ನಿಮ್ಮ ಗ್ರಹಬಲ: ನಿಮ್ಮ ಇಂದಿನ ರಾಶಿ ಭವಿಷ್ಯ
Team Udayavani, Jan 2, 2021, 7:37 AM IST
2-01-2021
ಮೇಷ: ಖಚಿತ ನಿರ್ಧಾರಕ್ಕೆ ಬರಲಾಗದಂತಹ ಪರಿಸ್ಥಿತಿ. ಆತಂಕದಿಂದಲೇ ಕಾರ್ಯಸಿದ್ಧಿಯಾಗಲಿದೆ. ಮಧ್ಯವರ್ತಿಯಾಗಬೇಕಾದ ಸಂದಿಗ್ಧ ಪರಿಸ್ಥಿತಿ. ಅಪ್ತೇಷ್ಟರ ವಲಯದಲ್ಲಿ ನಿಮಗೆ ಮಾನ್ಯತೆ ಸಿಗಲಿದೆ.
ವೃಷಭ: ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಆರ್ಥಿಕ ಅಡಚಣೆ ನಡುವೆಯೇ ಇಚ್ಛಿತ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯನಿಮಿತ್ತ ಸಂಭ್ರಮ. ಆತ್ಮೀಯರಿಂದ ಪ್ರಶಂಸೆ.
ಮಿಥುನ: ವಿಶೇಷವಾದ ಆಸಕ್ತಿಯಿಂದ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಕಾಲದಲ್ಲಿ ಸರಿಯಾದ ನಿರ್ಧಾರದಿಂದ ಮನತೃಪ್ತಿ ಸಿಗಲಿದೆ. ಬಂಧುಮಿತ್ರರ ಆಗಮನದಿಂದ ಖರ್ಚುವೆಚ್ಚ ಹೆಚ್ಚಾಗಲಿದೆ.
ಕರ್ಕ: ಋಣ ಪರಿಹಾರಾರ್ಥ ಪ್ರಗತಿಪರ ಚಟುವಟಿಕೆಗಳು ಕಂಡುಬಂದಾವು. ಅಜೀರ್ಣ, ಉದರ ಉಪದ್ರವಗಳು ನಿಮ್ಮನ್ನು ಕಾಡಲಿದೆ. ಆತ್ಮೀಯರ ಆಕಸ್ಮಿಕ ಭೇಟಿಯಿಂದ ಸಂತಸವಾದೀತು. ದಿನಾಂತ್ಯ ಶುಭವಿದೆ.
ಸಿಂಹ: ವಿಲಾಸೀ ಸಾಮಾಗ್ರಿಗಳ ಖರೀದಿಯಿಂದ ಸಂತೃಪ್ತಿ ಸಿಗಲಿದೆ. ಮನೋಕಾಮನೆ ಪೂರೈಕೆಯಿಂದ ಮನಸ್ಸಿಗೆ ಸಮಾಧಾನ ದೊರಕಲಿದೆ. ಗೃಹ ಖರೀದಿ, ಯಾ ನಿವೇಶನ ಖರೀದಿಯು ಕಂಡುಬಂದೀತು. ಮುನ್ನಡೆಯಿರಿ.
ಕನ್ಯಾ: ಆತ್ಮೀಯರಿಂದ ನೆರವಿನ ಹಸ್ತ ಕಂಡುಬರಲಿದೆ. ವೃತ್ತಿರಂಗದಲ್ಲಿ ನಿರೀಕ್ಷಿತ ಬಾಹ್ಯ ನೆರವು ಲಭ್ಯವಾಗಲಿದೆ. ಕೀಳರಿಮೆ, ದೌರ್ಬಲ್ಯಗಳಿಂದ ಚೇತರಿಸಿಕೊಳ್ಳಲಿರುವ ಸೂಚನೆ ಕಂಡುಬಂದು ಸಮಾಧಾನ.
ತುಲಾ: ಲಾಭಯುಕ್ತ – ವ್ಯವಹಾರದಲ್ಲಿ ಜಯಶೀಲರಾಗುವಿರಿ. ಕುಟುಂಬದಲ್ಲಿ ಶುಭ ಮಂಗಲ ಕಾರ್ಯದ ಚಟುವಟಿಕೆ ಕಂಡುಬರಲಿದೆ. ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರ ದೃಷ್ಟಿಯಿಂದ ಪಾರಾಗುವಿರಿ.
ವೃಶ್ಚಿಕ: ಅಜಾಗ್ರತೆಯಿಂದ ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ ಕಂಡುಬರಲಿದೆ. ಅನಗತ್ಯವಾದ ವೆಚ್ಚವನ್ನು ಕಡಿಮೆ ಮಾಡಿರಿ. ಮಾನಸಿಕವಾಗಿ ನಿಮಗೆ ಕಿರಿಕಿರಿ ಕಂಡುಬಂದೀತು. ನೆಮ್ಮದಿಗಾಗಿ ಪ್ರಾರ್ಥಿಸಿರಿ.
ಧನು: ಅಸಮರ್ಥನೆಯ ಭಾವನೆಯಿಂದ ಮನೋಚಾಂಚಲ್ಯ ಕಾಡಲಿದೆ. ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುವುದು ಮುಖ್ಯ. ನಿರೀಕ್ಷಿತ ಮೂಲಗಳಿಂದ ಧನಾಗಮನವು ಕಂಡುಬಂದೀತು. ಕಿರು ಪ್ರಯಾಣವಿದೆ.
ಮಕರ: ಅನಗತ್ಯವಾದ ವಿಷಯಗಳಲ್ಲಿ ನಿಮ್ಮ ಆಗಮನ ಬೇಡ. ದೈಹಿಕ ಶ್ರಮ ಕಂಡು ಬರುವುದು. ನಿಮ್ಮ ಭಾವನೆಗಳಿಗೆ ಒಳ್ಳೆಯ ಬೆಲೆ ಬರಲಿದೆ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಚರ್ಚೆ.
ಕುಂಭ: ಹೊರೆಯಾಗಲಿರುವ ಹೊಣೆಗಾರಿಕೆಯಿಂದ ಮನಸ್ಸು ರೋಸಿ ಹೋದೀತು. ವೃತ್ತಿರಂಗದಲ್ಲಿ ಪರಿಸ್ಥಿತಿ ಅನುಗುಣವಾಗಿ ಚರ್ಚಿಸಬೇಕಾದ ಸಂದಿಗ್ದಿತೆ. ಅಧಿಕಾರದಲ್ಲಿರುವ ಮಿತ್ರರಿಂದ ಉಪಯುಕ್ತ ಕೊಡುಗೆ ಸಿಗಲಿದೆ.
ಮೀನ: ಕುಟುಂಬದಲ್ಲಿ ಶುಭ ಕಾರ್ಯ ನಿಮಿತ್ತ ಸಂತಸವಾಗಲಿದೆ. ವಿವಾದದಲ್ಲಿ ತಟಸ್ಥ ನಿಲುವು ತಾಳಿರಿ. ಅನುಕಂಪ ಗಳಿಸುವ ಯತ್ನದಲ್ಲಿ ಹಾಸ್ಯಕ್ಕೆ ಗುರಿಯಾಗಬೇಕಾದ ಸನ್ನಿವೇಶ ಎದುರಾಗಲಿದೆ. ಜಾಗ್ರತೆ ಮಾಡಿರಿ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.