ಈ ರಾಶಿಯವರಿಗಿಂದು ಜೀವನ ಶೈಲಿಯು ಬದಲಾಗುವ ಪ್ರಸಂಗ ಕಂಡು ಬಂದೀತು!
Team Udayavani, Jun 5, 2021, 7:22 AM IST
5-6-2021
ಮೇಷ: ಸಾಂಸಾರಿಕವಾಗಿ ಸಂಬಂಧಗಳು ಸಡಿಲಗೊಳ್ಳಲಿವೆ. ಪ್ರಬುದ್ಧರಾಗಿ ಚಿಂತಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ದಿನಗಳು ಸರಾಗವಾಗಿ ನಡೆದು ಹೋದರೂ ಕಿರಿಕಿರಿ ತಪ್ಪಲಾರದು. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಚಿಂತಿಸಬೇಕಾಗುತ್ತದೆ.
ವೃಷಭ: ನಿಮಗೆ ಮಹತ್ವದ ದಿನಗಳಿವು. ಪ್ರೀತಿಪಾತ್ರರೊಂದಿಗೆ ಆತ್ಮೀಯವಾಗಿ ದಿನ ಕಳೆಯುವಂತಾದೀತು. ವೃತ್ತಿರಂಗದಲ್ಲಿ ನಾನಾ ರೀತಿಯಲ್ಲಿ ಸಮಸ್ಯೆಗಳು ತೋರಿಬಂದರೂ ಎದುರಿಸುವ ಛಾತಿ ನಿಮಗಿರುತ್ತದೆ. ವಿಶ್ವಾಸದಿಂದಿರಿ.
ಮಿಥುನ: ಗ್ರಹಗತಿಗಳು ನಿಮಗೆ ಪೂರಕವಾಗಿರುತ್ತದೆ. ಎಲ್ಲಾ ರೀತಿಯಲ್ಲಿ ಮುನ್ನಡೆ ಕಂಡುಬರುವುದು. ಆದರೆ ಅದನ್ನು ಗಿಟ್ಟಿಸಿಕೊಳ್ಳುವ ಯೋಗ ನಿಮಗೆ ಬೇಕು. ಖಾಸಗಿ ಬದುಕಿನಲ್ಲಿ ಸಣ್ಣಪುಟ್ಟ ನಿರಾಸೆಗಳು ಕಂಡುಬರಲಿದೆ.
ಕರ್ಕ: ಜೀವನ ಶೈಲಿಯು ಬದಲಾಗುವ ಪ್ರಸಂಗ ಕಂಡು ಬಂದೀತು. ನಿವೇಶನ ಖರೀದಿಯ ಕುರಿತು ಮಾತುಕತೆ ಈಗ ಬೇಡ. ನಿಮ್ಮ ಅಭಿವೃದ್ಧಿಗೆ ಪೂರಕವಾಗುವ ವಾತಾವರಣ ಕಂಡುಬರುತಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.
ಸಿಂಹ: ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲದಾಯಕ ಕೆಲಸವಾಗಲಿದೆ. ಎಲ್ಲ ಕೆಲಸಕಾರ್ಯಗಳಲ್ಲಿ ಮುನ್ನಡೆಯಾದಾಗ ಯೋಜನೆಗಳನ್ನು ರೂಪಿಸಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಲ್ಲಲಿದೆ. ಭಡ್ತಿಯ ಸಂಭವವೂ ಇದೆ.
ಕನ್ಯಾ: ಸಾಂಸಾರಿಕ ಸಂಬಂಧಗಳು ನೀವು ಬಯಸಿದಂತೆ ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಗೆಳೆಯರಿಂದ ನೆರವು ಕಂಡು ಬರಲಿದೆ. ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲದಾಯಕ ಕೆಲಸವು ಆಗಲಿದೆ. ದೃಢ ಹೆಜ್ಜೆ ಇಟ್ಟು ಮುನ್ನಡೆಯಿರಿ.
