ನಿಮ್ಮ ಪಾಲಿಗಿರುತ್ತದೆ. ಬಹುದಿನಗಳಿಂದ ಕಾದು ಸೋತವರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ಸ್ವಲ್ಪ ಕಿರಿಕಿರಿ ಕಂಡುಬಂದೀತು.
ಮಕರ: ಆತ್ಮವಿಶ್ವಾಸ, ಸ್ವಪ್ರಯತ್ನದಲ್ಲಿ ನಂಬಿಕೆ ಇಟ್ಟಲ್ಲಿ ಕಾರ್ಯಸಿದ್ಧಿಯಾಗಲಿದೆ. ಸಾಂಸಾರಿಕವಾಗಿ ಸಮಾಧಾನದಿಂದ ಸುಧಾರಿಸಿಕೊಂಡು ಹೋಗುವುದು ಒಳಿತು. ಮಹಿಳೆಯರಿಗೆ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗಳು ಕಾಡಲಿದೆ.
ಕುಂಭ: ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿಬಂದು ವಿಶ್ವಾಸದ ದುರುಪಯೋಗವಾಗಲಿದೆ. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯಸಾಧಿಸಬೇಕು. ನಿಷ್ಠೂರ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ.
ಮೀನ: ಸಾಂಸಾರಿಕವಾಗಿ ಸಮಾಧಾನವಿದ್ದರೂ ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿಯು ತಪ್ಪಿದಲ್ಲಿ ದೂರ ಸಂಚಾರದ ಸಾಧ್ಯತೆ ಇದ್ದು ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ಧನವ್ಯಯವು ಹೆಚ್ಚಾಗಲಿದೆ
ಎನ್.ಎಸ್. ಭಟ್
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.