ಈ ರಾಶಿಯವರಿಗಿಂದು ನೀವು ಎಣಿಸಿದ ಕೆಲಸ ಕಾರ್ಯಗಳು ಜರಗಿ ಸಂತಸ ದೊರಕಲಿದೆ
Team Udayavani, May 31, 2021, 7:15 AM IST
31-05-2021
ಮೇಷ: ಸದಾ ಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಮಾಡಲೇ ಬೇಕಾದೀತು. ಮುನ್ನಡೆಯಿರಿ.
ವೃಷಭ: ಉದ್ಯೋಗರಂಗದಲ್ಲಿ ಪದೇ ಪದೇ ಅನೇಕ ಎಡರುತೊಡರುಗಳು ಉಂಟಾಗಿ ಎಷ್ಟೇ ಕಿರಿಕಿರಿ ಉಂಟಾದರೂ ನಿಮ್ಮ ಅಭಿವೃದ್ಧಿಗೆ ಎನೂ ಅಡ್ಡ ಬರಲಾರದು. ಮನೆಮಂದಿಗಳ ಸಹಕಾರ ನಿಮಗೆ ಸದಾಕಾಲ ಇದೆ.
ಮಿಥುನ: ಸಾಂಸಾರಿಕವಾಗಿ ಪತ್ನಿ, ಪುತ್ರರು ನಿಮ್ಮೊಂದಿಗೆ ಇದ್ದುದೇ ನಿಮಗೆ ಸಂತಸವಾಗಲಿದೆ. ಸದಾ ಉದ್ವೇಗಕ್ಕೆ ಒಳಗಾಗುವ ನೀವು ಸ್ವಲ್ಪ ಸಮಾಧಾನ ತಂದುಕೊಳ್ಳಬೇಕು. ಮನೆಮಂದಿಯೊಡನೆ ಸರಸದ ಸಮಯ.
ಕರ್ಕ: ಉದ್ಯೋಗದ ಬದಲಾವಣೆ ಕುರಿತು ಆಲೋಚಿಸುವಿರಿ. ಆದರೆ ಈ ಸಮಯ ಸರಿಯಲ್ಲ. ನೀವು ಎಣಿಸಿದ ಕೆಲಸ ಕಾರ್ಯಗಳು ಜರಗಿ ಸಂತಸ, ಸಮಾಧಾನ ದೊರಕಲಿದೆ. ಬಂಧುಗಳ ಸಹಕಾರ ನಿಮಗಿದೆ.
ಸಿಂಹ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣ ಗೋಚರಕ್ಕೆ ಬರುವುದು. ದೂರ ಸಂಚಾರದಲ್ಲಿ ಉತ್ತಮ ಫಲಗಳು ಅನುಭವಕ್ಕೆ ಬರುತ್ತವೆ. ಕೆಲವು ವಿಷಯಗಳಲ್ಲಿ ಗೊಂದಲಗಳು ಸೃಷ್ಟಿಯಾಗಿ ಮನ ಕೆಡಿಸಲಿದೆ.
ಕನ್ಯಾ: ಉದ್ಯೋಗರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದವು ಮೂಡಿ ಬರಲಿದೆ. ಪ್ರೇಮಿಗಳು ಪ್ರೀತಿ ಪ್ರಣಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ನೆಮ್ಮದಿ ತರಲಿದೆ.
ತುಲಾ: ವಿದ್ಯಾರ್ಥಿಗಳು ಮುನ್ನಡೆಯನ್ನು ಸಾಧಿಸಲಿದ್ದಾರೆ. ಹಾಗೆಂದು ಉದಾಸೀನತೆ ಸಲ್ಲದು. ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಖರ್ಚುಗಳನ್ನು ಹೆಚ್ಚಿಸುವ ಕಾರ್ಯಕ್ಕೆ ಕೈಹಾಕದಿರಿ.
ವೃಶ್ಚಿಕ: ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತರೆ ಉತ್ತಮ. ಹಂತಹಂತವಾಗಿ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತಲೇ ಹೋಗುತ್ತದೆ. ತಾಳ್ಮೆ ಸಮಾದಾನವು ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ.
ಧನು: ಆತ್ಮವಿಶ್ವಾಸ ಹೆಚ್ಚಿದೆ ಎಂದು ಮನಸ್ಸಿಗೆ ತೋಚಿದನ್ನು ಮಾಡದಿರಿ. ಯಾವ ಕಾರ್ಯಕ್ಕೂ ಮುನ್ನ ಚಿಂತಿಸಿ, ಯೋಚಿಸಿ ಮುನ್ನಡೆಯಿರಿ. ವೃತ್ತಿರಂಗದಲ್ಲಿ ಕೆಲಸದ ಒತ್ತಡಗಳು ಹೆಚ್ಚಾದೀತು. ತಲೆ ಕೆಡಿಸದಿರಿ.
ಮಕರ: ನಿಮ್ಮಿಂದ ತಪ್ಪುಗಳಾಗದಂತೆ ಎಚ್ಚರಿಕೆಯ ನಡೆ ನಿಮ್ಮದಾಗಲಿ. ಆಪೆ¤àಷ್ಟರ ಕುರಿತಂತೆ ಮನದಲ್ಲಿ ಚಿಂತಿಸಲಿದ್ದೀರಿ. ಗೆಳೆತನವು ಹೊಸದಾಗಿ ಆಗಿದ್ದರೆ ಜಾಗ್ರತೆ ಮಾಡಿರಿ. ಪರಿಸ್ಥಿತಿ ಸುದಾರಿಸಲಿದೆ.
ಕುಂಭ: ಹಂತಹಂತವಾಗಿ ಅಭಿವೃದ್ಧಿಯು ಕಂಡು ಬಂದೀತು. ನಿಮ್ಮ ವ್ಯಕ್ತಿತ್ವವು ಇತರರನ್ನು ಆಕರ್ಷಣೆ ಮಾಡಲಿದೆ. ಇತರರ ಸಲಹೆಗಳನ್ನು ಕುರುಡಾಗಿ ಒಪ್ಪದಿರಿ. ನಿಮ್ಮ ಕರ್ತವ್ಯ ಮಾಡಿರಿ.
ಮೀನ: ಕರ್ತವ್ಯಗಳಿಂದ ವಿಮುಖರಾಗದಿರಿ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಅಡೆತಡೆಗಳಿಂದಲೇ ಮುಂದುವರಿಯಲಿದೆ. ಕುಟುಂಬಿಕವಾಗಿ ಅನಿರೀಕ್ಷಿತ ವರ್ತನೆಯಿಂದ ಅಸಹನೆ ಮೂಡಿಸಲಿದ್ದೀರಿ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.