ತುಲಾ: ಇತರರೊಂದಿಗೆ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆ ಇಟ್ಟಲ್ಲಿ ತಪ್ಪುಗಳು ನಡೆಯದಾದಾವು. ದುಡುಕಿ ತಪ್ಪು ಹೆಜ್ಜೆ ಇಟ್ಟಲ್ಲಿ ಪ್ರತಿಕೂಲ ಪರಿಣಾಮವು ಉಂಟಾಗಲಿದೆ. ವೃತ್ತಿರಂಗದಲ್ಲಿ ಸಹನೆಯಿಂದ ಮುನ್ನಡೆಯಬೇಕು .
ವೃಶ್ಚಿಕ: ಪ್ರಮುಖ ವಿಷಯಗಳಲ್ಲಿ ನಿರ್ಧರಿಸುವ ಹಾಗೂ ವ್ಯಕ್ತಪಡಿಸುವುದರಲ್ಲಿ ಹಿಂಜರಿಕೆ ಮಾಡದಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಉದಾಸೀನತೆಯನ್ನು ಬಿಡತಕ್ಕದ್ದು. ಕೌಟುಂಬಿಕವಾಗಿ ಯಾರೊಂದಿಗೂ ಸಂಘರ್ಷ ಬೇಡ.
ಧನು: ಅವಿವಾಹಿತರಿಗೆ ಆಗಾಗ ಹಿನ್ನಡೆ ತೋರಿಬಂದು ನಿರಾಶೆ ಮನೋಭಾವದಿಂದ ಮನಸ್ಸು ಮುದುಡಲಿದೆ. ಮಾನಸಿಕ ಚಿಂತನೆ ಹೆಚ್ಚು ಮಾಡದಿರಿ. ಧನಾತ್ಮಕವಾಗಿ ಆಲೋಚನೆ ಮಾಡಿರಿ. ಫಲಿತಾಂಶವು ಉತ್ತಮವಾಗಿರುತ್ತದೆ.
ಮಕರ: ಒಮ್ಮೊಮ್ಮೆ ಅತೀಯಾದ ವ್ಯಾಮೋಹವು ಮಕ್ಕಳ ಬುದ್ಧಿಯನ್ನು ಕೆಡಿಸಲಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ? ಎನ್ನುವಂತಾದೀತು. ಕೋಪದ ಕೈಗೆ ಬುದ್ಧಿ ಕೊಡದಿರಿ. ಕಾರ್ಯ ಒತ್ತಡದಿಂದ ಅಸಹನೆ ಕಾಡಬಹುದು.
ಕುಂಭ: ಚಿಂತೆಯು ಅತಿಯಾಗಿ ಮನಸ್ಸನ್ನು ಕಾಡಲಿದೆ. ಕೌಟುಂಬಿಕವಾಗಿ ಸಮಾಧಾನ, ವ್ಯವಧಾನ ಇಲ್ಲದ ವಾತಾವರಣವು ಕಂಡು ಬರಲಿದೆ. ಹಲವು ತೊಡಕುಗಳು ಕಂಡುಬಂದರೂ ನಿಧಾನವಾಗಿ ಎಲ್ಲವೂ ತಿಳಿಯಾದೀತು.
ಮೀನ: ಕಾರ್ಯರಂಗದಲ್ಲಿ ನೀವು ಹೊಂದಿರುವ ದೂರದೃಷ್ಟಿ ನಿಮ್ಮ ನೆರವಿಗೆ ಬರಲಿದೆ. ವಿರೋಧಿಗಳನ್ನು ಎದುರಿಸುವಾಗ ನಿಮ್ಮ ನಿಲುವು ದೃಢವಾಗಿರಲಿ. ಸ್ನೇಹಿತರೊಂದಿಗೆ ಜಗಳಕ್ಕೆ ಕಾರಣರಾಗದಿರಿ. ಆಕಸ್ಮಿಕ ಧನಾಗಮನವಿದೆ
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
Horoscope : ಈ ರಾಶಿಯವರು ವಾಹನ ಚಾಲನೆಯಲ್ಲಿ ಎಚ್ಚರ ವಹಿಸಿ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.