ಇಂದಿನ ಗ್ರಹಬಲ: ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು
Team Udayavani, May 25, 2021, 7:17 AM IST
25-05-2021
ಮೇಷ: ಜೀವನದಲ್ಲಿ ಮೂಡಿಬಂದ ಗೊಂದಲಗಳು ಹಂತಹಂತವಾಗಿ ತಿಳಿಯಾಗಲಿದೆ. ಕೆಲವೊಂದು ಕಡೆ ಕಣ್ಣು ಹಾಯಿಸುವಾಗ ಅದೃಷ್ಟದ ಅಲೆಯು ಕಂಡುಬರುವುದು. ಜಾಣತನದಿಂದ ಮುನ್ನಡೆಸಿರಿ ನಿಮ್ಮ ಪಯಣ.
ವೃಷಭ: ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು. ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿಸಿಕೊಳ್ಳಿರಿ. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ.
ಮಿಥುನ: ಆರ್ಥಿಕ ಪರಿಸ್ಥಿತಿಯು ಡೋಲಾಯಮಾನವಾಗಲಿದೆ. ಅತಿಯಾಗಿ ಚಿಂತಿಸದಿರಿ ಬಂದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿರಿ. ಶಾಂತಿ, ಸಹನೆ ಕಾಯ್ದುಕೊಂಡರೆ ನಿಮ್ಮ ಜೀವನವು ಸ್ವರ್ಗಮಯ.
ಕರ್ಕ: ದೂರ ಸಂಚಾರ ಯಾ ಚಾಲನೆಯಲ್ಲಿ ಗಮನವಿಡಿರಿ. ವಿಲಾಸೀ ವಸ್ತುಗಳ ಖರೀದಿಗೆ ಈ ಸಮಯವು ಸೂಕ್ತವಲ್ಲ. ನಿಮ್ಮಾಸೆಯನ್ನು ಸ್ವಲ್ಪ ಕಾಲ ಅದುಮಿಟ್ಟುಕೊಂಡರೆ ಉತ್ತಮ. ಮುಂದೆ ತನ್ನಿಂತಾನೆ ಉತ್ತಮ ಕಾಲ ಬರಲಿದೆ.
ಸಿಂಹ: ಒಡವೆ ವಸ್ತುಗಳ ಖರೀದಿಯಿಂದ ಗೃಹಿಣಿಗೆ ಸಂಭ್ರಮ ತಂದೀತು. ಶಾಸ್ತ್ರ ಪ್ರವೃತ್ತಿ , ಪುರೋಹಿತರಿಗೆ ಒಳ್ಳೆಯ ಉತ್ಪತ್ತಿ ಇರುತ್ತದೆ. ಸರಕಾರೀ ಕೆಲಸ ಕಾರ್ಯಗಳಲ್ಲಿ ತೊಡಕು ಕಾಣಿಸಿಕೊಂಡರೂ ಪೂರ್ಣವಾದೀತು.
ಕನ್ಯಾ: ಶೈಕ್ಷಣಿಕ ಕ್ಷೇತ್ರದವರಿಗೆ ಹೆಚ್ಚಿನ ಧನ ಸಂಗ್ರಹವಾದೀತು. ಸರಕಾರೀ ಕಡತ ವಿಲೇವಾರಿಯಲ್ಲಿ ಒತ್ತಡ ತಂದೀತು. ಪ್ರಯಾಣ ಕಂಡುಬಂದೀತು. ಆದರೂ ಅದರಲ್ಲಿ ಲಾಭವಿದೆ. ಮನಸ್ಸಿಗೆ ಸಮಾಧಾನ ತಂದೀತು.
ತುಲಾ: ಸಂಚಾರದಿಂದ ದೇಹಾಯಾಸಕ್ಕೆ ಕಾರಣವಾಗದಂತೆ ಹೆಚ್ಚಿನ ಜಾಗ್ರತೆ ವಹಿಸಬೇಕು. ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳ ಅಸೂಯೆಪಟ್ಟಾರು. ದೇಹಾರೋಗ್ಯ ಸುಧಾರಿಸಿದರೂ ಕಿರಿಕಿರಿ ತಪ್ಪದು. ಶ್ರೇಯೋಭಿವೃದ್ಧಿ ಆಗಲಿದೆ.
ವೃಶ್ಚಿಕ: ವ್ಯಾಪಾರಿಗಳು ಸಿಂಹಾವಲೋಕನ ಮಾಡಿಕೊಳ್ಳ ಬೇಕಾದೀತು. ರಾಜಕೀಯ ವೃತ್ತಿಯವರಿಗೆ ಮನಸ್ಸು ಸ್ಥಿರವಾಗಿರದು. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಅನುಕೂಲವಾದ ಫಲಿತಾಂಶ ಲಭಿಸುವುದು. ನಿಮಗೆ ಶುಭ ಸಮಾಚಾರವಿದೆ.
ಧನು: ಸಾಂಸಾರಿಕವಾಗಿ, ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬೇಕು. ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಅವಿವಾಹಿತರಿಗೆ ಇದು ಉತ್ತಮ ಕಾಲವಾಗಿದೆ. ಕಿರು ಸಂಚಾರವಿದೆ.
ಮಕರ: ಪ್ರವಾಸ ಯೋಗದಿಂದ ಸಂತಸ, ಸಮಾಧಾನ ತಂದು ಕೊಟ್ಟಿàತು. ಪ್ರಯತ್ನಬಲದಲ್ಲಿ ವಿಶೇಷ ರೂಪದಲ್ಲಿ ಯಶಸ್ಸು ನಿಶ್ಚಿತವಾದೀತು. ಆರೋಗ್ಯಕ್ಕಾಗಿ ಆಗಾಗ ಚಿಂತೆ ಬಿಟ್ಟರೆ ಉಳಿದೆಲ್ಲಾ ಶುಭವಾಗಿ ಪರಿಣಮಿಸಲಿದೆ.
ಕುಂಭ: ಭೂ ವ್ಯವಹಾರದಲ್ಲಿ ಧನ ವಿನಿಯೋಗ ಲೆಕ್ಕಕ್ಕಿಂತ ಹೆಚ್ಚಾದೀತು. ವ್ಯಾಪಾರ, ವ್ಯವಹಾರದಲ್ಲಿ ಸಾಲ ವಾಪಸಾತಿಯಿಂದ ನೆಮ್ಮದಿ ಇರುತ್ತದೆ. ಶೇರು ಮುಂತಾದ ವಿನಿಯೋಗದಲ್ಲಿ ಯೋಚಿಸಿ ಮುಂದುವರಿಯಬೇಕು.
ಮೀನ: ವಿದ್ಯಾರ್ಥಿಗಳಿಗೆ ಜಯದ ನಿರೀಕ್ಷೆಯು ಸಫಲವಾಗಲಿದೆ. ಮಡದಿಯ ಬಹುದಿನಗಳ ಕನಸುಗಳು ನನಸಾಗಲಿವೆ. ಅವಿವಾಹಿತರಿಗೆ ಇದು ಉತ್ತಮ ಕಾಲ. ಪ್ರವಾಸ ಯೋಗದಿಂದ ಸಂತಸ ಹಾಗೂ ಸಮಾಧಾನವಾಗಲಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ, ಅನವಶ್ಯ ಭೀತಿಯನ್ನು ದೂರವಿಡಿ
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.